Hukkeri

ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಬಚಾವ ಮಾಡಲು ಹೋರಾಟ ಅಗತ್ಯ – ಎ ಬಿ ಪಾಟೀಲ

Share

ಹುಕ್ಕೇರಿ – ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಬಚಾವ ಮಾಡಿ ಈ ಭಾಗದ ರೈತರ ಕಣ್ಮಣಿ ಹಿರಣ್ಯಕೇಶಿ ಉಳಿಸ ಬೇಕು ಎಂದು ಮಾಜಿ ಸಚಿವ ಎ ಬಿ ಪಾಟೀಲ ಹೇಳಿದರು.
ಅವರು ಇಂದು ಮಾದ್ಯಮಗಳೊಂದಿಗೆ ಮಾತನಾಡುತ್ತಾ ದಿವಂಗತ ಅಪ್ಪಣಗೌಡ ಪಾಟೀಲರು ಶ್ರಮದ ಫಲವಾಗಿ ದೇಶದಲ್ಲಿಯೇ ನಂಬರ ಒನ್ ಸಕ್ಕರೆ ಕಾರ್ಖಾನೆ ಈಗ ಖಾಸಗಿಕರಣ ಮಾಡುವ ಉದ್ದೇಶದಿಂದ ಈಗಿನ ಆಡಳಿತ ಮಂಡಳಿ ಕ್ರಮ ಜರುಗಿಸುವ ನಿಟ್ಟಿನಲ್ಲಿ ತೇರೆ ಮರೆಯಲ್ಲಿ ಮತ್ತು ಸದಸ್ಯರ ಸಾಮಾನ್ಯ ಸಭೆಯಲ್ಲಿ ಅಂಗಿಕಾರ ಮಾಡುವ ಉದ್ದೇಶ ಹೋದಿದ್ದಾರೆ ಕಾರಣ ರೈತರು ಈ ಕುರಿತು ವಿಚಾರ ಸಂಕಿರಣ ಮಾಡಿ ಕಾರ್ಖಾನೆ ಸಹಕಾರಿ ರಂಗದಲ್ಲಿ ಮುಂದುವರೆಯಲು ಆಡಳಿತ ಮಂಡಳಿಗೆ ಒತ್ತಾಯಮಾಡಬೇಕು ಎಂದು ರೈತರಲ್ಲಿ ವಿನಂತಿ ಮಾಡಿದರು.

ರೈತ ಹೋರಾಟಗಾರ ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿ ಕಾರ್ಖಾನೆ ಉಳುವಿಗಾಗಿ ರೈತರು ದ್ವನಿ ಎತ್ತ ಬೇಕಾಗಿದೆ, ನಾವು ಈಗಾಗಲೆ ಜಿಲ್ಲಾಧಿಕಾರಿ ಗಳಿಗೆ ‌ಈ ಕುರಿತು ಮಾಹಿತಿ ನೀಡಲಾಗಿದೆ ಅವರು ಯಾವ ರೀತಿ ಕ್ರಮ ಜರುಗಿಸಲಾದ್ದಾರೆ ನೋಡಬೇಕು ಆದರೆ ರೈತರು ಹೋರಾಟದ ಬಗ್ಗೆ ಚಿಂತಿಸ ಬೇಕಾಗಿದೆ ಎಂದರು

ಈ ಸಂದರ್ಭದಲ್ಲಿ ಮುಖಂಡರಾದ ವಿಜಯ ರವದಿ ಸೇರಿದಂತ ಹಲವಾರು ರೈತ ಮುಖಂಡರು, ರೈತರು ಉಪಸ್ಥಿತರಿದ್ದರು.

ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!