ಗಾಂಧಿ ಭಾರತ ಕಾರ್ಯಕ್ರಮದ ಹಿನ್ನೆಲೆ ಇಂದು ಬೆಳಗಾವಿಗೆ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಗಮಿಸಿದರು. ಸಿಎಂ ಸಿದ್ಧರಾಮಯ್ಯ, ಡಿಸಿಎಂ. ಡಿ.ಕೆ. ಶಿವಕುಮಾರ್ ಸೇರಿದಂತೆ ಗಣ್ಯರು ಅವರನ್ನು ಸ್ವಾಗತಿಸಿದರು.
ಇಂದಿನಿಂದ ಬೆಳಗಾವಿಯಲ್ಲಿ ಆರಂಭಗೊಳ್ಳುವ ಗಾಂಧಿ ಭಾರತ ಕಾರ್ಯಕ್ರಮದ ಹಿನ್ನೆಲೆ ಇಂದು ಆಯೋಜಿಸಿರುವ ಕಾಂಗ್ರೆಸ್ ವಿಸ್ತೃತ ಕಾರ್ಯಕಾರಣಿ ಸಭೆಗೆ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಮತ್ತು ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರು ಬೆಳಗಾವಿಗೆ ಆಗಮಿಸಿದರು. ಈ ವೇಳೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅವರ ಸ್ವಾಗತಕ್ಕಾಗಿ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿದ್ಧರು. ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ, ಸಚಿವರುಗಳ, ಶಾಸಕರು ಸೇರಿದಂತೆ ಇನ್ನುಳಿದವರು ರಾಹುಲ್ ಗಾಂಧಿ ಅವರನ್ನ ಬೆಳಗಾವಿ ನಗರಕ್ಕೆ ಬರಮಾಡಿಕೊಂಡರು.
ಇದೇ ವೇಳೆ ಕಾಂಗ್ರೆಸ್ ಪಕ್ಷವನ್ನು ಸಂಕೇತಿಸುವ ಉಡುಪಗಳನ್ನು ಧರಿಸಿ ಕೈಯಲ್ಲಿ ಕಾಂಗ್ರೆಸ್ ಧ್ವಜವನ್ನು ಹಿಡಿದು, ರಾಹುಲ್ ಗಾಂಧಿ ಅವರ ಎಲ್ಲ ಸುರಕ್ಷತೆಯ ವಾಹನಗಳನ್ನು ಧ್ವಜವನ್ನು ಹಾರಾಡಿಸಿ ಹರಿಯಾಣಾ ಮೂಲದ ದಿನೇಶ್ ಶರ್ಮಾ ಎಂಬ ಯುವಕ ಸ್ವಾಗತಿಸಿದ್ದು ವಿಶೇಷವಾಗಿತ್ತು. ರಾಹುಲ್ ಗಾಂಧಿ ಹೋದಲ್ಲೆಲ್ಲ ತಾವು ಸ್ವಾಗತಕ್ಕೆ ಹೋಗುತ್ತೇವೆ. ಪೊಲೀಸರು ಇಂದು ತಡೆದರು ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ನನಗೆ ಅವಕಾಶ ನೀಡಿದರು. ಇಂದು ಬೆಳಗಾವಿಯಲ್ಲಿ ವಿಸ್ತೃತ ಕಾಂಗ್ರೆಸ್ ಕಾರ್ಯಕಾರಣಿ ಸಭೆ ಮತ್ತು ಜೈ ಬಾಪೂಜೀ, ಜೈ ಭೀಮ್ ಮತ್ತು ಜೈ ಸಂವಿಧಾನದ ಸಭೆಗೆ ರಾಹುಲ್ ಗಾಂಧಿ ಆಗಮಿಸಿದ್ದು, ಸಂತಸ ತಂದಿದೆ ಎಂದು ದಿನೇಶ್ ಶರ್ಮಾ ತನ್ನ ಅಭಿಪ್ರಾಯವನ್ನು ಇನ್ ನ್ಯೂಸನೊಂದಿಗೆ ಹಂಚಿಕೊಂಡರು.
ಈ ವೇಳೆ ಬಹುಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ಧರು