hubbali

ನಟೋರಿಯಸ್ ಅಂತರಾಜ್ಯ ಕಳ್ಳರ ಬಂಧನ ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣ ರಿಕವರಿ

Share

ಅದು ನಟೋರಿಯಸ್ ಗ್ಯಾಂಗ್ ಬಂಗಾರದ ಅಂಗಡಿಗಳೇ ಇವರ ಟಾರ್ಗೆಟ್ ತಮ್ಮ ರಾಜ್ಯ ಬಿಟ್ಟು ಬೇರೆ ರಾಜ್ಯದಲ್ಲಿನ ಬಂಗಾದರ ಅಂಗಡಿಗಳನ್ನು ಟಾರ್ಗೆಟ್ ಮಾಡಿ ರಾತ್ರೋ ರಾತ್ರಿ ಅಂಗಡಿಗೆ ಕಳ್ಳತನ ಮಾಡಿ ಎಸ್ಕೇಪ್ ಆಗಿ ಐಷಾರಾಮಿ ಜೀವನ ಸಾಗಿಸುತ್ತಿತ್ತು.ಅದೇ ರೀತಿ ಹುಬ್ಬಳ್ಳಿ ನಗರದ ಬಂಗಾರದ ಅಂಗಡಿಗೆ ಕನ್ನ ಹಾಕಿದ ಈ ಗ್ಯಾಂಗ್ ಅಂಗಡಿಯಲ್ಲಿದ್ದ 850 ಗ್ರಾಂ ಬಂಗಾರ ಹಾಗೂ 25 ಕೆಜಿ ಚಿನ್ನ ಕದ್ದು ಸಿಸಿ ಕ್ಯಾಮರಾ ದ್ವಂಸ ಮಾಡಿ ಎಸ್ಕೇಪ್ ಆಗಿತ್ತು.ಆದ್ರೆ ಈ ನಟೋರಿಯಸ್ ಗ್ಯಾಂಗ್ ನನ್ನು ಇದೀಗ ಖಾಕಿ ತನ್ನ ಖೆಡ್ಡಾಗೆ ಕೆಡವಿದ್ದು 5 ಜನರನ್ನು ಕಂಬಿ ಹಿಂದೆ ತಳ್ಳಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆ ಹುಬ್ಬಳ್ಳಿಯ ಕೇಶ್ವಾಪುರದಲ್ಲಿನ ಭುವನೇಶ್ವರಿ ಜ್ಯುವೆಲರಿ ಶಾಪ್ ಕಳ್ಳತನ ಮಾಡಲಾಗಿತ್ತು.ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ದರೋಡೆ ಮಾಡಿ ಪರಾರಿಯಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಮಿಷನರ್ ಎನ್ ಶಶಿಕುಮಾರ್ ವಿಶೇಷ ತಂಡಗಳನ್ನು ರಚನೆ ಮಾಡಿ ಆರೋಪಿಗಳ ಬಂಧನ ಮಾಡಿ ಮುಂಬೈಗೆ ಒಂದು ಟೀಮ್ ಕಳುಹಿಸಿಕೊಡಲಾಗಿತ್ತು.ಈ ವೇಳೆ ಓರ್ವ ಪ್ರಮುಖ ಆರೋಪಿಯನ್ನು ಬಂಧನ ಮಾಡಿ ಹುಬ್ಬಳ್ಳಿಗೆ ಕರೆತಂದು ವಿಚಾರಣೆ ಮಾಡುವ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದಾಗ ಆತನನ್ನು ಮೇಲೆ ಫೈರಿಂಗ್ ಮಾಡಲಾಗಿತ್ತು.ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐದು ಜನ ಆರೋಪಿಗಳನ್ನು ಬಂಧನ ಮಾಡಲಾಗಿದೆ ಅಂತಾ ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದು ಹೀಗೆ.

ಅಭರಣದ ಅಂಗಡಿ ಮಾಲೀಕ ಜಗದೀಶ ನನ್ನ ಅಂಗಡಿ ಕಳ್ಳತನ ಆದಾಗ ಕಮಿಷನರ್ ಶಶಿಕುಮಾರ್ ಬಂದು ನನಗೆ ಧೈರ್ಯ ತುಂಬಿದ್ದರು.ನಾನು ಕಳ್ಳರನ್ನು ಹುಡುಕಿ ನಿಮ್ಮ ಆಭರಣಗಳು ಮರಳಿ ಸಿಗುವಂತೆ ಮಾಡುತ್ತೇನೆ ಅಂತಾ ಭರವಸೆ ನೀಡಿದ್ದರು.ಅದೇ ರೀತಿ ಎಸಿಪಿ ಶಿವಪ್ರಕಾಶ ಕೇಶ್ವಾಪುರ ಠಾಣೆಯ ಇನ್ಸ್ಪೆಕ್ಟರ್ ಕೆ ಎಸ್ ಹಟ್ಟಿ ಹಾಗೂ ಪಿಎಸ್ಐ ರವಿ ಹಾಗೂ ಪುನೀತ್ ಅವರ ನಿರಂತರ ಕಾರ್ಯಾಚರಣೆಯಿಂದ ಆರೋಪಿಗಳಾದ ಫರ್ಹಾನ್ ಖಾನ್,ಅಪ್ತಾಬ್ ಶೇಖ್,ಮುಖೇಶ್ ಯಾದವ್,ತಲ್ಲತ್ ಶೇಖ್, ಹಾಗೂ ಪಾತಿಮಾ ಶೇಖ್ ಅವರನ್ನು ಬಂಧನ ಮಾಡಿ ಆರೋಪಿಗಳಿಂದ 77 ಲಕ್ಷ ರೂಪಾಯಿ ಮೌಲ್ಯದ ಆಭರಣಗಳು ಮರಳಿ ಸಿಗುವಂತೆ ಮಾಡಿದ್ದು ಸಂತಸ ತಂದಿದೆ ಅಂತಾರೇ ಜಗದೀಶ.

 

ಒಟ್ಟಿನಲ್ಲಿ ಬೇರೆ ರಾಜ್ಯದಿಂದ ಬಂದು ಚಿನ್ನಾಭರಣ ಕಳ್ಳತನ ಮಾಡಿ ಜೀವನ ಸಾಗಿಸಬೇಕು ಅಂದಿದ್ದ ಗಂಡ ಹೆಂಡತಿ, ಹಾಗೂ ಆತನ ಸ್ನೇಹಿತರು ಗುಂಡೇಟು ತಿಂದು ಜೈಲು ಸೇರಿದರೆ ಇತ್ತ ಲಕ್ಷಾಂತರ ರೂಪಾಯಿ ಚಿನ್ನಾಭರಣ ಮರಳಿ ಸಿಕ್ಕಿದ್ದು ನನಗೆ ಮತ್ತೊಂದು ಜನ್ಮ ಸಿಗುವ ಹಾಗೆ ಮಾಡಿದ ಪೊಲೀಸ್ ಇಲಾಖೆಗೆ ನಾನು ಚಿರಋಣಿ ಅಂತಾ ಅಂಗಡಿ ಮಾಲೀಕ ಹೇಳಿದ ಮಾತು ಸಾರ್ವಜನಿಕರು ಪೊಲೀಸ್ ಇಲಾಖೆಯ ಮೇಲೆ ಇಟ್ಟಿರುವ ನಂಬಿಕೆಯ ಪ್ರತಿರೂಪವಾಗಿದೆ ಪೊಲೀಸರ ಈ ಕಾರ್ಯ ಎಂದರೆ ಸುಳ್ಳಾಗಲಾರದು.

Tags:

error: Content is protected !!