Belagavi

ಕಳೆದು ಹೋದ ಐ-ಫೋನ್ ಹಿಂದುರಿಗಿಸಿ ಮಾನವೀಯತೆ ಮೆರೆದ ಸಂಚಾರಿ ಪೊಲೀಸ್ ಸಿಬ್ಬಂದಿ…

Share

ಸಂಚಾರ ನಿರ್ವಹಣೆ ಮಾಡುವುದರ ಐ ಫೋನ್ ಕಳೆದುಕೊಂಡಿದ್ದವರಿಗೆ ಐ ಫೋನ್ ವಿತರಿಸಿ ದಕ್ಷಿಣ ಸಂಚಾರ ಪೊಲೀಸ್ ಸಿಬ್ಬಂದಿ ಶಿವಾನಂದ ಟಪಾಲರ ಮಾನವೀಯತೆ ಮೆರೆದಿದ್ದಾರೆ. ಇವರ ಈ ಕಾರ್ಯಕ್ಕೆ ನಗರದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಚಾರ ದಕ್ಷಿಣ ಪೊಲೀಸ್ ಠಾಣೆಯ ಸಿಬ್ಬಂದಿ ಶಿವಾನಂದ ಟಪಾಲದಾರ ನಿನ್ನೆ ಸಂಜೆ ಬೆಳಗಾವಿಯ ಸೆಕೆಂಡ್ ರೈಲ್ವೆ ಹತ್ತಿರ ಕರ್ತವ್ಯ ನಿರ್ವಹಿಸುವಾಗ ಸಿಕ್ಕಂತ Iphone 12 mini ಅಂದಾಜು 50,000 ಕಿಮ್ಮತ್ತಿನ ಮೊಬೈಲನ್ನು ಇದರ ಮಾಲೀಕರಾದ ಮಜಗಾಂವ ಕಲ್ಮೇಶ್ವರ ನಗರ ಮೂರನೇ ಕ್ರಾಸನ ರಹಿವಾಸಿ ಸಂತೋಷ್ ಮಾರುತಿ ದಳವಿ ಅವರಿಗೆ ಹಸ್ತಾಂತರಿಸಿದ್ದಾರೆ. ದುಬಾರಿ ಬೆಲೆ ಬಾಳುವ ಐ ಪೋನ್

ಕಳೆದುಕೊಂಡಿದ್ದ ಸಂತೋಷ ದಳವಿ ಅವರಿಗೆ ಪ್ರಾಮಾಣಿಕವಾಗಿ ಐ ಪೋನ್ ಹಿಂದಿರುಗಿಸಿ ಎಲ್ಲರ‌ ಮೆಚ್ಚುಗೆಗೆ ಪಾತ್ರವಾಗಿದ್ದಾರೆ‌. ಸಂಚಾರ ಪೊಲೀಸ್ ಶಿವಾನಂದ ಅವರ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಶ್ಲಾಘನೆಗೆ ವ್ಯಕ್ತಪಡಿಸಿದ್ದಾರೆ.

Tags:

error: Content is protected !!