ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಬೆಳಗಾವಿಯ ಕ್ರೀಡಾಳುಗಳ ಸಮಸ್ಯೆಯ ಕುರಿತು ಧ್ವನಿ ಎತ್ತಿ, ಬೆಳಗಾವಿಯಲ್ಲಿ ಸ್ಟೇಡಿಯಂ ನಿರ್ಮಿಸಬೇಕೆಂದು ಆಗ್ರಹಿಸಿದ ದಕ್ಷಿಣ ಶಾಸಕ ಅಭಯ ಪಾಟೀಲ್ ಅವರನ್ನು ಬೆಲಗಾಮ್ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಮತ್ತು ಆಭಾ ಸ್ಫೋರ್ಟ್ಸ್ ಕ್ಲಬನ ವತಿಯಿಂದ ಸತ್ಮರಿಸಿ ಅಭಿನಂದಿಸಲಾಯಿತು.
ಇದು ವರೆಗೂ ನಡೆದ ಅಧಿವೇಶನದಲ್ಲಿ ಕ್ರೀಡೆ ಮತ್ತು ಕ್ರೀಡಾಳುಗಳ ಕುರಿತು ಯಾವ ಶಾಸಕರು ಧ್ವನಿಯನ್ನು ಎತ್ತಿಲ್ಲ. ಆದರೇ ಸದನದಲ್ಲಿ ಕ್ರೀಡಾಳುಗಳ ಸಮಸ್ಯೆಯ ಕುರಿತು ಧ್ವನಿ ಎತ್ತಿ, ಬೆಳಗಾವಿಯಲ್ಲಿ ಸ್ಟೇಡಿಯಂ ನಿರ್ಮಿಸಬೇಕೆಂದು ಆಗ್ರಹಿಸಿದ್ದಾರೆ. ಆದ್ದರಿಂದ ಬೆಲಗಾಮ್ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಮತ್ತು ಆಭಾ ಸ್ಫೋರ್ಟ್ಸ್ ಕ್ಲಬನ ವತಿಯಿಂದ ಸ್ಕೇಟಿಂಗ್ ತರಬೇತುದಾರ ಸೂರ್ಯಕಾಂತ್ ಹಿಂಡಲಗೇಕರ ಅವರು ಶಾಸಕ ಅಭಯ ಪಾಟೀಲರನ್ನು ಸತ್ಕರಿಸಿದರು.
ಈ ವೇಳೆ ಉಪಮಹಾಪೌರ ಆನಂದ ಚವ್ಹಾಣ, ನಗರಸೇವಕ ನಿತೀನ್ ಜಾಧವ್, ಗಿರೀಶ್ ಧೋಂಗಡಿ, ಮಂಗೇಶ ಪವಾರ್, ಅಭಿಜೀತ್ ಜವಳಕರ, ಶ್ರೀಶೈಲ್ ಕಾಂಬಳೆ, ಗೀತಾ ಸುತಾರ, ಸರೀತಾ ಪಾಟೀಲ್, ವಾಣಿ ಜೋಶಿ, ನಂದು ಮೀರಜಕರ್, ವಿನಾಯಕ ಕಾಮಕರ, ಸಾರಂಗ ರಾಘೋಚೆ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.