Belagavi

ಬೆಳಗಾವಿಯಲ್ಲಿ ಮಟ…ಮಟ…ಮಧ್ಯಾನ್ಹ ಹೊತ್ತಿ ಉರಿದ ಮನೆ…

Share

ಮಟಮಟ ಮಧ್ಯಾನ್ಹ ಮನೆಯೊಂದು ಹೊತ್ತಿ ಉರಿದ ಘಟನೆ ಬೆಳಗಾವಿ ನಗರದ ಅನಂತಶಯನ ಗಲ್ಲಿಯಲ್ಲಿ ನಡೆದಿದೆ.

ಭಾನುವಾರ ಮಧ್ಯಾನ್ಹ ಬೆಳಗಾವಿ ನಗರದ ಅನಂತಶಯನ ಗಲ್ಲಿಯಲ್ಲಿರುವ ಮನೆಯೊಂದು ಮಟಮಟ ಮಧ್ಯಾನ್ಹ ಹೊತ್ತಿ ಉರಿದಿದೆ. ಶಶಿಕಲಾ ಅಪ್ಪಾಸಾಹೇಬ್ ಅಂಕಲೆ (62) ಎಂಬುವವರಿಗೆ ಸೇರಿದ ಮನೆ ಇದಾಗಿದೆ. ಶಾರ್ಟ್ ಸರ್ಕೀಟನಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲವು ಸುಟ್ಟು ಭಸ್ಮವಾಗಿವೆ. ಈ ಮನೆಯಲ್ಲಿ ಶಶಿಕಲಾ ಅಪ್ಪಾಸಾಹೇಬ್ ಅಂಕಲೆ (62) ಎಂಬ ಮಹಿಳೆ ವಾಸಿಸುತ್ತಾರೆ. ಅಲ್ಲದೇ ಮೇಲಿನ ಕೊಠಡಿಗಳಲ್ಲಿ ತರಕಾರಿ ವ್ಯಾಪಾರಸ್ಥರು ವಾಸವಾಗಿದ್ದಾರೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ನೆರೆಯವರು ಶಶಿಕಲಾ ಅಪ್ಪಾಸಾಹೇಬ್ ಅಂಕಲೆಯವರನ್ನು ಮನೆಯಿಂದ ಹೊರಗಡೆ ತೆಗೆದುಕೊಂಡು ಬಂದು ಅನಾಹುತವನ್ನು ತಪ್ಪಿಸಿದ್ದಾರೆ.

ಅಲ್ಲದೇ ಮೇಲಿನ ಕೊಠಡಿಯಲ್ಲಿ ವಾಸವಿರುವ ತರಕಾರಿ ವ್ಯಾಪಾರಸ್ಥರು ಕೂಡ ತಮ್ಮ ಕೆಲಸಕ್ಕೆ ತೆರಳಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಕೂಡಲೇ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಖಡೇಬಝಾರ್ ಪೊಲೀಸರು ದೌಡಾಯಿಸಿದ್ದಾರೆ. ಅಗ್ನಿಶಾಮಕದಳದವರು ಕಾರ್ಯಾಚರಣೆ ನಡೆಸಿ ಮನೆಯಲ್ಲಿದ್ದ ಸಿಲಿಂಡರಗಳನ್ನು ಹೊರ ತೆಗೆದು ಬೆಂಕಿಯನ್ನು ನಂದಿಸಿದ್ದಾರೆ.

Tags:

error: Content is protected !!