Belagavi

ಬೆಂಬಲ ಬೆಲೆ ಘೋಷಿಸಿಯೇ ಕಬ್ಬನ್ನುರಿಸುವ ಹಂಗಾಮು ಆರಂಭಿಸಿ…

Share

ಕಬ್ಬಿಗೆ ಬೆಂಬಲ ಬೆಲೆ ಘೋಷಿಸದೇ ಕಬ್ಬನ್ನುರಿಸುವ ಹಂಗಾಮವನ್ನು ಆರಂಭಿಸದಂತೆ ಮತ್ತು ಮೈಕ್ರೋ ಫೈನಾನ್ಸಗಳ ಕಿರುಕುಳವನ್ನು ತಪ್ಪಿಸುವಂತೆ ಆಗ್ರಹಿಸಿ ಇಂದು ಬೆಳಗಾವಿಯಲ್ಲಿ ರೈತ ಸಂಘದಿಂದ ಬಾರುಕೋಲು ಪ್ರತಿಭಟನೆ ನಡೆಸಲಾಯಿತು.

ಕಬ್ಬಿಗೆ ಬೆಂಬಲ ಬೆಲೆ ಘೋಷಿಸದೇ ಕಬ್ಬನ್ನುರಿಸುವ ಹಂಗಾಮವನ್ನು ಆರಂಭಿಸದಂತೆ ಮತ್ತು ಮೈಕ್ರೋ ಫೈನಾನ್ಸಗಳ ಕಿರುಕುಳವನ್ನು ತಪ್ಪಿಸುವಂತೆ ಆಗ್ರಹಿಸಿ ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ಬಾರುಕೋಲು ಚಳುವಳಿ ನಡೆಸಿದರು.

ಮಹಾರಾಷ್ಟ್ರದಲ್ಲಿ ಪ್ರತಿ ಟನ್ ಕಬ್ಬಿಗೆ 3700 ರೂ. , ಗುಜರಾತದಲ್ಲಿ 4000 ರೂ.ಗೂ ಹೆಚ್ಚು ಬೆಲೆ ನೀಡಲಾಗುತ್ತಿದೆ. ಅದರಂತೆ ಕರ್ನಾಟಕದಲ್ಲಿಯೂ ಪ್ರತಿ ಟನ್ ಕಬ್ಬಿಗೆ 4000 ಕ್ಕೂ ಹೆಚ್ಚು ರೂಪಾಯಿ ಬೆಂಬಲ ಬೆಲೆ ನೀಡಬೇಕು. ನವೆಂಬರ್ 15 ರಿಂದ ಕಬ್ಬನ್ನುರಿಸುವ ಹಂಗಾಮು ಆರಂಭಗೊಳ್ಳಲಿದೆ. ಸರ್ಕಾರ ಸಕ್ಕರೆ ಕಾರ್ಖಾನೆ ಸಂಚಾಲಕರ ಸಭೆ ನಡೆಸಿ, ಅವರಿಗೆ ಹೆಚ್ಚುವರಿ ಬೆಲೆ ನೀಡುವಂತೆ ಸೂಚಿಸಬೇಕು. ಅಲ್ಲದೇ ಬಾಕಿ ಬಿಲನ್ನು ಕೂಡ ಕೂಡಲೇ ನೀಡಬೇಕೆಂದು ಸ್ವಾಭಿಮಾನಿ ರೈತ ಸಂಘದ ಅಧ್ಯಕ್ಷ ಮಾಜಿ ಸಂಸದ ರಾಜು ಶೆಟ್ಟಿ ಆಗ್ರಹಿಸಿದರು.

ವನ್ ನೇಷನ್ ವನ್ ಎಲೆಕ್ಷನ್ ಎನ್ನುವ ಪ್ರಧಾನಿ ಮೋದಿ ದೇಶದ ಎಲ್ಲ ಸಕ್ಕರೆ ಕಾರ್ಖಾನೆಗಳೂ 4440 ರೂಪಾಯಿ ಪ್ರತಿ ಟನ್ ಬೆಲೆ ನಿಗದಿಪಡಿಸಬೇಕು. ಅಲ್ಲದೇ ಫೈನಾನ್ಸಗಳ ಕಿರುಕುಳ, ರೈತರ ಸಾಲ ಮನ್ನಾ, 2017 ರಿಂದ ಕುಂಠಿತಗೊಂಡ ಯೋಜನೆಗಳಿಂದ ರೈತಾಪಿ ವರ್ಗ ಸಂಕಷ್ಟಕ್ಕಿಡಾಗಿದೆ. ಪಡೆದ ಸಾಲಕ್ಕಿಂತ ಬಡ್ಡಿದರ ಹೆಚ್ಚಾಗಿದ್ದು, ರೈತರ ಮೇಲೆ ಅನ್ಯಾಯವಾಗುತ್ತಿದೆ. ಇದೇ ರೀತಿ ಮುಂದುವರೆದರೇ ಉಗ್ರ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕೂಲಿ ಕಾರ್ಮಿಕ ಸಂಘದ ಅಧ್ಯಕ್ಷ ಮಹಾಂತೇಶ ಕಾಮತ್ ಎಚ್ಚರಿಕೆಯನ್ನು ನೀಡಿದರು.

ಬಡವರು ಮತ್ತು ರೈತರನ್ನು ದಿವಾಳಿ ಎಬ್ಬಿಸುತ್ತಿರುವ ಮೈಕ್ರೋ ಫೈನಾನ್ಸಗಳು ಹಲವಾರು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಒತ್ತಡ ಹೇರುವ ಮೈಕ್ರೋ ಫೈನಾನ್ಸಗಳ ವಿರುದ್ಧ ಉಗ್ರ ಕ್ರಮ ಕೈಗೆತ್ತಿಕೊಳ್ಳಲಾಗುವುದು. ಇನ್ನು ಈ ಹಂಗಾಮಿನಲ್ಲಿ ಮಹಾರಾಷ್ಟ್ರ ಮಾದರಿಯಲ್ಲಿ ಕಬ್ಬಿನ ಬಿಲ್ ನೀಡಬೇಕು. ಬಿಲ್ ಘೋಷಿಸದೇ ಯಾವುದೇ ಸಕ್ಕರೆ ಕಾರ್ಖಾನೆಗಳು ಕಬ್ಬನ್ನುರಿಸುವ ಹಂಗಾಮನ್ನು ಆರಂಭಿಸಿದರೇ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನು ರೈತ ಸಂಘದ ರಾಜ್ಯಾಧ್ಯಕ್ಷರಾದ ದಿನೇಶ್ ಎಚ್ಚರಿಸಿದರು.

ಈ ಕುರಿತಾದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

Tags:

error: Content is protected !!