DEATH

ಸರ್ಕಾರಿ ಗೌರವಗಳೊಂದಿಗೆ ಗಂದಿಗವಾಡ ಗ್ರಾಮದ ಯೋಧ ಇರ್ಷಾದ್ ಅವರ ಅಂತ್ಯಕ್ರಿಯೆ ಅಂತಿಮ ಸಂಸ್ಕಾರ

Share

ಅನಾರೋಗ್ಯದಿಂದ ನಿಧನರಾದ ಖಾನಾಪೂರ ತಾಲೂಕಿನ ಗಂದಿಗವಾಡ ಗ್ರಾಮದ ಸಿಐಎಸ್ಎಫ್ ಸೈನಿಕ ಇರ್ಷಾದ್ ಸಿಕಂದರ್ ಸಾಬ್ ಸಾಹೇಬ್ ಖಾನ್ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಖಾನಾಪೂರ ತಾಲೂಕಿನ ಗಂದಿಗವಾಡ ಗ್ರಾಮದ ಸಿಐಎಸ್ಎಫ್ ಸೈನಿಕ ಇರ್ಷಾದ್ ಸಿಕಂದರ್ ಸಾಬ್ ಸಾಹೇಬ್ ಖಾನ್ (35) ಅನಾರೋಗ್ಯದಿಂದ ನಿಧನ ಹೊಂದಿದ್ದು, ಅವರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅನಾರೋಗ್ಯದಿಂದ ಅವರು ಚಿಕಿತ್ಸೆಗಾಗಿ ತಮ್ಮ ಗ್ರಾಮಕ್ಕೆ ಮರಳಿದ್ದರು ಚಿಕಿತ್ಸೆ ಫಲಕಾರಿಯಾಗದೇ, ಶುಕ್ರವಾರ ಅವರ ಕೊನೆಯುಸಿರೆಳೆದಿದ್ದಾರೆ. ಶುಕ್ರವಾರ ರಾತ್ರಿ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಸಲಾಯಿತು. ಸಿಐಎಸ್ಎಫ್ ಅಧಿಕಾರಿಗಳಿಂದ ಗೌರವ ಸಲ್ಲಿಸಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ಧರು. ಈ ಸಂದರ್ಭದಲ್ಲಿ ಗ್ರಾಮದ ಜನರು ಬಹುಸಂಖ್ಯೆಯಲ್ಲಿ ಭಾಗಿಯಾಗಿ ಅಂತಿಮ ದರ್ಶನ ಪಡೆದರು.

Tags:

KHNPR ARMYMAN FUNERAL
error: Content is protected !!