ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯ ಜಾಗೆಯನ್ನು ಸ್ವಾಧೀನಪಡೆಸಿಕೊಂಡು ಪರಿಹಾರ ನೀಡಿ ಹಳೆಯ ಸಿಡಿಪಿ ಮ್ಯಾಪ್ ಪ್ರಕಾರ ಬೆಳಗಾವಿಯ ಶಹಾಪುರದ ಬ್ಯಾಂಕ್ ಆಫ್ ಇಂಡಿಯಾ ಹತ್ತಿರದಿಂದ ಹಳೆಯ ಪಿ.ಬಿ. ರಸ್ತೆ ವರೆಗೆ ರಸ್ತೆಯನ್ನು ನಿರ್ಮಿಸಬೇಕೆಂದು ಸಾಮಾಜೀಕ ಕಾರ್ಯಕರ್ತ ಸುಜೀತ್ ಮುಳಗುಂದ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ಶಹಾಪೂರದ ಬ್ಯಾಂಕ್ ಆಫ್ ಇಂಡಿಯಾ ಹತ್ತಿರದಿಂದ ಹಳೆಯ ಪಿ.ಬಿ. ರೋಡ್ ವರೆಗಿನ ರಸ್ತೆಯಲ್ಲಿ ಹಳೆಯ ಸಿಡಿಪಿ ಮ್ಯಾಪ್ ಪ್ರಕಾರ ರಸ್ತೆಯನ್ನು ನಿರ್ಮಿಸಬಹುದಾಗಿದೆ. ಈ ಹಿಂದೆ ಭೂಸ್ವಾಧೀನ ಮಾಡುವಾಗ ಅನುಸರಿಸಬೇಕಾದ ಕ್ರಮಗಳನ್ನ ಅನುಸರಿಸದೇ ಇದ್ದುದ್ದರಿಂದ ನ್ಯಾಯಾಲಯವು ರಸ್ತೆಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲು ಆದೇಶಿಸಿತ್ತು. ಬೆಳಗಾವಿ ಶಹಾಪೂರದ ಬ್ಯಾಂಕ್ ಆಫ್ ಇಂಡಿಯಾ ಹತ್ತಿರದಿಂದ ಹಳೆಯ ಪಿ.ಬಿ. ರಸ್ತೆ ವರೆಗಿನ ರಸ್ತೆಯಲ್ಲಿ ಹಳೆಯ ಸಿಡಿಪಿ ಮ್ಯಾಪ್ ಪ್ರಕಾರ ಮಹಾಪಾಲಿಕೆ ವ್ಯಾಪ್ತಿಗೆ ಬರುವ ಜಮೀನನ್ನು ಸ್ವಾಧೀನಪಡಿಸಿಕೊಂಡು ಸೂಕ್ತ ಪರಿಹಾರವನ್ನು ವಿತರಿಸಿ ರಸ್ತೆಯನ್ನು ಪುನರಾರಂಭಿಸಬಹುದಾಗಿದೆ.
ಯೋಗ್ಯ ನಿಯಮ ಪಾಲಿಸದ ಹಿನ್ನೆಲೆ ಇಲ್ಲಿರುವ ಜನರು ನ್ಯಾಯಾಲದ ಮೆಟ್ಟಿಲೇರಿದಾಗ ನ್ಯಾಯಾಲಯವು 20 ಕೋಟಿ ರೂಪಾಯಿ ಪರಿಹಾರ ಪಾವತಿಸಲು ಅಥವಾ ಸ್ವಾಧೀನಗೊಂಡ ಜಮೀನನ್ನು ಮರಳಿಸಲು ಆದೇಶಿಸಿತ್ತು. ಮಹಾಪಾಲಿಕೆಯೂ ಸಂಚಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸಿ ಜಮೀನನ್ನು ಮರಳಿ ನೀಡಿತ್ತು. ಈ ಹಿನ್ನೆಲೆ ಅಲ್ಲಿನ ಜನರಿಗೆ ಸಂಚರಿಸಲು ತೊಂದರೆಯಾಗುತ್ತಿತ್ತು. ಹಲವಾರು ಸಂಘಟನೆಗಳು ಕೂಡ ಈ ಕುರಿತು ಧ್ವನಿ ಎತ್ತಿದ್ದು, ಇಂದು ಈ ಕುರಿತು ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ ಎಂದರು.
ಇನ್ನು ಮಹಾಪಾಲಿಕೆಯ ಚುನಾಯಿತ ಪ್ರತಿನಿಧಿಯಾಗಿರದೇ ಶಾಸಕರು ಪಾಲಿಕೆಯಲ್ಲಿ ಠರಾವುಗಳನ್ನು ಪಾಸ್ ಮಾಡುತ್ತಿದ್ದು, ಇದು ನಗರಸೇವಕರ ಅಪಮಾನವಾಗಿದೆ. ಇದು ಕೆಎಂಸಿ ಸೆಕ್ಷನ್ 99 ಅನ್ವಯ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರಸೀಡ್ ಮಾಡಬೇಕೆಂದು ಸರ್ಕಾರಕ್ಕೆ ಮನವಿಯ ಪತ್ರವನ್ನು ಬರೆಯಲಾಗುವುದು ಎಂದರು.