Belagavi

ಬೆಳಗಾವಿಯಲ್ಲಿ ಭಕ್ತಿಭಾವದ ಶ್ರೀ ದುರ್ಗಾದೇವಿ ಮತ್ತು ಶ್ರೀ ಮಾತಂಗಿ ದೇವಿಯ ಜಾತ್ರಾ ಮಹೋತ್ಸವ

Share

ಬೆಳಗಾವಿ ಶಹಾಪೂರ ಗಾಢೆ ಮಾರ್ಗ, ಸಿದ್ಧಾರ್ಥ ಕಾಲನಿಯಲ್ಲಿ ಶ್ರೀ ದುರ್ಗಾದೇವಿ ಮತ್ತು ಶ್ರೀ ಮಾತಂಗಿ ದೇವಿಯ ಜಾತ್ರಾ ಮಹೋತ್ಸವ ಉತ್ಸಾಹದಿಂದ ನೆರವೇರುತ್ತಿದೆ.

ಬೆಳಗಾವಿ ಶಹಾಪೂರ ಗಾಢೆ ಮಾರ್ಗ, ಸಿದ್ಧಾರ್ಥ ಕಾಲನಿಯಲ್ಲಿ ಶ್ರೀ ದುರ್ಗಾದೇವಿ ಮತ್ತು ಶ್ರೀ ಮಾತಂಗಿ ದೇವಿಯ ಜಾತ್ರಾ ಮಹೋತ್ಸವ ಉತ್ಸಾಹದಿಂದ ನಡೆಸಲಾಗುತ್ತಿದೆ. ಜನವರಿ 5 ರಿಂದ 9 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪಾರಂಪರೀಕ ವಾದ್ಯಗಳೊಂದಿಗೆ ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು.

ಬೆಳಗಾವಿಯ ಶಹಾಪುರ ಗಾಢೆ ಮಾರ್ಗ, ಸಿದ್ಧಾರ್ಥ ಕಾಲನಿಗೆ ದೇವಿಯ ಪಲ್ಲಕ್ಕಿ ಆಗಮಿಸಿದ್ದು, ಜನವರಿ 7 ರಂದು ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಜನವರಿ 8 ರಂದು ಮಹಾಪ್ರಸಾದ ಆಯೋಜಿಸಲಾಗಿದೆ ಎಂದು ಆಯೋಜಕರು ತಿಳಿಸಿದರು.

ಬೆಳಗಾವಿಯ ಶಹಾಪುರ ಗಾಢೆ ಮಾರ್ಗ, ಸಿದ್ಧಾರ್ಥ ಕಾಲನಿಯ ವತಿಯಿಂದ ಶ್ರೀ ದುರ್ಗಾದೇವಿ ಮತ್ತು ಶ್ರೀ ಮಾತಂಗಿ ದೇವಿಯ ಜಾತ್ರೋತ್ಸವ ಜನವರಿ 5 ರಿಂದ ಆರಂಭಗೊಂಡಿದೆ. ಜನವರಿ 5 ರಿಂದ 9 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಜಾತ್ರೋತ್ಸವ ಕಮೀಟಿಯವರು ತಿಳಿಸಿದರು.

ಬುಧವಾರ ಮಧ್ಯಾನ್ಹ ಮಹಾಪ್ರಸಾದವನ್ನು ಆಯೋಜಿಸಲಾಗಿದೆ. ಎಲ್ಲ ಸದ್ಭಕ್ತರು ಆಗಮಿಸಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ಈ ವೇಳೆ ಜಾತ್ರ ಕಮಿಟಿಯ ಸದಸ್ಯರು ತಿಳಿಸಿದರು.

ಈ ವೇಳೆ ನೂರಾರು ಭಕ್ತರು ಭಾಗಿಯಾಗಿದ್ದರು.

Tags:

error: Content is protected !!