ಬೆಳಗಾವಿ ತಾಲೂಕಿನ ಮಾರಿಹಾಳದಲ್ಲಿ ಪತಿಯ ಗೆಳೆಯನೊಂದಿಗೆ ಪರಾರಿಯಾಗದ್ದಾರೆ ಎಂದು ಆರೋಪಿಸಲಾಗಿದ್ದ ಪತ್ನಿ ಇಂದು ದಿಢೀರ್ ಪ್ರತ್ಯಕ್ಷವಾಗಿದ್ದು, ಪತಿ ಅಕ್ರಮ ಸಂಬಂಧದಿಂದ ಬೇಸತ್ತು, 9 ವರ್ಷದಿಂದ ಪ್ರೀತಿಸುತ್ತಿದ್ದ ಪ್ರಿಯಕರನೊಂದಿಗೆ ಸಂಸಾರ ನಡೆಸುತ್ತಿರುವುದಾಗಿ ತಿಳಿಸಿದ್ದಾಳೆ.

ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದಲ್ಲಿ ಯುವಕನೊಬ್ಬ ತನ್ನ ಪತ್ನಿ ಮತ್ತು ಮಕ್ಕಳನ್ನು ತನ್ನ ಗೆಳೆಯನೇ ಅಪಹರಿಸಿಕೊಂಡು ಹೋಗಿದ್ದಾನೆಂದು ದೂರು ದಾಖಲಿಸಿದ್ದ. ಅಲ್ಲದೇ ಗೆಳೆಯ ಪತ್ನಿ ಕೂಡ ನನ್ನ ಪತಿಯನ್ನು ಹುಡುಕಿ ಕೊಡಿ ಎಂದು ದೂರು ಆಗ್ರಹಿಸಿದ್ದರು. ಈ ನಡುವೆ ಇಂದು ಪತಿಯ ಗೆಳೆಯನೊಂದಿಗೆ ಮಕ್ಕಳು, ಒಡವೆ ವಸ್ತ್ರ ಮತ್ತು ಕಾರಿನೊಂದಿಗೆ ಪರಾರಿಯಾಗಿದ್ದಾಳೆಂದು ಆರೋಪಿಸುತ್ತಿದ್ದ ಮಾಸಾಬಿ ಪ್ರತ್ಯಕ್ಷವಾಗಿದ್ದು, ನಾನು 9 ವರ್ಷದಿಂದ ಬಸವರಾಜ್ ಸೀತಿಮನಿ ಅವರನ್ನು ಪ್ರೀತಿಸುತ್ತಿದ್ದೆ. ಮನೆಯವರ ಒತ್ತಾಯಕ್ಕೆ ನಾನು ಮದುವೆಯಾಗಿದ್ದೆ. ಆದರೆ ನನ್ನ ಪತಿಯ ಬೇರೆ ಹೆಣ್ಣಿನ ಸಹವಾಸದಿಂದ ಬೇಸತ್ತಿದೆ. ಹಲವುಬಾರಿ ನಾನು ಹೇಳಿದ್ದೆ. ಬೇರೆಯ ಹೆಣ್ಣಿನ ಸಹವಾಸವನ್ನು ಬಿಡಿ ಎಂದು.
ಮತ್ತೇ ಹಾಗೇ ಮಾಡಿದರೇ, ನಾನು ಹಳೆಯ ಪ್ರಿಯಕರನೊಂದಿಗೆ ಹೋಗುವುದಾಗಿ ಮೊದಲೇ ಹೇಳಿದ್ದೆ. ಆದರೂ ಕೇಳದ ಹಿನ್ನೆಲೆ ನಾನು ಬಸವರಾಜ್ ನನ್ನು ಸಂಪರ್ಕಿಸಿ ಅವನೊಂದಿಗೆ ಹೋಗಿರುವುದಾಗಿ ಮಾಸಾಬಿ ತಿಳಿಸಿದ್ದಾಳೆ. ನನಗೆ ಈಗ ಎರಡೂ ಹೆಣ್ಣು ಮಕ್ಕಳಿದ್ದಾರೆ. ಅವರಿಗಾಗಿ ನಾನು ಆಸ್ತಿ ಮಾಡಿದ್ದೇನೆ. ಆ ಪತ್ರ ನನ್ನ ಪತಿಯ ಬಳಿ ಇದ್ದು ಅದನ್ನು ಕೊಡದಿದ್ದರೇ ಪೊಲೀಸ್ ಕೇಸ್ ಹಾಕುವೆ ಎಂದರು. ನನ್ನ ಪತಿ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾನೆ ಎಂದಿದ್ದಾಳೆ.