ಖಾನಾಪೂರದ ಮಲಪ್ರಭಾ ನದಿಯ ಘಾಟ್ ಹಳೆಯ ಬ್ರಿಜ್ ನಲ್ಲಿ ಧಾರ್ಮಿಕ ಕಾರ್ಯ ಪಡಲಿ ತುಂಬುವ ಕಾರ್ಯ ಮಾಡಲು ಬೆಳಗಾವಿ ತಾಲೂಕಿನ ವಣ್ಣೂರ್ ಗ್ರಾಮದ ನಿವಾಸಿ ಸಮರ್ಥ ಮಲ್ಲಪ್ಪ ಚೌಗಲೆ (22) ನೀರಿನಲ್ಲಿ ಇಳಿದ ಸಂದರ್ಭದಲ್ಲಿ ಮುಳುಗಡೆಯಾದ ಘಟನೆ ನಡೆದಿದೆ ಈ ಘಟನೆ ಖಾನಾಪೂರ ಪೋಲಿಸ್ ಠಾಣೆಗೆ ತಿಳಿದ ತಕ್ಷಣವೇ ಪಿಐ ಲಾಲ್ ಸಾಬ್.
ಗೌಂಡಿ ತಮ್ಮ ಅಧಿಕಾರಿಗಳೊಂದಿಗೆ ಅಗ್ನಿಶಾಮಕ ದಳವರನ್ನು ಸಹಕಾರದೊಂದಿಗೆ ಮಲಪ್ರಭಾ ನದಿಯ ಘಾಟ್ ಬಳಿ ಹೋಗಿ ವಿಷಯ ತಿಳಿದುಕೊಂಡ ಮುಳುಗಡೆಯಾದ ಸಮರ್ಥನ ಶೋಧ ಕಾರ್ಯ ನಡೆಸಿದ್ದಾರೆ ಆದರೆ ಇನ್ನೂ ವರೆಗೆ ಯಾವುದೇ ಸುಳಿವು ದೊರೆತಿಲ್ಲ ಇದರ ಕುರಿತು ಖಾನಾಪೂರ ನಿವಾಸಿ ಕಾಂಗ್ರೆಸ್ ಮುಖಂಡ ಗುಡ್ಡು ಸಾಬ್ ತೆಕಡಿ ಮಾಹಿತಿ ನೀಡಿ ಬೆಳಗಾವಿಯ ವಣ್ಣೂರ್ ಗ್ರಾಮದ ನಿವಾಸಿ ಸಮರ್ಥ ಎಂಬವನು ಪಡಲಿ ತುಂಬುವ ಧಾರ್ಮಿಕ ಕಾರ್ಯಕ್ಕೆ ಬಂದ ಸಂದರ್ಭದಲ್ಲಿ ನೀರಿನ ಆಳಕ್ಕೆ ಇಳುಕಿ ಮುಳುಗಡೆಯಾಗಿದ್ದಾನೆ ಶೋಧ ಕಾರ್ಯ ಮುಂದುವರೆದಿದೆ ಖಾನಾಪೂರ ನಿವಾಸಿಯಾಗಿ ನಾನು ಕೇಳಿಕೊಳ್ಳುವುದೆನೆಂದರೆ ಈ ಮಲಪ್ರಭಾ ನದಿಯ ಘಾಟ್ ಬಳಿ ಯಾರೂ ಇಂಥ ಕಾರ್ಯ ಮಾಡ್ಬೇಡಿ ಆ ಬದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಅಲ್ಲಿ ವ್ಯವಸ್ಥಿತವಾಗಿ ಕಾರ್ಯಗಳು ನಡೆಸಲು ಅನುಕೂಲವಿದೆ ವಿನಃ ಕಾರಣ ಈ ಘಾಟ್ ಪ್ರದೇಶದಲ್ಲಿ ನೀರಿನ ಆಳದ ಬಗ್ಗೆ ತಿಳಿಯದೇ ಅನಾಹುತಗಳಿಗೆ ಎಡೆ ಮಾಡುವುದು ಬೇಡಾ ಎಂದರು.ವಣ್ಣೂರ್ ಗ್ರಾಮಸ್ಥರು ಕೂಡಾ ಈ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.