Belagavi

ಕಾಂಗ್ರೆಸ್ ಭವನ ಶ್ರೇಯ ಪಡೆಯುತ್ತಿದ್ದ ಬೇರೆಯವರನ್ನು ವಿರೋಧಿಸಿದ ಸತೀಶ ಜಾರಕಿಹೊಳಿ ಅವರಿಗೆ ಧನ್ಯವಾದ ; ಶಾಸಕ ರಮೇಶ್ ಜಾರಕಿಹೊಳಿ

Share

ಬೆಳಗಾವಿ ಕಾಂಗ್ರೆಸ್ ಭವನ ನಿರ್ಮಾಣ‌‌ ಮಾಡಲು 1 ಕೋಟಿ ರೂ. ಹಣವನ್ನು ಸ್ವಂತ ಹಣ ಕೊಟ್ಟಿದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ಬುಧವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಶಾಸಕನಾಗಿದ್ದಾಗ ಕಾಂಗ್ರೆಸ್ ‌ಭವನ ನಿರ್ಮಾಣ‌ ಮಾಡಲು 25 ಲಕ್ಷ ರೂ. ನೀಡಿದ್ದೆ. ಬಳಿಕ‌ ಸಚಿವನಾದ ಮೇಲೆ 1 ಕೋಟಿ ರೂ. ಹಣ ನೀಡಿದ್ದೇನೆ. ಎಲ್ಲ ಜಿಲ್ಲೆಯ‌ ಶಾಸಕರು 25 ಲಕ್ಷ ನೀಡಿದ್ದಾರೆ. ಆದರೆ ಹೆಬ್ಬಾಳ್ಕರ್ ಎಷ್ಟು ಹಣ ಕೊಟ್ಟಿದ್ದಾರೆ‌ ಎಂದು ನನಗೆ ಗೊತ್ತಿಲ್ಲ ಎಂದರು.

ಮೊನ್ನೆ ಕಾಂಗ್ರೆಸ್ ಪಕ್ಷದ ಸಿಎಲ್‌ಪಿ ಸಭೆ ನಡೆದಿತ್ತು. ಸನ್ಮಾನ್ಯ ಡಿಕೆ ಶಿವಕುಮಾರ್ ರಾಜ್ಯದ ಜನರಿಗೆ ತಪ್ಪು ಸಂದೇಶ ಕೊಟ್ಟಿದ್ದರು.ಈ ವೇಳೆ ಸತೀಶ್ ಜಾರಕಿಹೊಳಿ‌ ಮಧ್ಯಪ್ರವೇಶಿಸಿ ಸ್ಪಷ್ಟನೆ ಮಾಡಿದ್ದರು. ಸಭೆಯಲ್ಲಿ ನನ್ನ ಹೆಸರು ಪ್ರಸ್ತಾಪ ಆಗಿದ್ದರಿಂದ ಸ್ಪಷ್ಟನೆ ಕೊಡುತ್ತಿದ್ದೇನೆ. ನಾನು ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದಾಗ. ಪರಮೇಶ್ವರ್ ಅವರು ಆ ವೇಳೆ ಅಧ್ಯಕ್ಷರಾಗಿದ್ದರು. ಬೆಳಗಾವಿಯಲ್ಲಿ ಕಾಂಗ್ರೆಸ್ ಭವನ ಆಗಲು ಲಕ್ಷ್ಮೀ ಹೆಬ್ಬಾಳ್ಕರ್ ಕಾರಣ ಅಂತಾ ಡಿಕೆಶಿ ಹೇಳಿದ್ದರು.

ಸತೀಶ್ ಜಾರಕಿಹೊಳಿ‌ಗೆ ವಿರೋಧ ಮಾಡುವ ಶಕ್ತಿ ಕೊಟ್ಟಿದ್ದಕ್ಕೆ ಧನ್ಯವಾದ ಹೇಳುತ್ತೇನೆ ಎಂದರು. ಡಿಕೆ ಶಿವಕುಮಾರ್ ವಿರೋಧ ಮಾಡಿದ್ದಕ್ಕೆ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. 2013-18ರ ವರೆಗೆ ಕಾಂಗ್ರೆಸ್ ಪಕ್ಷದ ಕಚೇರಿ ಆಗಿದ್ದರ ಬಗ್ಗೆ ಹೇಳಿದ್ದರು‌‌. ಈ ಸಂದರ್ಭದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲಾಧ್ಯಕ್ಷೆ ಇದ್ದರೂ ಅಂದು ಕಟ್ಟಡ ನಿರ್ವಹಣೆ ಕಮಿಟಿ ಅಧ್ಯಕ್ಷರಾಗಿ ಮಹಾದೇವಪ್ಪ ಇದ್ದರು. ಆಗ ನಾನು ಶಾಸಕನಾಗಿದ್ದೆ, ಹೆಬ್ಬಾಳ್ಕರ್ ನಾವು ಒಂದು ಟೀಮ್ ಆಗಿ ಕೆಲಸ ಮಾಡುತ್ತೇವು ಎಂದರು‌.

ಶಂಕ್ರಾನಂದ ಅವರ ಹೆಸರಿನಲ್ಲಿ ಜಾಗ ಇದ್ದು ಅವರ ಮಕ್ಕಳಿಗೆ ಜಾಗ ನೀಡುವಂತೆ ಕನ್ವೆನ್ಸ್ ಮಾಡಿದ್ದೆ. ಆರ್‌ಟಿಒ ಸರ್ಕಲ್ ನಲ್ಲಿ ಜಾಗ ಬಿಟ್ಟು ಕೊಡುವಂತೆ ಕನ್ವೆನ್ಸ್ ಮಾಡಿದೆ.ಬಳಿಕ ಕ್ಯಾಬಿನೆಟ್ ಗೆ ತಂದು ಆ ಜಾಗ ಮಂಜೂರು ಮಾಡಿಸಿದೆ. ನಾನು 54 ಲಕ್ಷ ಜಾಗಕ್ಕೆ ಹಣ ನೀಡಿ ಖರೀದಿ ಪ್ರಕ್ರಿಯೆ ಮಾಡಿಸಿದ್ವಿ. ಎರಡು ಪಾರ್ಟ್ ಮೂಲಕ ಹಣವನ್ನ ಮಾಲೀಕರಿಗೆ ನೀಡಿದ್ವಿ. ನಾನೇ ಸ್ವಂತ 27ಲಕ್ಷ ಹಣವನ್ನ ಮೊದಲ ಕಂತದಲಿ ಹಣ ನೀಡಿದೆ ಎಂದರು.
ಬೆಳಗಾವಿ ಕಾಂಗ್ರೆಸ್ ಭವನ‌‌ ನಿರ್ಮಾಣ ಮಾಡುವುದರಲ್ಲಿ ಸಾಕಷ್ಟು ಗೋಲ್ ಮಾಲ್ ಆಗಿದೆ. ಈ ಬಗ್ಗೆ ಕಾಂಗ್ರೆಸ್ ‌ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿಗೆ ಕೇಳಿ ಹೇಳುತ್ತಾರೆ. ಕಾಂಗ್ರೆಸ್ ಭವನದ ಹಣ ಚೈನಿ ಮಾಡಿದವರು ಯಾರು ಎಂದು ಹೇಳಲಿ. ಈಗ ನಾನು ಬಿಜೆಪಿಯ‌ ನಿಷ್ಠಾವಂತ ಕಾರ್ಯಕರ್ತರನಾಗಿದ್ದೇನೆ ಎಂದರು.

ಬೆಳಗಾವಿ ‌ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಇಲ್ಲಿಯವರೆಗೆ ಸೈಲೆಂಟ್ ಇದ್ದರು. ಆದರೆ ಅವರು ಸೈಲೆಂಟ್ ಆಗಬಾರದು ನೇರಾನೇರ ರಾಜಕೀಯ ಮಾಡಲಿ ಎಂದು ಸಲಹೆ ಕೊಡುವೆ ಎಂದರು. ರಾಜ್ಯದಲ್ಲಿ ಬೆಳಗಾವಿಯಿಂದ ಸರಕಾರ ಪತನವಾಗುತ್ತದೆ ಎಂದು ವಿಪಕ್ಷ ನಾಯಕ ಆರ್. ಅಶೋಕ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅದು‌ ಸನ್ನಿಹಿತವಾಗಿದೆ. ಯಾವುದೇ ಸಂದರ್ಭದಲ್ಲಿ ಪತನವಾಗಬಹುದು ಎಂದರು‌. ನಾನು ಕಾಂಗ್ರೆಸ್ ನಲ್ಲಿದ್ದಾಗ ಡಿ.ಕೆ.ಶಿವಕುಮಾರ ಬೆಂಗಳೂರಿನ ಹಂತದಲ್ಲಿ ಮಾತನ್ನು ಮಾತ್ರ ಕೇಳುತ್ತಿದ್ದೆ.

ಆದರೆ ಬೆಳಗಾವಿಯಲ್ಲಿ ಹಸ್ತಕ್ಷೇಪ ಮಾಡಲು ಎಂದಿಗೂ ಬಿಡಲಿಲ್ಲ ಎಂದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವುದು ತಮ್ಮ ಮಗನ ಅಧಿಕಾರ ಉಳಿಸಿಕೊಳ್ಳಲು ಮಾಡುತ್ತಿದ್ದಾರೋ ಅಥವಾ ಯಾಕೆ ಎನ್ನುವುದು ಸ್ಪಷ್ಟಪಡಿಸಬೇಕು. ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ವಿಫಲರಾಗಿದ್ದಾರೆ. ಮೊದಲು ಇದನ್ನು ಖಂಡಿಸಿ. ನಿಮ್ಮ ಮೇಲೆ ಜನರ ವಿಶ್ವಾಸ ಇದೆ. ಮಗನ ಅಧಿಕಾರ ಉಳಿಸಿಕೊಳ್ಳಲು ರಾಜ್ಯ ಪ್ರವಾಸ ಮಾಡುವುದು ಸರಿಯಲ್ಲ ಎಂದರು.

Tags:

error: Content is protected !!