Belagavi

ಕುಡಚಿ ಪ್ರಿಮಿಯರ್ ಲೀಗ್ ಗೆದ್ದು ಬೀಗಿದ ಟೈಗರ್ ಕ್ರಿಕೆಟರ್ಸ್ ಜಿ.ಟಿ.ಎಂ ಸ್ಫೋರ್ಟ್ ರನ್ನರ್ ಅಪ್…

Share

ಬೆಳಗಾವಿಯ ಬಸವಣ ಕುಡಚಿಯಲ್ಲಿ ಸಮಾಜ ಸೇವಕ ಪರಶರಾಮ್ ಬೇಡಕಾ ಮತ್ತು ಹಿರೇಮಠ ಗ್ರುಪನ ಪ್ರಾಯೋಜಕತ್ವದಲ್ಲಿ ಬಸವಣ ಕುಡಚಿ ಪ್ರಿಮೀಯರ್ ಲೀಗ್ ಟೂರ್ನಾಮೆಂಟನ್ನು ಆಯೋಜಿಸಲಾಗಿತ್ತು.
ಮೊದಲಗೆ ಬ್ಯಾಟೀಂಗ್ ಆಯ್ಕೆ ಮಾಡಿ ಜಿಟಿಎಂ ಸ್ಫೋರ್ಟ್ಸ್ ತಂಡವು 5 ಓವರನಲ್ಲಿ 53 ರನ್ ಗಳಿಸಿದ ಟೈಗರ್ ಕ್ರಿಕೆಟರ್ಸ್ ತಂಡಕ್ಕೆ ಸವಾಲು ಹಾಕಿತು. ಕಿರಣ ಶಂಕರಗೌಡ 101 ರನ ಗಳಿಸಿ ಮ್ಯಾನ್ ಆಫ್ ದಿ ಮ್ಯಾಚ್ ಹಾಗು ಲಕ್ಕಿ ಮುಚ್ಚಂಡಿಕರ ಅತ್ಯುತ್ತಮ ಬ್ಯಾಟ್ಸಮನ್ ಆಗಿ

ಹೊರಹೊಮ್ಮಿದರು. ಭಾನುವಾರ ಅಂತಿಮ ಹಣಾಹಣಿಯಲ್ಲಿ ಮೊದಲಿಗೆ ಬಾಲಿಂಗ್ ಆಯ್ಕೆ ಮಾಡಿ ಜಿಟಿಎಂ ಸ್ಫೋರ್ಟ್ಸ್ ತಂಡವು 5 ಓವರನಲ್ಲಿ 52 ರನ್ ಗಳಿಸಿತು. ಜಿಟಿಎಂ ಸ್ಫೋರ್ಟ್ಸನ ಕ್ಯಾಪ್ಟನ್ ಲಕ್ಕಿ ಮುಚ್ಚಂಡಿಕರ ರನ್ನುಗಳ ಸುರಿಮಳೆಗೈದರು.


ಟೈಗರ ಕ್ರಿಕೆಟರ್ಸನ ಕಿರಣ ಶಂಕರಗೌಡ ಅವರು 5 ಬಾಲನಲ್ಲಿ 5 ಬಾರಿ ಫೋರ್ ಬಾರಿಸಿದರು. ಟೈಗರ್ ಕ್ರಿಕೆಟಿಗರಿಗೆ 6 ಎಸೆತಗಳಲ್ಲಿ 3 ರನ್ ಅಗತ್ಯವಿತ್ತು, ಕೊನೆಯ ಓವರ್‌ನಲ್ಲಿ ಸಂಜು ಒಂದು ಎಸೆತಕ್ಕೆ ಒಂದು ರನ್ ಗಳಿಸಿ ಪಂದ್ಯವನ್ನು ಗೆದ್ದರು.


ಪಂದ್ಯ ತೀರಾ ಹತ್ತಿರವಾಗಿದ್ದರಿಂದ ಕ್ರಿಕೆಟ್ ಪ್ರೇಮಿಗಳು ಸಖತ್ ಎಂಜಾಯ್ ಮಾಡಿದ್ದು ಎಸ್ ವಿಜೆ ತಂಡ ಮೂರನೇ ಸ್ಥಾನ ಪಡೆದು ತೃಪ್ತಿಪಟ್ಟುಕೊಂಡಿದೆ. ಮಹೇಶ ಇಟಗೇಕರ ಮತ್ತು ರಾಜು ಚೌಗುಲೆ ಸ್ವಾಗತಿಸಿರು. ಮಾಜಿ ಶಾಸಕ ಅನಿಲ ಬೆಣಕೆ, ಸಮಾಜ ಸೇವಕ ಪರಶುರಾಮ ಬೇಡಕಾ, ರಾಜಶೇಖರ್ ಹಿರೇಮಠ, ಶಂಕರ ರಾವಳುಚೆ ಬಹುಮಾನ ವಿತರಿಸಿದರು. ಈ ವೇಳೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನೀಲ ಬೆನಕೆ ಮಾರ್ಗದರ್ಶನ ಮಾಡಿದರು.

 


ಈ ಸಂದರ್ಭದಲ್ಲಿ ಪರಾಶರಾಮ ಬೇಡಕಾ, ಬಸವಂತ ಕೌಲಗಿ, ಯಲ್ಲಪ್ಪ ಮುಚ್ಚಂಡಿಕರ, ಸಂಭಾಜಿ ಗಿರಿ, ಜೋತಿಬಾ ಮುತಗೇಕರ, ಡಾ.ಅಮೀತ ಹಮ್ಮನವರ, ಅಭಯ ಕಿತ್ತೂರ, ಬಾಬು ಬೇಡಕಾ, ಬಾಳು ಬೇಡಕಾ, ಯಲ್ಲಪ್ಪ ಹಲಗೇಕರ, ಕೃಷ್ಣ ದೀವಟೆ, ವಿಶ್ವನಾಥ ಬಡಿಗೇರ್, ಸಂಜು ಬಡಿಗೇರ್, ಭರ್ಮು ವಂದೇರೋಟಿ, ಸುನೀಲ್ ಗಿರಿ ಹಾಗೂ ಗ್ರಾಮದ ಕ್ರಿಕೆಟ್ ಪ್ರೇಮಿಗಳು ಉಪಸ್ಥಿತರಿದ್ದರು.

Tags:

error: Content is protected !!