Kagawad

ಕಾಗವಾಡ ತಾಲೂಕಿನ ಉಗಾರ ಪಟ್ಟಣದಲ್ಲಿ ಶಿಕ್ಷಕರ ದಿನಾಚರಣೆ ಸಂಭ್ರಮ

Share

ಕಾಗವಾಡ :  ಯಾರು ವ್ಯಕ್ತಿಯ ಆತ್ಮವನ್ನು ಜಾಗೃತಗೊಳಿಸುವವರು, ವ್ಯಕ್ತಿತ್ವಕ್ಕೆ ಮೆರಗು ನೀಡುವವರು, ಬುದ್ಧಿಗೆ ಬಲ ನೀಡಿ ಹೃದಯದಲ್ಲಿ ಭಾವವನ್ನು ವಿಕಾಸ ಮಾಡುವವರೊ ಅವರಿಗೆ ಶಿಕ್ಷಕರೆಂದು ಕರೆಯುತ್ತಾರೆಯೆಂದು ಸದಲಗಾ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕರಾದ ವಿರೇಶ ಪಾಟೀಲ ಉಗಾರದಲ್ಲಿ ಹೇಳಿದರು.

ಗುರುವಾರ ರಂದು ಜಿಲ್ಲಾ ಪಂಚಾಯಿತಿ ಬೆಳಗಾವಿ, ಶಾಲಾ ಶಿಕ್ಷಕರ ಇಲಾಖೆ, ಚಿಕ್ಕೋಡಿ, ತಾಲೂಕಾಡಳಿತ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕಾಗವಾಡ ಇವರ ಸಂಯುಕ್ತಾಶ್ರಯದಲ್ಲಿ ಕಾಗವಾಡ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ ಉಗಾರದ ಜೈನ ಸಮಾಜ ಮಂಡಳ ಕನ್ನಡ ಮಾಧ್ಯಮದ ಶಾಲಾ ಭವನದಲ್ಲಿ ಆಯೋಜಿಸಲಾಗಿತ್ತು. ಉಪನ್ಯಾಸಕರಾಗಿ ಆಗಮಿಸಿದ್ದ ವಿರೇಶ ಪಾಟೀಲ ಇವರು ಮಾತನಾಡಿದರು.

ಅವರು ಮುಂದೆವರೆದು ಮಾತನಾಡುವಾಗ, ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ ಇವರ ಜನ್ಮದಿನದಂದು ಶಿಕ್ಷಕರ ದಿನಾಚರಣೆಯೆಂದು ಆಚರಿಸಲಾಗುತ್ತದೆ. ಅವರು ಶಿಕ್ಷಕರಿಗೆ ನೀಡಿರುವ ಇದೊಂದು ಸನ್ಮಾನವೆಂದು ಹೇಳಿ ಶಿಕ್ಷಕರ ಬಗ್ಗೆ ವಿಚಾರ ವ್ಯಕ್ತಪಡಿಸುವಾಗ, ತಾವು ಅಳಿದು ಹೋಗುತ್ತಾ ಬೇರೆಯವರಿಗೆ ಬೆಳಕು ನೀಡುವ ಮೊಂಬತ್ತಿ ಅಂದರೆ ಶಿಕ್ಷಕ. ತನ್ನಕ್ಕಿಂತಲೂ ಕಿರಿಯರಿಗೆ ನೆರವುವಾಗಲು ಕಾತರನಾಗಿರುವ ಹಿರಿಯ ವಿದ್ಯಾರ್ಥಿ ಅಂದರೆ ಶಿಕ್ಷಕನೆಂದು ಉಪನ್ಯಾಸಕ ವಿರೇಶ ಪಾಟೀಲ ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಕಾಗವಾಡ ತಹಶೀಲ್ದಾರ ರಾಜೇಶ ಬುರ್ಲಿ ಮಾತನಾಡಿ, ಸಮಾಜದಲ್ಲಿ ಓರ್ವ ವೈದ್ಯ ತನ್ನ ವೃತ್ತಿಯಲ್ಲಿ ತಪ್ಪಿದ್ದರೆ ಓರ್ವ ರೋಗಿಯವನ್ನು ಕಳೆದುಕೊಳ್ಳಬಹುದು. ಓರ್ವ ಇಂಜಿನಿಯರ ಕಟ್ಟಡ ನಿರ್ಮಿಸುವಾಗ ತಪ್ಪಿದರೆ ಒಂದು ಮನೆ ಉರುಳಬಹುದು. ಆದರೆ ಓರ್ವ ಶಿಕ್ಷಕ ತನ್ನ ವೃತ್ತಿಯಲ್ಲಿ ಕೊಂಚದಷ್ಟು ತಪ್ಪುಮಾಡಿದರೆ ಇಡೀ ಪಿಳಿಗೆಯು ದಾರಿತಪ್ಪಬಹುದು. ಅಂದರೆ ಶಿಕ್ಷಕ, ಈ ವೃತ್ತಿ ಪವೀತ್ರವಾದದ್ದು. ನಿವೆಲ್ಲ ಶಿಕ್ಷಕರು ಪುಣ್ಯವಂತರು, ನಿಮ್ಮ ಈ ವೃತ್ತಿ ಸಮಾಜದಲ್ಲಿ ಬಹಳ ದೊಡ್ಡ ಪಾತ್ರ ವಹಿಸುತ್ತದೆ, ಇದನ್ನು ಪ್ರಾಮಾಣಿಕವಾಗಿ ನಿರ್ವಹಿರಿಸಿಯೆಂದು ಸಲಹೆ ನೀಡಿ ಕಾಗವಾಡ ತಾಲ್ಲೂಕಿನ ಎಲ್ಲ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆ ನಿಮಿತ್ಯ ಶುಭಾಶಯ ಕೋರಿದರು.

 

ಸಮಾರಂಭದಲ್ಲಿ 21 ನಿವೃತ್ತ ಶಿಕ್ಷಕರಿಗೆ ಮತ್ತು ನಾಲ್ಕು ಜನ ಸೌಕ್ಟ್ಸ್ ಆ್ಯಂಡ್ ಗೈಡ್ಸ್‍ನಲ್ಲಿ ಸಾಧನೆಮಾಡಿರುವ ಶಿಕ್ಷಕರಿಗೆ, 10ನೇ ತರಗತಿಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ಶೇಡಬಾಳದ ಕೃಷ್ಣಾ ಶಿಕ್ಷಣ ಸಮೀತಿಯ ಸಿದ್ಧಾಂತ ಗಡಗೆ ವಿದ್ಯಾರ್ಥಿಗೆ ಬೋಧನೆಮಾಡಿರುವ ಎಲ್ಲ ಶಿಕ್ಷಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಕಾಗವಾಡ ಬಿಇಓ ಎಂ.ಆರ್.ಮುಂಜೆ ಸ್ವಾಗತಿಸಿ ಪ್ರಾಸ್ತಾವಿಸಿದರು. ಮುಖ್ಯ ಅತಿಥಿಗಳಾಗಿ ಉಗಾರ ಪುರಸಭೆ ಅಧ್ಯಕ್ಷೆ ಶ್ರೀಮತಿ ಫಾತಿಮಾ ನದಾಫ, ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ, ಮುಖ್ಯಾಧಿಕಾರಿ ಭಾವುಸಾಹೇಬ ನದಾಫ, ಸಿಡಿಪಿಓ ಸಂಜೀವಕುಮಾರ ಸದಲಗೆ, ಉಗಾರ ಜೈನ ಸಮಾಜ ಪ್ರೌಢಶಾಲೆಯ ಅಧ್ಯಕ್ಷ ಅಣ್ಣಾಸಾಬ ದೇವಮೊರೆ, ಬಸವರಾಜ ಅಡವಿಮಠ, ದಹಿಕ ಶಿಕ್ಷಣ ಸಂಯೋಜಕ ಎಸ್.ಬಿ.ಹಳಿಗೌಡರ, ಅಕ್ಷರ ದಾಸೋಹ ಕಾಗವಾಡ ತಾಲ್ಲೂಕಿನ ಸಹಾಯಕ ನಿರ್ದೇಶಕ ಎಂ.ವ್ಹಿ.ನಾಮದಾರ, ಶಿಕ್ಷಣ ಸಂಯೋಜಕ ಸಿ.ಬಿ.ಮದಬಾವಿ, ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಬಿ.ಸಂಕಪಾಳ, ರಾಜ್ಯ ನೌಕರರ ಸಂಘದ ಅಧ್ಯಕ್ಷ ಜಿ.ಎಂ.ಸಡ್ಡಿ ಉಪಸ್ಥಿತರಿದ್ದರು. ಭರತ ಟೋನಗೆ, ಮಹೇಶ ಹುಲ್ಲೋಳಿ ಕಾರ್ಯಕ್ರಮ ನಿರೂಪಿಸಿದರು.

ಸುಕುಮಾರ ಬನ್ನೂರೆ,

ಇನ್ ನ್ಯೂಸ್, ಕಾಗವಾಡ.

Tags:

error: Content is protected !!