Belagavi

ಕುಂಭಮೇಳದಲ್ಲಿ ಕಾಲ್ತುಳಿತ; ಬೆಳಗಾವಿಯ ತಾಯಿ-ಮಗಳು ಸಾವು…

Share

ಪ್ರಯಾಗರಾಜನ ಕುಂಭಮೇಳದಲ್ಲಿ ನಾಪತ್ತೆಯಾಗಿದ್ದ ಬೆಳಗಾವಿಯ ತಾಯಿ ಮತ್ತು ಮಗಳು ಸಾವನ್ನಪ್ಪಿದ್ದಾರೆಂದು ಮಾಹಿತಿ ದೊರೆತಿದೆ.

ಬೆಳಗಾವಿಯ ನಿವಾಸಿ ಜ್ಯೋತಿ ಹತ್ತರವಾಠ (50) ಮತ್ತು ಅವರ ಮಗಳು ಮೇಘಾ ಹತ್ತರವಾಠ್‌ ಪ್ರಯಾಗರಾಜನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗಿಯಾಗಿದ್ದರು. ಅಲ್ಲಿ ನಡೆದ ಕಾಲ್ತುಳಿತದ ವೇಳೆ ತಾಯಿ ಮತ್ತು ಮಗಳು ನಾಪತ್ತೆಯಾಗಿದ್ದರು. ಬೆಳಗಾವಿಯಲ್ಲಿರುವ ಕುಟುಂಬಸ್ಥರಿಗೂ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಫೋನ್‌ ರಿಂಗ್ ಆಗತಿದ್ದರೂ ರಿಸೀವ್ ಮಾಡದ ಹಿನ್ನೆಲೆಯಲ್ಲಿ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿತ್ತು. ಆದರೀಗ ಇವರಿಬ್ಬರೂ ಸಾವನ್ನಪ್ಪಿದ ಮಾಹಿತಿ ದೊರೆತಿದೆ.

ಮೂರು ದಿನಗಳ ‌ಹಿಂದೆ ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ ಇವರು ಪ್ರಯಾಗರಾಜಗೆ ಪ್ರಯಾಣ ಬೆಳೆಸಿದ್ದರು. ಇವರೊಂದಿಗೆ
ಇನ್ನು 12 ಜನ ಪ್ರಯಾಣಿಸುತ್ತಿದ್ದರೆಂದು ತಿಳಿದು ಬಂದಿದೆ.

Tags:

error: Content is protected !!