Gokak

ನಮ್ಮ ಬೇಡಿಕೆಗಳನ್ನು ಈಡೇರಿಸಿ; ಗೋಕಾಕಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ ಗ್ರಾಮಲೆಕ್ಕಾಧಿಕಾರಿಗಳು

Share

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಗ್ರಾಮ ಲೆಕ್ಕಾಧಿಕಾರಿಗಳು ಕೈಗೆ ಕಪ್ಪು ಬಟ್ಟೆಯನ್ನು ಕಟ್ಟಿಕೊಂಡು ರಾಜ್ಯ ಸರ್ಕಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಗೋಕಾಕ ತಹಶೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು. ಗೋಕಾಕ ತಹಶೀಲ್ದಾರ್ ಡಾ: ಮೋಹನ ಬಸ್ಮೆ ರವರ ಮುಖಾಂತರ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಬಗ್ಗೆ ಹಾಗೂ ಸೇವಾ ವಿಷಯದಲ್ಲಿ ಸಂಬಂಧಿಸಿದಂತೆ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿದರು. ಇದೇ ವೇಳೆ ಗ್ರಾಮ ಲೆಕ್ಕಾಧಿಕಾರಿಗಳ ಜಿಲ್ಲಾ ಉಪಾದಕ್ಷ ಸಂತೋಷ ಪಾಶ್ಚಾಪುರ ಮಾತನಾಡಿ ಹಲವಾರು ವರ್ಷಗಳಿಂದ ನಮ್ಮ ಬೇಡಿಕೆ ಈಡೇರಿಕೆಗಾಗಿ ಹಲವು ಸರ್ಕಾರಗಳಿಗೆ ಮನವಿ ಪತ್ರ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಈ ಸಂದರ್ಬದಲ್ಲಿ ಗ್ರಾಮಲೆಕ್ಕಾಧಿಕಾರಿಗಳ ಮುಷ್ಕರಕ್ಕೆ ಬೆಂಬಲ ಸೂಚಿಸಿ ದಲಿತ ಸಂಘಟನೆಯ ರಾಜ್ಯ ಸಂಚಾಲಕ ರಮೇಶ ಮಾದರ ಮಾತನಾಡಿ ಹಿರಿಯ ಅಧಿಕಾರಿಗಳು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬೀಡುವುದನ್ನು ಮೊದಲು ನಿಲ್ಲಿಸಬೇಕು,ಯಾಕೆಂದರೆ ಮಳೆಗಾಲದಲ್ಲಿ ,ಅತಿವೃಷ್ಟಿ, ಅನಾವೃಷ್ಟಿ ಹಾಗೂ ಇನ್ನೂಳಿದ ಸಂದರ್ಭದಲ್ಲಿ ಮುಂಚೂಣಿಯಲ್ಲಿ ಬರುವವರು ಗ್ರಾಮ ಲೆಕ್ಕಾಧಿಕಾರಿಗಳು ಅಂತವರಿಗೆ ತಾವು ಆದೇಶ ಮಾಡುವುದಕ್ಕೆ ಮುಂಚೆ ಅವರಿಗೆ ತರಬೇತಿ ನೀಡಿ,ಅದಕ್ಕೆ ತಕ್ಕಂತೆ ಉಪಕರಣಗಳನ್ನು ನೀಡಬೇಕೆಂದು ಒತ್ತಾಯಿಸಿ ಗ್ರಾಮಲೆಕ್ಕಾದಿಕಾರಿಗಳ ಬೇಡಿಕೆಗಳು ಸಮಂಜಸವಾಗಿದ್ದು ಆದಷ್ಟು ಬೇಗನೆ ಇಡೆರಿಸುವಂತೆ ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಒನ್ ಪ್ರಾಂಚೈಸಿದಾರ ಬಸವರಾಜ ಹೀರೆಮಠ ಮಾತನಾಡಿ ಬಿಡುವಿಲ್ಲದೆ ಹಗಲು ರಾತ್ರಿ ಗ್ರಾಮಲೆಕ್ಕಾಧಿಕಾರಿಗಳು ತಮ್ಮ ಕಾರ್ಯ ಮಾಡುತಿದ್ದಾರೆ.
ಅಂತವರಿಗೆ ಸರಕಾರ ಯಾವುದೆ ರೀತಿ ಹೊರೆ ಹಾಕಬಾರದು,ತಾವು ಆದೇಶ ಮಾಡುವದಕ್ಕಿಂತ ಮೊದಲು ಅವರಿಗೆ ತರಬೇತಿ ನೀಡಿದ್ದಲ್ಲಿ ಮಾಡುವ ಕೆಲಸ ನಿರ್ಭಯದಿಂದ ಮಾಡಲು ಸಹಕಾರಿಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಗೋಕಾಕ ತಾಲೂಕಾ ಅದ್ಯಕ್ಷ ದಿಲಾವರ ದೇಸಾಯಿ, ಕಂದಾಯ ನೀರಿಕ್ಷಕರಾದ ಶಿವಾನಂದ ಹೀರೆಮಠ, ವಿ ಪಿ ಗಾಯದ, ಎಸ್ ಎನ್ ಹಿರೇಮಠ, ಎಸ್ ಎಮ್ ಪೂಜೇರಿ, ವಿ ಕೆ ಬಂಡಿವಡ್ಡರ, ಟಿ ಎಲ್ ಪಮ್ಮಾರ,ಜಿಲ್ಲಾ ಗ್ರಾಮ ಸಹಾಯಕ ಅದ್ಯಕ್ಷ ಪರಸಪ್ಪ ತಳವಾರ. ಉಪಾದಕ್ಷ ವೆಂಕಟೇಶ ಕೇಳಗೇರಿ,ಬಸವರಾಜ ಬೆಲ್ಲದ, ಹಾಗೂ ತಾಲೂಕಿನ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು ಹಾಗು ಗ್ರಾಮ ಸಹಾಯಕರು ಉಪಸ್ತಿತರಿದ್ದರು.

Tags:

error: Content is protected !!