ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಮೊಬೈಲ್ ಮತ್ತು ಗಾಂಜಾ ಪತ್ತೆಯಾಗಿರುವ ಎರಡು ಪ್ರಕರಣಗಳು ಒಂದೇ ವಾರದಲ್ಲಿ ಬೆಳಕಿಗೆ ಬಂದಿವೆ.
ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಮೊಬೈಲ್ ಮತ್ತು ಗಾಂಜಾ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 11ರಂದು ಶಾಹೀದ್ ಖುರೇಷಿ ವಿರುದ್ಧ ಮತ್ತು ಡಿಸೆಂಬರ್ 21ರಂದು ಗೋಕಾಕ್ ಮೂಲದ ಗೋಕಾಕ್ ಹಡಗಿನಾಳ್ ವಿರುದ್ಧ ಕೇಸ್ ದಾಖಲಾಗಿವೆ.
ಅಲ್ಲದೇ ಹೊರಗಿನಿಂದ ಜೈಲಿನ ಒಳಗೆ ಮೊಬೈಲ್ ಎಸೆದಿದ್ದ ಮಾರುತಿ ಅಡಕೈ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಜೈಲಿನ ಕಾವಲಿನಲ್ಲಿ ಇದ್ದ ಕೈಗಾರಿಕಾ ಭದ್ರತಾಪಡೆಯಿಂದ ಪ್ರಕರಣ ಬೆಳಕಿಗೆ ಬಂದಿದೆ. ಜೈಲಿನ ಮುಖ್ಯ ಅಧೀಕ್ಷಕ ಮಲ್ಲಿಕಾರ್ಜುನ ಕೊನ್ನೂರರಿಂದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.