Belagavi

ಬೆಳಗಾವಿ ಇಂದು ನನ್ನಿಂದಲೇ ಕರ್ನಾಟಕದಲ್ಲಿದೆ; ಡಾ. ಸಂಪತ್ ಕುಮಾರ್ ಶಿವಣಗಿ

Share

ಬೆಳಗಾವಿ ಇಂದು ನನ್ನಿಂದಲೇ ಕರ್ನಾಟಕದಲ್ಲಿದೆ ಎಂದು ಬೆಳಗಾವಿಯಲ್ಲಿ ಕೆಎಲ್ಇ ಸಂಸ್ಥೆಯು ಅತ್ಯಾಧುನಿಕ‌ ಸೌಲಭ್ಯವುಳ್ಳ ಕ್ಯಾನ್ಸರ್ ಆಸ್ಪತ್ರೆಗೆ 8 ಕೋಟಿ ರೂ. ದೇಣಿಗೆ ನೀಡಿರುವ ಡಾ. ಸಂಪತ್ ಕುಮಾರ್ ಶಿವಣಗಿ ಹೇಳಿದರು.

ಬೆಳಗಾವಿಯಲ್ಲಿ ಕೆಎಲ್ಇ ಸಂಸ್ಥೆಯು ಅತ್ಯಾಧುನಿಕ‌ ಸೌಲಭ್ಯವುಳ್ಳ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಿದೆ. ಈ ಆಸ್ಪತ್ರೆ ನಿರ್ಮಾಣಕ್ಕೆ ಅಮೆರಿಕದಲ್ಲಿ ನೆಲೆಸಿರುವ ಬೆಳಗಾವಿ ಜಿಲ್ಲೆಯ ಪ್ರಸಿದ್ಧ ವೈದ್ಯರಾದ ಡಾ. ಸಂಪತ್ ಕುಮಾರ್ ಅವರು 8 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಇಂದು ಆಸ್ಪತ್ರೆಯ ಲೋಕಾರ್ಪಣೆಯ ಸಂದರ್ಭದಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು, ತಾವು ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವಾಗ ಭಾಷಾವಾರು ಪ್ರಾಂತ್ಯ ರಚನೆಗೆ ಸಂಬಂಧಿಸಿದಂತೆ ಮಹಾಜನ ಆಯೋಗವನ್ನು ಕೂಡ ಭೇಟಿಯಾಗುವ ಅವಕಾಶ ದೊರೆತಾಗ ಬೆಳಗಾವಿ ಕರ್ನಾಟಕದಲ್ಲೇ ಇರಬೇಕೆಂಬುದನ್ನು ಮನವರಿಕೆ ಮಾಡಲಾಯಿತು. ತಮ್ಮ ನೇತೃತ್ವದ ನಿಯೋಗ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಭೇಟಿಗೆ ತೆರಳಿತ್ತು. ಪಿಎಂ ಇಂದಿರಾ ಗಾಂಧಿಯವರ ಮುಂದೆ ಬೆಳಗಾವಿಯ ಪರಿಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಡಲಾಗಿತ್ತು. ಇಂದು ಬೆಳಗಾವಿ ಕರ್ನಾಟಕದಲ್ಲಿದೆ ಎಂದರೇ ಅದು ನನ್ನಿಂದಲೇ ಎಂದು ಹೆಮ್ಮೆಯಿಂದ ಹೇಳಿದರು.

ಅಮೆರಿಕಾದ ಆರೋಗ್ಯ ಕ್ಷೇತ್ರಕ್ಕೂ ಅದ್ಭುತ ಕೊಡುಗೆ ನೀಡಿರುವುದಕ್ಕೆ ಅಮೆರಿಕ ಸರ್ಕಾರವು ಮಿಸ್ಸಿಸಿಪ್ಪಿಯ ಒಂದು ರಸ್ತೆಗೆ “ಡಾ. ಸಂಪತ್ಕುಮಾರ್ ಶಿವಣಗಿ ಲೇನ್” ಎಂದು ಹೆಸರಿಟ್ಟು ಗೌರವಿಸಿದೆ. ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದ ಸಂದರ್ಭದಲ್ಲಿ ಡಾ. ಸಂಪತ್ಕುಮಾರ್ ಭಾರತ ಬಿಟ್ಟು ಅಮೆರಿಕಕ್ಕೆ ತೆರಳಿದ್ದರು. ಇದಕ್ಕೂ ಮೊದಲು ಎರಡು ವರ್ಷ ಬೆಳಗಾವಿಯ ಜವಾಹರಾಲ್ ನೆಹರು ವೈದ್ಯಕೀಯ ಕಾಲೇಜಿನಲ್ಲಿ ಇವರು ಪ್ರಾಧ್ಯಾಪಕರಾಗಿದ್ದರು. ನಂತರ ಅಮೇರಿಕಾದ ವೈದ್ಯಕೀಯ ಕ್ಷೇತ್ರದಲ್ಲೇ ಸಾಧನೆ ಮಾಡಿರುವುದಾಗಿ ತಿಳಿಸಿದ ಅವರು ತಾವು ಅಮೇರಿಕಾದಲ್ಲಿದರೂ ಕೂಡ ತಮ್ಮ ಜೀವ ತಮ್ಮ ದೇಶ ತಮ್ಮ ರಾಜ್ಯ ಮತ್ತು ಜಿಲ್ಲೆಯಲ್ಲಿದೆ ಎಂದರು.

Tags:

error: Content is protected !!