karnataka

ಇ.ಡಿ ಎಲ್ಲಿಯೂ ಸಿಎಂ ಸಿದ್ಧರಾಮಯ್ಯನವರ ಹೆಸರನ್ನು ಬಿಂಬಿಸಿಲ್ಲ

Share

ಇ.ಡಿ ಎಲ್ಲಿಯೂ ಸಿಎಂ ಸಿದ್ಧರಾಮಯ್ಯನವರ ಹೆಸರನ್ನು ಬಿಂಬಿಸಿಲ್ಲ. ಬಿಜೆಪಿ ಮೊದಲಿನಿಂದಲೂ ಸಿಎಂ ಸಿದ್ಧರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿದೆ. ಇದರಲ್ಲಿ ಹೊಸದೆನಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಗಾಂಧಿ ಭಾರತ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದ ಮೈಲಿಗಲ್ಲು. ಪ್ರಪಂಚದ ಯಾವುದೇ ರಾಜಕೀಯ ಪಕ್ಷದಲ್ಲಿ ಇಂತಹ ಬೆಳವಣಿಗೆಗಳು ಬಹಳ ವಿರಳ. ನೂರಾರು ವರ್ಷ ಇರುವಂತಹ ಪಕ್ಷಗಳು ಬಹಳ ಕಡಿಮೆ. ಕಾಂಗ್ರೆಸ್ ಪಕ್ಷದ ಇತಿಹಾಸವನ್ನ ಮತ್ತೊಮ್ಮೆ ನೆನಪಿಸಿಕೊಳ್ಳಲಾಗುತ್ತಿದೆ ಎಂದರು.

ಇನ್ನು ಬೇನಾಮಿ ಹೆಸರಲ್ಲಿ 600 ಸೈಟು ಹಂಚಿಕೆ ಹಿನ್ನೆಲೆ ಇಡಿಯವರು ಎಲ್ಲ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಬಿಜೆಪಿಯವರು ಸಿಎಂ ರಾಜೀನಾಮೆಗೆ ಒತ್ತಾಯಿಸುತ್ತಿರುವುದಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಬಿಜೆಪಿಯವರು ಮೊದಲಿನಿಂದಲೂ ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಇದು ಹೊಸದೇನಲ್ಲ. ಕಾನೂನು ಪ್ರಕಾರ ಇಡಿ ಕ್ರಮಕೈಗೊಳ್ಳುತ್ತದೆ. ಇಡಿ ಅವರು ಮುಟ್ಟುಗೋಲು ಹಾಕಿದ ಸೈಟುಗಳಲ್ಲಿ ಸಿದ್ಧರಾಮಯ್ಯನವರ ಸೈಟು ಇದೆಯೇ? ಇಡಿ ಎಲ್ಲಿಯೂ ಸಿದ್ಧರಾಮಯ್ಯ ಹೆಸರನ್ನು ಬಿಂಬಿಸಿಲ್ಲ ಎಂದರು.

ಇನ್ನು ದಲಿತ ನಾಯಕ ಸಭೆ ಕುರಿತು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು.

Tags:

error: Content is protected !!