ಬೆಳಗಾವಿಯ ಕಾಹೇರನ ಕೌನ್ಸಿಲಿಂಗ್ ಸೇಲ್ ಮತ್ತು ಸೈಕೋಲಾಜಿ ವಿಭಾಗದ ಸಂಯುಕ್ತಾಶ್ರಯದಲ್ಲಿ ವಿಶ್ವ ಧ್ಯಾನ ದಿನವನ್ನು ಆಚರಿಸಲಾಯಿತು.
ಯೋಗಾ ತರಬೇತಿದಾರರಾದ ಆರತಿ ಪಡಸಲಗಿ ಅವರು ಧ್ಯಾನದಿಂದ ಸ್ವಾಸ್ಥ್ಯ ಮತ್ತು ನೆಮ್ಮದಿಯ ಜೀವನದ ಕುರಿತು ಜಾಗೃತಿಯನ್ನು ಮೂಡಿಸಿದರು. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಧ್ಯಾನದ ಮಹತ್ವವನ್ನು ತಿಳಿಸಿಕೊಟ್ಟರು. ಪ್ರಾಂಶುಪಾಲರಾದ ಡಾ. ನಂದಕುಮಾರ , 150 ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಕೌನ್ಸಿಲಿಂಗ್ ಸೇಲ್ ಮತ್ತು ಸೈಕೋಲಾಜಿ ವಿಭಾಗ ಪ್ರಮುಖರಾದ ಡಾ. ಯಾಸ್ಮಿನ್ ಅವರು ಗಣ್ಯರನ್ನು ಸ್ವಾಗತಿಸಿದರು. ಶಿರಲೇ ನಡಕಿನಮನಿ ಮತ್ತು ರಮ್ಯಾ ಯಲ್ಲಟ್ಟಿ ಅವರು ಕೊನೆಯಲ್ಲಿ ವಂದಿಸಿದರು.