Khanapur

ಕಳೆದ ವಾರ ಅಪಘಾತಕ್ಕೆ ಒಳಪಟ್ಟ ಮಹಿಳೆ ಸಾವು

Share

ಖಾನಾಪೂರ ತಾಲೂಕಿನ ಚನ್ನೇವಾಡಿ ಗ್ರಾಮದ ತನ್ನ ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಮರಳಿ ತನ್ನ ಪತಿಯೊಂದಿಗೆ ದ್ವಿಚಕ್ರದ ಮೇಲೆ ಮರಳಿ ತಮ್ಮ ಗ್ರಾಮಕ್ಕೆ ಹೋಗುವಾಗ ಝಂಜವಾಡ ರಸ್ತೆಯ ಮೇಲೆ ಇರುವ ಸ್ಪೀಡ್ ಬ್ರೇಕರ್ ಗಮನಿಸದೆ ಹೊರಟ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಗಾಯಗೊಂಡಿದರು ಅವರಿಗೆ ಪ್ರಥಮ ಚಿಕಿತ್ಸೆ ನಂದಗಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಈ ಮಹಿಳೆ ಸಾವನ್ನಪ್ಪಿದ್ದಾರೆ. ಸಾವಿತ್ರಿ ಪ್ರಭಾಕರ ಪಾಟೀಲ್ ಮೃತಪಟ್ಟ ಮಹಿಳೆ ಅಳ್ನಾವರ ತಾಲೂಕಿನ ಕಡಬಗಟ್ಟಿ ಗ್ರಾಮದ ನಿವಾಸಿಯಾಗಿದರು ಈ ಘಟನೆ ನಡೆದ ಸ್ಥಳಕ್ಕೆ ಯಾವುದೇ ರೀತಿಯ ಸೂಚನಾ ಫಲಕ ಇಲ್ಲ ಇಲ್ಲಿ ಸ್ಪೀಡ್ ಬ್ರೇಕರ್ ಇದೆ ಅಂತನೂ ಗೊತ್ತಾಗುವುದಿಲ್ಲ,ಅದರ ಮೇಲೆ ಬಿಳಿ ಪಟ್ಟೆಗಳಿಲ್ಲ ಆದ್ದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ ಈ ಅಪಘಾತಕ್ಕೆ ಯಾರು ಹೊಣೆ ಎಂದು ಜನಸಾಮಾನ್ಯರ ಪ್ರಶ್ನೆಯಾಗಿದೆ ಇದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.

Tags:

error: Content is protected !!