ಕಾಂಗ್ರೆಸ್ ಸರ್ಕಾರ ಬೆಳಗಾವಿಯಿಂದಲೇ ಬೀಳುತ್ತದೆ ಎಂದು ವಿಪಕ್ಷ ನಾಯಕ ಆರ್ ಅಶೋಕ ಕಿಡಿಕಾರಿದ್ದಾರೆ. ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದವರು ಒಂದು ಕಡೆಗೆ ಸತೀಶ್ ಜಾರಕಿಹೊಳಿ ವರ್ಸಸ್ ಲಕ್ಷ್ಮಿ ಹೆಬ್ಬಾಳಕರ್ ಅದು ಬೆಳಗಾವಿ ರಾಜಕಾರಣವಾದರೆ ಇನ್ನೊಂದು ಕಡೆಗೆ ಸತೀಶ್ ಜಾರಕಿಹೊಳಿ ವರ್ಸಸ್ ಡಿಕೆ ಶಿವಕುಮಾರ್ ಸಿಎಂ ಸಿದ್ದರಾಮಯ್ಯನವರು ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಕುರ್ಚಿ ಉಳಿಸಿಕೊಳ್ಳುವ ಆಸೆಯಿಂದ ಅವರೇ ಈ ನಾಟಕದ ಸೂತ್ರದಾರರಾಗಿದ್ದಾರೆ ಎಂದು ಆರ್ ಅಶೋಕ ಕಿಡಿ ಕಾರಿದರು.
ಕಾಂಗ್ರೆಸ್ ನಾಯಕರ ಮಾಹಿತಿಯ ಪ್ರಕಾರ ಎರಡೂವರೆ ವರ್ಷ ಮಾತ್ರ ಅಧಿಕಾರ ನವೆಂಬರ್ ನಲ್ಲಿ ಮುಗಿಯಬೇಕಿತ್ತು ಆದರೆ ಸಿದ್ದರಾಮಯ್ಯನವರಿಗೆ ಅಧಿಕಾರದ ಆಸೆ ಕುರ್ಚಿ ಬಿಟ್ಟುಕೊಳ್ಳಲು ಮನಸ್ಸಿಲ್ಲ ಆದ್ದರಿಂದ ಕೆಲವರನ್ನು ಛೂ ಬಿಟ್ಟಿದ್ದಾರೆ. ಜಿ ಪರಮೇಶ್ವರ್ ಸತೀಶ್ ಜಾರಕಿಹೊಳಿ ರಾಜಣ್ಣ ಮಹದೇವಪ್ಪ ಇವರು ಫೀಲ್ಡ್ ಗೆ ಇಳಿದು ಸಿಎಂ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ ಈಗ ಡಿಕೆ ಶಿವಕುಮಾರ್ ಒಬ್ಬಂಟಿಯಾಗಿದ್ದಾರೆ ನನ್ನ ಹಿಂದೆ ಯಾವ ಎಂಎಲ್ಎ ನು ಬರುವುದು ಬೇಡ ಎಂದಿದ್ದಾರೆ. ಅಥವಾ ಹಿಂದೆ ಯಾರಾದರೂ ಇದ್ದಾರೋ ಇಲ್ಲವೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದವರು ಈಗ ಡಿಕೆ ಅವರಿಗೆ ಹೈಕಮಾಂಡ್ ಪಾದವೇ ಗತಿ ಎಂದು ಹೇಳಿದರು