Belagavi

ಬಿಮ್ಸನಲ್ಲಿ ಮತ್ತೋರ್ವ ಬಾಣಂತಿ ಸಾವು…!!!

Share

ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಸಾವಿಗಿಡಾಗಿದ್ದಾಳೆ. ಕುಟುಂಬಸ್ಥರಿಂದ ವೈದ್ಯರ ನಿರ್ಲಕ್ಷವೇ ಈ ಸಾವಿಗೆ ಕಾರಣ ಎಂದು ಆರೋಪಿಸಲಾಗಿದೆ. ಬಿಮ್ಸ್ ಮೇಲೆ ವಿಶ್ವಾಸವಿಲ್ಲ ಮರಣೋತ್ತರ ಪರೀಕ್ಷೆಗೆ ಬೇರೆಡೆ ನೀಡಿ ಎಂದು ಕುಟುಂಬಸ್ಥರು ಪಟ್ಟು ಹಿಡಿದರು.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೌಡವಾಡದ 20 ವರ್ಷದ ವೈಶಾಲಿ ಕೊಟಬಾಗಿ ಎಂಬ ಗರ್ಭಿಣಿಯನ್ನು ನಿನ್ನೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಪ್ರಸೂತಿಗಾಗಿ ದಾಖಲಿಸಲಾಗಿತ್ತು. ನಿನ್ನೆ ಸಿಜೇರಿಯನ್ ಡಿಲೆವರಿ ಬಳಿಕ ಆರೋಗ್ಯವಾಗಿದ್ದ ತಾಯಿ ಇಂದು ಮುಂಜಾನೆ ಎದೆಯಲ್ಲಿ ನೋವು ಕಾಣಿಸಿಕೊಂಡು ಸಾವನ್ನಪ್ಪಿದ್ದಾಳೆ. ಇದಕ್ಕೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಕುಟುಂಬಸ್ಥರು ದೂರಿದರು. ಅಲ್ಲದೇ ತಮಗೆ ಬಿಮ್ಸ್ ಮೇಲೆ ವಿಶ್ವಾಸವಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಬೇರೆಡೆ ನೀಡಬೇಕೆಂದು ಪಟ್ಟು ಹಿಡಿದರು.

ಪ್ರಸೂತಿ ವಿಭಾಗದ ಎದುರು ಹಣ ನೀಡಿ ಖಾಸಗಿ ಆಸ್ಪತ್ರೆಗೆ ಹೋಗಿ, ಜೀವವನ್ನು ಉಳಿಸಿಕೊಳ್ಳಿ. ಇಲ್ಲಿ ಯಾರೂ ರೋಗಿಗಳನ್ನು ವಿಚಾರಿಸುವವರು ಇಲ್ಲ. ಎದೆ ನೋವು ಕಾಣಿಸಿಕೊಳ್ಳುತ್ತಿದೆ ಯಾರೂ ಬಂದು ನೋಡಿ ಎಂದು ಅಳುತ್ತಾ ಗೋಳಾಡುತ್ತ ಓಡಿದರೂ ಯಾರಿಂದಲೂ ಕೂಡ ಸ್ಪಂದನೆ ದೊರೆತಿಲ್ಲ ಎಂದು ಮೃತ ವೈಶಾಲಿ ಅಜ್ಜಿ ಗೋಳಾಡಿದ್ದು, ಹೃದಯ ಕಲಕುತ್ತಿತ್ತು.

ಪತ್ನಿಯ ಆರೋಗ್ಯದಲ್ಲಿ ಅಸ್ವಸ್ಥತೆ ಕಂಡು ಬಂದಾಗ ಹಲವು ಬಾರಿ ಕರೆದರೂ ಸಿರಿಯಸ್ ಆದ ಮೇಲೆ ಬಂದು ನೋಡಿದ್ದಾರೆ. ವೈದ್ಯರ ನಿರ್ಲಕ್ಷದಿಂದಲೇ ತಮ್ಮ ಪತ್ನಿ ಸಾವನ್ನಪ್ಪಿದ್ದಾಳೆಂದು ಮೃತ ವೈಶಾಲಿ ಪತಿ ಈರಣ್ಣ ಕೊಟಬಾಗಿ ಆರೋಪಿಸಿದ್ದಾರೆ.

ನಿನ್ನೆ ಬೆಳಿಗ್ಗೆ ವೈಶಾಲಿ ಸಿಜೇರಿನ್ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೇ ಗಂಡ ಮಗು ಹೊಟ್ಟೆಯಲ್ಲೇ ಅಸು ನೀಗಿದೆ. ನಿನ್ನೆ ದಿನವಿಡಿ ಹುಷಾರಿದ್ದ ವೈಶಾಲಿಗೆ ಇಂದು ಬೆಳಗಿನ ಜಾವ ಎದೆ ನೋವು ಕಾಣಿಸಿಕೊಂಡಿದೆ. ವೈದ್ಯರ ಗಮನಕ್ಕೆ ತಂದು ಯಾರೂ ಕೂಡ ಗಮನಹರಿಸಿಲ್ಲ ಎಂದು ವೈಶಾಲಿ ತಾಯಿ ಆರೋಪಿಸಿದ್ದಾಳೆ.

ಮಗಳ ಎದೆಯಲ್ಲಿ ನೋವಾಗುತ್ತಿದೆ ಎಂದು ಸತತವಾಗಿ 2 ಗಂಟೆಗಳ ಕಾಲ ಸತತವಾಗಿ ವೈದ್ಯರ ಗಮನಕ್ಕೆ ತರಲಾಗಿದೆ. ಆದರೂ ಸರಿಯಾಗಿ ಸ್ಪಂದನೆ ದೊರೆತಿಲ್ಲ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಆಕೆಯನ್ನು ಐಸಿಯುನಲ್ಲಿ ಇರಿಸಲಾಗಿದೆ. ಕೆಲ ಸಮಯದ ನಂತರ ತೀರಿಕೊಂಡಿದ್ದಾಳೆಂದು ಹೇಳಿದ್ದಾರೆ. ವೈದ್ಯರ ನಿರ್ಲಕ್ಷಿದಿಂದಲೇ ಸಾವನ್ನಪ್ಪಿದ್ದಾಳೆಂದು ಪರಶರಾಮ ಸಿಂಗ್ ರಜಪೂತ್ ಆರೋಪಿಸಿದರು.

ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಎಪಿಎಂಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

 

Tags:

error: Content is protected !!