Hukkeri

ಜನ ಸ್ಪಂದನ ಕಾರ್ಯಕ್ರಮಕ್ಕೆ ಹರ್ಷ ವ್ಯಕ್ತ ಪಡಿಸಿದ ಜನತೆ

Share

ಹುಕ್ಕೇರಿ :  ಹುಕ್ಕೇರಿ ನಗರದಲ್ಲಿ ಇಂದು ಜಿಲ್ಲಾಡಳಿತ ದಿಂದ ಜನ ಸ್ಪಂದನೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಪ್ರಥಮಬಾರಿಗೆ ಹುಕ್ಕೇರಿ ನಗರದಲ್ಲಿ ತಾಲೂಕಾ ಆಡಳಿತ ಮತ್ತು ಜಿಲ್ಲಾಡಳಿತ ವತಿಯಿಂದ ಎಲ್ಲಾ ಇಲಾಖೆಗಳ ಕುಂದು ಕೊರತೆ ಮತ್ತು ಸಾರ್ವಜನಿಕ ಸಮಸ್ಯೆಗಳನ್ನು ಸ್ವತಹ ಜಿಲ್ಲಾಧಿಕಾರಿ ಮಹಮ್ಮದ ರೋಷನ್ ಮತ್ತು ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಸಾರ್ವಜನಿಕರಿಂದ ಅಹವಾಲು ಪಡೆದುಕೊಂಡು ಸ್ಥಳದಲ್ಲೆ ಸಮಸ್ಯೆಗಳಿಗೆ ಪರಿಹಾರ ನಿಡಿದರು.

ಅದರಂತೆ ಇತ್ತಿಚಿಗೆ ಸಂಕೇಶ್ವರ ನಗರದಲ್ಲಿಯ ಎ ಪಿ ಎಂ ಸಿ ಮಾರುಕಟ್ಟೆ ಕುರಿತು ರೈತರು ಜಿಲ್ಲಾಧಿಕಾರಿಗಳಿಗೆ ಈಗಿದ್ದ ಖಾಸಗಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಮಾಡಲು ಅನುಮತಿ ನೀಡ ಬೇಕು ಎಂದು ಆಗ್ರಹಿಸಿದರು ಆದರೆ ಅದಕ್ಕೆ ಜಿಲ್ಲಾಧಿಕಾರಿಗಳು ಮೋದಲು ಎಲ್ಲ ರೈತರು ತಹಸಿಲ್ದಾರ ಅಧ್ಯಕ್ಷತೆಯಲ್ಲಿ ಸಭೆ ಜರುಗಿಸಿ ಒಂದು ನಿರ್ಣಯ ತಗೆದುಕೊಂಡು ಒಕ್ಕಟ್ಟಾಗಿ ಬಂದರೆ ನಾವು ನಿರ್ಧಾರ ತಗೆದುಕೊಳ್ಳುತ್ತೆವೆ ಎಂದು ರೈತರಿಗೆ ಸೂಚನೆ ನಿಡಿದರು .

ತಾಲೂಕಿನ ಅವರಗೋಳ ಗ್ರಾಮದಲ್ಲಿಯ ಪರಿಶಿಷ್ಟ ಜಾತಿ ಜನರ ಸ್ಮಶಾನ ಜಾಗೆ ಕುರಿತು ದಲಿತ ಮುಖಂಡರು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಹುಕ್ಕೇರಿ ತಾಲೂಕಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡರು.

ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!