Gokak

ದೇವಸ್ಥಾನದಲ್ಲಿ ಮಲಗಿದ್ದವನನ್ನು ಕೊಚ್ಚಿ ಕೊಂದವ ನ್ಯಾಯಾಂಗ ಬಂಧನಕ್ಕೆ…!!!

Share

ಭಜನೆ ಮುಗಿಸಿ ದೇವಸ್ಥಾನದಲ್ಲಿ ಮಲಗಿದ್ದ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ನಿನ್ನೆ ಗೋಕಾಕ ತಾಲೂಕಿನ ಮಮದಾಪೂರದಲ್ಲಿ ನಡೆದಿದ್ದು, ಕೊಲೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾ ಶಂಕರ ಗುಳೇದ ತಿಳಿಸಿದರು.

ಅವರು ಇಂದು ಬೆಳಗಾವಿಯಲ್ಲಿ ಮಾಧ್ಯಮಗಾರಿಗೆ ಮಾಹಿತಿಯನ್ನು ನೀಡಿದರು. ಗೋಕಾಕ ತಾಲೂಕಿನ ಮಮದಾಪೂರ ಗ್ರಾಮದ ಬೀರ ಸಿದ್ದೇಶ್ವರ ಭಜನೆ ಮುಗಿಸಿ ಮಲಗಿದ್ದ ಮಡ್ಡೆಪ್ಪ ಯಲ್ಲಪ್ಪ ಬಾನಸಿ (47) ಎಂಬಾತನ ಮೇಲೆ ಬೀರಪ್ಪ ಸಿದ್ದಪ್ಪ ಸುಣಧೋಳಿ ಎಂಬಾತ ಮಾರಣಾಂತಿಕ ಹಲ್ಲೆ ನಡೆಸಿದ್ದ. ಹಲ್ಲೆಯಲ್ಲಿ ಗಾಯಗೊಂಡಿದ್ದ ಮಡ್ಡೆಪ್ಪನನ್ನು ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಕಾರಿಯಾಗದೇ ಮಡ್ಡೆಪ್ಪ ಸಾವನ್ನಪ್ಪಿದ್ದಾರೆ. ಮೃತನ ಪತ್ನಿಯೂ ನೀಡಿದ ದೂರನನ್ವಯ ಪ್ರಕರಣ ದಾಖಲಾಗಿದ್ದು, ಆರೋಪಿ ಬೀರಪ್ಪ ಸುಣಧೋಳಿಯನ್ನು ಈಗಾಗಲೇ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇಬ್ಬರಲ್ಲೂ ಜಮೀನಿನ ಎಲ್ಲೆಗೆ ಸಂಬಂಧಿಸಿದಂತೆ ವ್ಯಾಜ್ಯ ನಡೆದಿತ್ತು ಎಂಬ ಮಾಹಿತಿ ದೊರೆತಿದೆ ಎಂದರು.

Tags:

error: Content is protected !!