ಇಂದು ವರ್ಷ 2024 ಮುಕ್ತಾಯಗೊಂಡಿತು. ಬಾನಂಗಳದಲ್ಲಿ ಸೂರ್ಯರಶ್ಮಿಯನ್ನು ಚೆಲ್ಲಿ ನೀಲ ಗಗನವನ್ನು ಬಂಗಾರ ನೀರವನ್ನೆರೇದ ಆದಿತ್ಯ ತನ್ನ ರಥವನ್ನು ಏರಿ ಹೋದ ನಯನಮನೋಹರವಾಗಿತ್ತು. ಬನ್ನಿ ನೋಡಿಕೊಂಡು ಬರೋಣ. 2024ನೇ ವರ್ಷದ ಅಂತಿಮ ದಿನದ ಸುಂದರ ಸೂರ್ಯಾಸ್ತವನ್ನ.
ಹೌದು, 2024ನೇ ವರ್ಷ ಇಂದಿಗೆ ಮುಕ್ತಾಯಗೊಂಡು, ಹೊಸ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಇಂದು ಸಂಜೆ ವರ್ಷದ ಅಂತಿಮ ಸೂರ್ಯಾಸ್ತ ನಯನ ಮನೋಹರವಾಗಿತ್ತು. ಬಂಗಾರ ನೀರನ್ನು ಚೆಲ್ಲಿದ ಆದಿತ್ಯ ಸೂರ್ಯ ರಶ್ಮಿಯನ್ನು ಪ್ರಕಾಶಿಸಿ, ನಾಳೆ ಮತ್ತೇ ಹೊಸ ಬೆಳಕಿನೊಂದಿಗೆ ನವವರ್ಷದಲ್ಲಿ ಉದಯಿಸುವೆ ಎಂದು ಹೇಳಿ ಹೋಗುತ್ತಿದ್ದೇನೆ ಎನ್ನುವಂತಿತ್ತು. ಬೆಳಗಾವಿಯ ಖ್ಯಾತ ಪತ್ರಿಕಾ ಛಾಯಾಗ್ರಾಹಕ ಪಿ.ಕೆ.ಬಡಿಗೇರ ಅವರ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾದ ಸುಂದರ ಸೂರ್ಯಾಸ್ತದ ದೃಶ್ಯಗಳಿವು.