Hukkeri

ಮದಿಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುರೆಶ ತಳವಾರ ಮುಂದುವರೆಯಲಿ – ಮದಿಹಳ್ಳಿ ಗ್ರಾಮಸ್ಥರು

Share

ಹುಕ್ಕೇರಿ :  ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಪ್ರಭಾರಿ ಅಭಿವೃದ್ಧಿ ಅಧಿಕಾರಿ ಸುರೇಶ ತಳವಾರ ಇವರನ್ನು ವರ್ಗಾವಣೆ ಮಾಡಬಾರದು ಎಂದು ಮದಿಹಳ್ಳಿ ಗ್ರಾಮಸ್ಥರು ಶಾಸಕ ನಿಖಿಲ ಕತ್ತಿ ಯವರಿಗೆ ಮನವಿ ಮಾಡಿದರು.

ಇತ್ತಿಚಿಗೆ ನೂತನವಾಗಿ ಆಯ್ಕೆಯಾದ ಮದಿಹಳ್ಳಿ ಗ್ರಾಮ ಪಂಚಾಯತಿ ಅದ್ಯಕ್ಷೆ ಲಕ್ಕವ್ವಾ ಬಾಗಿ ಮತ್ತು ಕೆಲ ಸದಸ್ಯರು ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ ದವರಿಗೆ ಮನವಿ ಸಲ್ಲಿಸಿ ಕಾರ್ಯದರ್ಶಿ ಮತ್ತು ಪ್ರಭಾರ ಅಭಿವೃದ್ಧಿ ಅಧಿಕಾರಿ ಸುರೇಶ ತಳವಾರ ಇವರ ಮೇಲೆ ಆರೋಪ ಸಲ್ಲಿಸಿ ವರ್ಗಾವಣೆ ಮಾಡುವಂತೆ ಮನವಿ ಸಲ್ಲಿಸಿದ್ದರು ಇದನ್ನು ಖಂಡಿಸಿ ಗ್ರಾಮಸ್ಥರು ಇಂದು ಹುಕ್ಕೇರಿ ಶಾಸಕ ನಿಖಿಲ ಕತ್ತಿ ಯವರಿಗೆ ಭೇಟಿ ಯಾಗಿ ಗ್ರಾಮದ ಕಾರ್ಯದರ್ಶಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸುತ್ತಿದ್ದಾರೆ ಆದರೆ ಕೇವಲ 15 ದಿನಗಳ ಹಿಂದೆ ಆಯ್ಕೆಯಾದ ನೂತನ ಅದ್ಯಕ್ಷೆ ಮತ್ತು ಅವರ ಮಗನ ಸೂಚನೆಯಂತೆ ಬೇಕಾಯ್ದೆಸೀರ ಕೇಲಸ ನಿರ್ವಹಿಸಲು ನಿರಾಕರಿಸಿದ ಹಿನ್ನಲೆಯಲ್ಲಿ ಕಾರ್ಯದರ್ಶಿ ಮೇಲೆ ಸುಳ್ಳು ಆರೋಪ ಮಾಡಿ ವರ್ಗಾವಣೆ ಮಾಡುವಂತೆ ಅಧಿಕಾರಿಗಳಿಗೆ ಒತ್ತಾಯ ಮಾಡುತ್ತಿದ್ದಾರೆ ,ಮದಿಹಳ್ಳಿ ಗ್ರಾಮಸ್ಥರ ಅಭಿಪ್ರಾಯ ಪಡೆಯಬೇಕು ಗ್ರಾಮದ ಜನರಿಂದ ಆಯ್ಕೆಯಾದ ಜನ ಪ್ರತಿನಿಧಿಗಳು ಗ್ರಾಮದ ಅಭಿವೃದ್ಧಿ ಮಾಡಬೇಕು, ಅದ್ಯಕ್ಷರ ಮಗ ಅಧಿಕಾರ ಚಲಾಯಿಸಿ ಧರ್ಪ ಮರೆಯುತ್ತಿದ್ದಾರೆ ಎಂದು ಆರೋಪಿಸಿದರು.

ಈಗಿದ್ದ ಕಾರ್ಯದರ್ಶಿ ಯನ್ನು ವರ್ಗಾವಣೆ ಮಾಡಿದರೆ ಮದಿಹಳ್ಳಿ ಗ್ರಾಮಸ್ಥರು ಉಪವಾಸ ಸತ್ಯಾಗ್ರಹ ಮಾಡಲಾಗುವದು ಎಂದು ಎಚ್ಚರಿಕೆ ನೀಡಿ ಮನವಿ ಸಲ್ಲಿಸಿದರು.
ನಂತರ ಶಾಸಕ ನಿಖಿಲ್ ಕತ್ತಿ ಇಓ ಜೋತೆ ಮಾತನಾಡಿ ಕಾರ್ಯದರ್ಶಿಯನ್ನು ವರ್ಗಾವಣೆ ಮಾಡದಂತೆ ಅವರನ್ನೆ ಮುಂದುರೆಸಲು ಸೂಚನೆ ನೀಡಿ , ಪ್ರಕರಣದ ಕುರಿತು ವಿವರವಾದ ಮಾಹಿತಿ ಸಂಗ್ರಹಿಸಲು ಆದೇಶಿಸಿದರು.

ಈ ಸಂದರ್ಭದಲ್ಲಿ ಮದಿಹಳ್ಳಿ ಗ್ರಾಮದ ಮುಖಂಡರಾದ ಬಹುಸಾಹೇಬ ಪಾಂಡ್ರೆ, ಅಂಬರಿಷ ಬನ್ನಕ್ಕಗೋಳ, ಸುಜಿತ ಮಾಳಗೆ, ರೋಹಿತ ತಳವಾರ, ದಯಾನಂದ ದೋಡಮನಿ, ಸದ್ದಾಂ ಬಳಗಾರ, ಕಾಡಪ್ಪಾ ಹೋಸಮನಿ ಮೊದಲಾದವರು ಉಪಸ್ಥಿತರಿದ್ದರು.

Tags:

error: Content is protected !!