Belagavi

ಬೆಳಗಾವಿಯಲ್ಲಿ ಆರಂಭಗೊಂಡ ರಾಷ್ಟ್ರೀಯ ದೇಹದಾರ್ಢ್ಯಪಟುಗಳ ಮಹಾಕುಂಭ…

Share

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳ ಆರಂಭವಾಗಿದ್ದರೆ, ಬೆಳಗಾವಿ ನಗರದಲ್ಲಿ ರಾಷ್ಟ್ರೀಯ ದೇಹದಾರ್ಢ್ಯ ಮಹಾಕುಂಭ ಆರಂಭಗೊಂಡಿದೆ. ಬೆಳಗಾವಿಯಲ್ಲಿ ಜ. 16 ರಂದು ನಡೆಯಲಿರುವ 16 ನೇ ರಾಷ್ಟ್ರೀಯ ಮಟ್ಟದ ಹಿರಿಯ ಪುರುಷರ ದೇಹದಾರ್ಢ್ಯ ಮತ್ತು ಮಹಿಳೆಯರ ಮಾದರಿ ದೈಹಿಕ ಸ್ಪರ್ಧೆಗೆ ಬೃಹತ್ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ.

2025 ರ ಜನವರಿ 16 ರಂದು ಬೆಳಗಾವಿಯಲ್ಲಿ 16 ನೇ ರಾಷ್ಟ್ರೀಯ ಮಟ್ಟದ ಹಿರಿಯ ಪುರುಷರ ದೇಹದಾರ್ಢ್ಯ ಮತ್ತು ಮಹಿಳೆಯರ ಮಾದರಿ ದೈಹಿಕ ಸ್ಪರ್ಧೆ ನಡೆಯಲಿದೆ. ಇದಕ್ಕಾಗಿ ಸತತ ಮೂರು ದಿನಗಳಿಂದ ನಡೆಯುತ್ತಿರುವ ಈ ರಾಷ್ಟ್ರಮಟ್ಟದ ಸ್ಪರ್ಧೆಗೆ ಇಂದು ದೇಶಾದ್ಯಂತ 500 ಸ್ಪರ್ಧಿಗಳ ಹೆಸರು ಮತ್ತು ತೂಕ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ.

ನಗರದ ಸಾವಗಾಂವ ರಸ್ತೆಯಲ್ಲಿರುವ ಅಂಗಡಿ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯ ಆಯೋಜನೆ ಪ್ರಕ್ರಿಯೆ ಇಂದಿನಿಂದ ಅಭೂತಪೂರ್ವ ಉತ್ಸಾಹದಿಂದ ಆರಂಭವಾಗಿದೆ. ಈ ಉದ್ದೇಶಕ್ಕಾಗಿ, ಭಾರತೀಯ ಬಾಡಿ ಬಿಲ್ಡರ್ಸ್ ಫೆಡರೇಶನ್ (ಐಬಿಬಿಎಫ್) ಅಧ್ಯಕ್ಷ ರಮೇಶ್ ಕುಮಾರ್, ಕಾರ್ಯದರ್ಶಿ ಹೀರಲ್ ಸೇಠ್, ವರ್ಲ್ಡ್ ಬಾಡಿ ಬಿಲ್ಡಿಂಗ್ ಮತ್ತು ಫಿಸಿಕ್ ಫೆಡರೇಶನ್ ಕಾರ್ಯದರ್ಶಿ ಚೇತನ್ ಪಠಾರೆ, ಮಾಸ್ಟರ್ ವರ್ಲ್ಡ್ ಪ್ರೇಮಚಂದ್ ಡಿಗ್ರಾ, ಮಧುಕರ್ ತಳಲ್ಕರ್ ಮುಂತಾದವರು ಉಪಸ್ಥಿತರಿದ್ಧರು.

ವಿಶ್ವ ಬಾಡಿ ಬಿಲ್ಡರ್ಸ್ ಮತ್ತು ಫಿಸಿಕ್ ಫೆಡರೇಶನ್ ಕಾರ್ಯದರ್ಶಿ ಚೇತನ್ ಪಠಾರೆ ಅವರು ಫೆಡರೇಶನ್ ಪರವಾಗಿ ಬೆಳಗಾವಿಯಲ್ಲಿ ಮೊದಲ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯನ್ನು ಆಯೋಜಿಸಿದ್ದಕ್ಕಾಗಿ ಕರ್ನಾಟಕ ರಾಜ್ಯ ದೇಹದಾರ್ಢ್ಯಗಾರರ ಸಂಘಕ್ಕೆ ವಿಶೇಷವಾಗಿ ಅಜಿತ್ ಸಿದ್ದಣ್ಣನವರ್ ಮತ್ತು ಅವರ ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಐಬಿಬಿಎಫ್ ಈ ರಾಷ್ಟ್ರೀಯ ಸ್ಪರ್ಧೆಯ ‘ಬ್ರಾಂಡ್ ಅಂಬಾಸಿಡರ್’ ಆಗಿ ಸುನಿಲ್ ಆಪ್ಟೇಕರ್ ಅವರನ್ನು ನೇಮಿಸಲಾಗಿದೆ ಎಂದರು.

ರೇಲ್ವೆ ಬೋರ್ಡನ ರಾಜು ಖಾನ್ ಬೆಳಗಾವಿಯಲ್ಲಿ ಒಳ್ಳೆಯ ವಾತಾವರಣವಿದೆ. ಒಳ್ಳೆಯ ನಿಯೋಜನೆಯನ್ನು ಮಾಡಿದ್ದಾರೆ. ಮತ್ತೊಂದು ಬಾರಿ ಬೆಳಗಾವಿಗೆ ಆಗಮಿಸುವುದಾಗಿ ತಿಳಿಸಿದರು.  ಅತ್ಯಂತ ಉತ್ಸಾಹವಿದೆ. ಮೊದಲ ಬಾರಿಗೆ ಬಾಡಿ ಬಿಲ್ಡಿಂಗನಲ್ಲಿ ಭಾಗವಹಿಸಿದ್ದೇವೆ. ವಿವಿಧೆಡೆಯಿಂದ ಬಂದ ಬಾಡಿ ಬಿಲ್ಡರ್ಸಗಳಿಗೆ ಅವಕಾಶವನ್ನು ನೀಡಲಾಗಿದೆ ಎಂದು ಸ್ಪರ್ಧಾಳುಗಳು ಹೇಳಿದರು.

ಇನ್ನೋರ್ವ ವರ್ಲ್ಡ್ ಚಾಂಪಿಯನ್ ಪ್ರೇಮಚಂದ ಡಿಗರಾ ಅವರು ಕೂಡ ಬೆಳಗಾವಿಯಲ್ಲಿ ಇಂತಹ ಒಂದು ಸ್ಪರ್ಧೆಯನ್ನು ಆಯೋಜಿಸಿದ್ದು, ಪ್ರಶಂಸನೀಯ. ಯುವಪೀಳಿಗೆಯೂ ಆರೋಗ್ಯಕರ ಆಹಾರ ಪದ್ಧತಿಯನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.  ಮೊದಲಬಾರಿಗೆ ಬೆಳಗಾವಿಗೆ ಬಂದಿದ್ದು, ಹಲವಾರು ಸ್ಪರ್ಧೆಗಳಲ್ಲಿ ಭಾಗವಹಸಿದ್ದೇವೆ. ಆದರೇ ಬೆಳಗಾವಿಯಲ್ಲಿ ಒಳ್ಳೆಯ ನಿಯೋಜನೆಯನ್ನು ಮಾಡಲಾಗಿದೆ. ಸಚಿವ ಸತೀಶ ಜಾರಕಿಹೊಳಿ ಅವರು ಒಳ್ಳೆಯ ಕಾರ್ಯವನ್ನು ಪ್ರೋತ್ಸಾಹಿಸಿದ್ದು, ಇಂತಹ ಸ್ಪರ್ಧೆಗಳು ಹೆಚ್ಚೆಚ್ಚಾಗಿ ದೇಶದಲ್ಲಿ ನಡೆಯಬೇಕೆಂದು ಮಹಿಳೆ ಪಟು ಹೇಳಿದರು.

Tags:

error: Content is protected !!