ಬೆಳಗಾವಿ : ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿಬಿಲ್ಡರ್ಸನ ವತಿಯಿಂದ ಉಡುಪಿಯಲ್ಲಿ ನಡೆದ ಮಿಸ್ಟರ್ ಕರ್ನಾಟಕ 2024 ರಲ್ಲಿ ಬೆಳಗಾವಿಯ ದೇಹದಾರ್ಡ್ಯಪಟುಗಳು ಸಾಧನೆಯನ್ನು ಮಾಡಿದ್ದಾರೆ.
40 ಕಿಲೋ ವಿಭಾಗದಲ್ಲಿ ಪ್ರತಾಪ ಕಾಲಕುಂದ್ರಿಕರ ದ್ವಿತೀಯ ಸ್ಥಾನ, ಪುರುಷರ ಫಿಸಿಕ್ಸನಲ್ಲಿ ರಾಮ ಮಾರುತಿ ಬೆಳಗಾಂವಕರಗೆ ಐದನೇ ಸ್ಥಾನ, 70 ಕಿಲೋ ವಿಭಾಗದಲ್ಲಿ ವೆಂಕಟೇಶ ತಾಶೀಲ್ದಾರ, ತೃತೀಯ ಸ್ಥಾನ, 75 ಕಿಲೋ ವಿಭಾಗದಲ್ಲಿ ಸುನೀಲ ಭಾತಕಾಂಡೆಗೆ ದ್ವಿತೀಯ ಸ್ಥಾನ, 80 ಕಿಲೋ ವಿಭಾಗದಲ್ಲಿ ರಾಹುಲ್ ಕುಲಾಲ್ ನಾಲ್ಕನೆ ಸ್ಥಾನ ಮತ್ತು 85 ಕಿಲೋ ವಿಭಾಗದಲ್ಲಿ ವ್ಹಿ.ಬಿ. ಕಿರಣಗೆ ತೃತೀಯ ಸ್ಥಾನ ಪಡೆದು ಬೆಳಗಾವಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.