Belagavi

ಸಿ.ಟಿ ರವಿ ಪ್ರಕರಣ; ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಹೇಳಿಕೆಗೆ ಸಚಿವ ಎಚ್.ಕೆ. ಪಾಟೀಲ ತಿರುಗೇಟು

Share

ಸಿ.ಟಿ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರು ಫೇಕ್ ಎನಕೌಂಟರ್ ಮಾಡುವ ಬಗ್ಗೆ ನೀಡಿದ ಹೇಳಿಕೆಗೆ ಸಚಿವ ಎಚ್.ಕೆ. ಪಾಟೀಲರು ತಿರುಗೇಟು ನೀಡಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡುವುದು ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ ಅವರಿಗೆ ಶೋಭೆ ತರುವುದಿಲ್ಲ ಎಂದಿದ್ದಾರೆ.

ಇಂದು ಬೆಳಗಾವಿಯಲ್ಲಿ ಸಿ.ಟಿ. ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರು ಇದನ್ನು ಫೇಕ್ ಎನಕೌಂಟರ್ ಎಂದು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಇದು ಅತ್ಯಂತ ದುರ್ದೈವ ಘಟನೆ. ಎಲ್ಲರೂ ತಲೆ ತಗ್ಗಿಸುವಂತಹದ್ದು. ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ ಅವರಿಗೆ ಈ ತರಹದ ಪದ ಬಳಕೆ ಮಾಡಿ ಇಂತಹ ಮಾತುಗಳನ್ನು ಸೃಷ್ಠಿ ಮಾಡುವುದು ಶೋಭೆ ತರುವುದಿಲ್ಲ ಎಂದರು.

ಇನ್ನು ಗಾಂಧಿ ಭಾರತ ಕಾರ್ಯಕ್ರಮದ ಹಿನ್ನೆಲೆ ಈಗಾಗಲೇ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅಧ್ಯಕ್ಷತೆಯಲ್ಲಿ ಸಭೆಯನ್ನು ಪೂರ್ವಭಾವಿ ಸಭೆ ನಡೆಸಲಾಗಿದೆ. ಬೆಳಗಾವಿಯ ವೀರಸೌಧದಲ್ಲಿ ಕ್ರೀಯಾಶೀಲ ಸಮಿತಿಯ ಸಭೆ ನಡೆಸಲಾಗುವುದು. ಡಿ. 27 ರಂದು ಬೆಳಗಾವಿಯ ಸಿ.ಪಿ.ಎಡ್ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು. ಅಲ್ಲದೇ ವಿಧಾನಮಂಡಲದ ಆವರಣದಲ್ಲಿ

ಮಹಾತ್ಮಾ ಗಾಂಧಿಜೀಯವರ ಪುತ್ಥಳಿಯನ್ನು ಅನಾವರಣಗೊಳಿಸಲಾಗುತ್ತಿದೆ. 1924 ರಲ್ಲಿ ನಡೆದ ಐತಿಹಾಸಿಕ ಕ್ಷಣವನ್ನು ಮೆಲುಕು ಹಾಕಿ ಮರುಸೃಷ್ಠಿ ಮಾಡುವ ಪ್ರಯತ್ನವನ್ನು ಮಾಡಲಾಗುತ್ತಿದೆ. ವರ್ಷವಿಡಿ ಈ ಕಾರ್ಯಕ್ರಮ ನಡೆಯಲಿದ್ದು, 25 ಕೋಟಿ ರೂಪಾಯಿ ವೆಚ್ಚವನ್ನು ಮಾಡಲಾಗಿದೆ ಎಂದರು.

ಇನ್ನು ಪಂಚಮಸಾಲಿ ಸಮಾಜದವರ ಮೇಲೆ ಲಾಠಿಚಾರ್ಜ್ ಮಾಡಿದ ಪೊಲೀಸ ಅಧಿಕಾರಿಗೆ ಬಹುಮಾನ ಘೋಷಣೆ ವಿಚಾರವಾಗಿ ಮಾತನಾಡಿದ ಅವರು, ಇವೆಲ್ಲ ಕೆಟ್ಟವಿಚಾರಗಳನ್ನು ಮುಂದಿಟ್ಟುಕೊಂಡು ಹೇಳುವ ಹೇಳಿಕೆಗಳು . ಈ ಹೇಳಿಕೆಗಳನ್ನ ಸಮುದಾಯಕ್ಕೆ ಹಚ್ಚುವುದು ಸೂಕ್ತವಲ್ಲ ಎಂದರು.

ಸಿಟಿ ರವಿ ಹಲ್ಲೆಗೆ ಯತ್ನಿಸಿದ ಲಕ್ಷ್ಮೀ ಹೆಬ್ಬಾಳಕರ್ ಬೆಂಬಲಿಗರ ವಿರುದ್ಧ ಈವರೆಗೂ ‌ಕೇಸ್ ದಾಖಲಿಸಿಕೊಳ್ಳದ ಪೊಲೀಸರು ಎಂಬ ಪ್ರಶ್ನೆಗೆ ಅದರ ಬಗ್ಗೆ ನನಗೆ ಮಾಹಿತಿ ಇಲ್ಲ, ಈ‌ ಬಗ್ಗೆ ಗೃಹ ಸಚಿವರು ಪ್ರತಿಕ್ರಿಯೆ ನೀಡ್ತಾರೆ ಎಂದರು.

Tags:

error: Content is protected !!