ಕುಂಭಮೇಳದಲ್ಲಿ ಏಕಾಏಕಿ ನೂಕುನುಗ್ಗಲು ಉಂಟಾಯಿತು. ಯಾರೂ ಯಾರಿಗೆ ಸಹಾಯ ಮಾಡಲು ಅವಕಾಶವಿರಲಿಲ್ಲ. ಆ ಓಡಾಟದಲ್ಲಿ ಹಲವರು ನೆಲಕ್ಕೆ ಬಿದ್ದರು. ಶ್ವಾಸ ತೆಗೆದುಕೊಳ್ಳುವುದು ಕಷ್ಟವಾದ ನಾವಿನ್ನು ಬದುಕುಳಿಯಲ್ಲ ಎಂದೇನಿಸಿತು. ನಾಲ್ಕು ಕಡೆಯೂ ಹೋಗಲು ದಿಕ್ಕು ತೋಚದಂತಾಯಿತು. ಕಣ್ಣ ಮುಂದೆ ಗೆಳೆತಿಯರು ಬಿದ್ದರೂ ಅವರ ಸಹಾಯಕ್ಕೆ ಹೋಗಲು ಬಾರದಷ್ಟು ಕಷ್ಟಕರ ಪರಿಸ್ಥಿತಿ ಉಂಟಾಯಿತು ಎಂದು ಭಾವುಕರಾಗಿ ನುಡಿದರು.

ಇನ್ನು ಮೌನಿ ಅಮವಾಸ್ಯೆ ಆರಂಭವಾಗುತ್ತಿದ್ದಂತೆ ಸಾಧುಗಳು ಸ್ನಾನಕ್ಕೆ ಇಳಿಯುತ್ತಿದ್ದು, ಜನರು ಅಲ್ಲಿಗೆ ಬಾರಬಾರದೆಂದು ಹೇಳಿದಾಗಲೂ ಜನರು ತಾ ಮುಂದು ನಾ ಮುಂದು ಎಂದು ನೂಕುನುಗ್ಗಲು ಆರಂಭಗೊಂಡಿತು. ಪೊಲೀಸರು ಸರಿಯಾದ ಮಾರ್ಗ ಕೇಳಿದರೂ, ಜನರು ಒಂದು ಮಾತನ್ನು ಕೇಳದೇ, ಬಿದ್ದವರ ಮೈಮೇಲೆ ಕಾಲಿಟ್ಟು ಓಡಿ ಹೋದರು. ಇದೆಲ್ಲವನ್ನು ನೋಡಿ ನಾವು ಮರಳಿ ಬರುವುದೇ ಇಲ್ಲ ಎಂದೇನಿಸಿತು. ಪ್ರತಿಯೊಬ್ಬರು ತಮ್ಮ ಪ್ರಾಣಕ್ಕಾಗಿ ಹೋರಾಟ ನಡೆಸಿದರು.