Belagavi

ಕುಡಿದು ಕಿರಿಕಿರಿ ಮಾಡುವ ತಮ್ಮನನ್ನು ಟ್ರ್ಯಾಕ್ಟರ್ ಹಾಯಿಸಿ ಕೊಂದ ಅಣ್ಣ…

Share

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕುಡಿತದ ದಾಸನಾಗಿ ಕಿರಿಕಿರಿ ಮಾಡುತ್ತಿದ್ದ ಒಡಹುಟ್ಟಿದ ತಮ್ಮನನ್ನು ಅಣ್ಣನೋರ್ವ ಟ್ರ್ಯಾಕ್ಟರ್ ಹಾಯಿಸಿ ಭೀಕರವಾಗಿ ಕೊಲೆಗೈದ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣ ಹೊರವಲಯದ‌ ಜಮೀನಿನಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಯರಗಟ್ಟಿಯ ಗೋಪಾಲ ಬಾವಿಹಾಳ ( 27) ಹತ್ಯೆಯಾದ ದುರ್ದೈವಿ. ನಿತ್ಯ ಮದ್ಯ ಸೇವಿಸಿ ಬಂದು ಪಿತ್ರಾರ್ಜಿತ ಆಸ್ತಿ ಅನುಭವಿಸಲು ನಿಮಗೆ ಬಿಡಲ್ಲ‌ ಎಂದು ಕಿರಿಕಿರಿ ಮಾಡುತ್ತಿದ್ದ ತಮ್ಮನನ್ನು ಅಣ್ಣ ಮಾರುತಿ ಬಾವಿಹಾಳ(30) ಕೊಲೆ ಟ್ರ್ಯಾಕ್ಟರ್ ಹಾಯಿಸಿ ಕೊಲೆ ಮಾಡಿದ್ದಾನೆ. ಮೃತ ಗೋಪಾಲ ಪ್ರತಿನಿತ್ಯ ಮದ್ಯ ಸೇವಿಸಿ ಬಂದು ಪಿತ್ರಾರ್ಜಿತ ಆಸ್ತಿ ಅನುಭವಿಸಲು ನಿಮಗೆ ಬಿಡಲ್ಲ‌ ಎಂದು ಕಿರಿಕಿರಿ ಮಾಡುತ್ತಿದ್ದನಂತೆ. ಅಲ್ಲದೇ ತನ್ನ ಪಾಲಿಗೆ ಬಂದಿದ್ದ ಟ್ರ್ಯಾಕ್ಟರ್ ಪತ್ನಿ ಮನೆಯಲ್ಲಿ ಇರಿಸಿದ್ದನಂತೆ. ತಮ್ಮನ ಕಿರಿಕಿರಿಗೆ ಬೇಸತ್ತು ಬೈಕ್ ಮೇಲೆ ಹೊರಟಿದ್ದ ಗೋಪಾಲನನ್ನು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಗೋಪಾಲ ತಂದೆ ಅರ್ಜುನ್‌ ಬಾವಿಹಾಳಗೆ ಮೂವರು ಗಂಡು ಮಕ್ಕಳಿದ್ದು, ಕಳೆದ ಹದಿನೈದು ದಿನಗಳ ಹಿಂದಷ್ಟೇ ತಮಗೆ ಬಂದ ಜಮೀನು ಪಾಲು, ಹಣ ಪಡೆದು ಬೇರೆಯಾಗಿದ್ದರಂತೆ. ಮೂವರು ಜನ ಸಹೋದರರಿಗೂ ಒಂದೊಂದು ಟ್ರಾಕ್ಟರ್ ಪಾಲು ಬಂದಿತ್ತಂತೆ.

ಮೃತ ಗೋಪಾಲನಿಗೆ ಬಂದಿದ್ದ ಟ್ರಾಕ್ಟರ್ ಆತ ಹೆಂಡತಿ ಮನೆಯಲ್ಲಿ ಇಟ್ಟಿದ್ದಕ್ಕೆ ಗಲಾಟೆ ಕೂಡ ನಡೆದಿತ್ತು ಎಂಬ ಮಾಹಿತಿಯೂ ಕೂಡ ಇದೆ. ನಾನು ದುಡಿದಿರೋನ್ನ ಹಾಳು ಮಾಡ್ತಿರುವೆ ಎಂದು ಆಗಾಗ್ಗೆ ಸಹೋದರರ ನಡುವೆ ಜಗಳ ಕೂಡ ನಡೆಯುತ್ತಿತ್ತು. ಕುಡಿತದ ದಾಸನಾಗಿದ್ದ ಗೋಪಾಲ ಮನೆಯವರಿಗೂ ಬೇಡಾಗಿದ್ದ. ಟ್ರ್ಯಾಕ್ಟರ್ ವಿಚಾರಕ್ಕೆ ಇಬ್ಬರು ಸಹೋದರರ ಮಧ್ಯೆ ಬೆಳಗ್ಗೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ತಮ್ಮನನ್ನು ಕೊಲೆ‌ ಮಾಡಲೆಂದೇ ಹೊಂಚಿಹಾಕಿ ಕುಳಿತಿದ್ದ ಮಾರುತಿ ಬಾವಿಹಾಳ ಯರಗಟ್ಟಿ ಹೊರವಲಯದ ಬೂದಿಕೊಪ್ಪ ರಸ್ತೆಯಲ್ಲಿ ಗೋಪಾಲ ಬೈಕ್ ಬರುವಾಗ ಟ್ರಾಕ್ಟರ್ ನಿಂದ ಡಿಕ್ಕಿ ಹೊಡೆಸಿ, ಜಮೀನಿನಲ್ಲಿ ಬಿದ್ದ ಗೋಪಾಲ ಮೇಲೆ ಮನಬಂದಂತೆ ಟ್ರ್ಯಾಕ್ಟರ್ ಹಾಯಿಸಿ ಹತ್ಯೆ ಮಾಡಿದ್ದಾನೆ. ಟ್ರ್ಯಾಕ್ಟರ್ ನಡಿ ಸಿಲುಕಿದ ಭಯಾನಕ ದೃಶ್ಯವನ್ನು ಸ್ಥಳಿಯರು ಮೊಬೈಲನಲ್ಲಿ ಸೆರೆ ಹಿಡಿದಿದ್ದಾರೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!