Hukkeri

ಬದುಕು ರೂಪಿಸಿದ ಶಿಕ್ಷಕರನ್ನು ಮರೆಯಬಾರದು – ಸಂಸದೆ ಕುಮಾರಿ ಪ್ರೀಯಾಂಕ ಜಾರಕಿಹೋಳಿ

Share

ಹುಕ್ಕೇರಿ : ನಮ್ಮ ಬದುಕಿಗೆ ದಾರಿಯಾಗಿ ಮಾರ್ಗದರ್ಶನ ನೀಡಿದ ಗುರುಗಳನ್ನು ನಾವು ಮರೆಯಬಾರದು ಎಂದು ಚಿಕ್ಕೋಡಿ ಸಂಸದೆ ಕುಮಾರಿ ಜಾರಕಿಹೋಳಿ ಹೇಳಿದರು ಅವರು ಇಂದು ಹುಕ್ಕೇರಿ ತಾಲೂಕ ಪಂಚಾಯತ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಆಶ್ರಯದಲ್ಲಿ ಜರುಗಿದ ಡಾ, ಸರ್ವಪಲ್ಲಿ ರಾಧಾಕೃಷ್ಣನ್ ಅವರ 136 ನೇ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡ ಶಿಕ್ಷಕರ ದಿನಾಚಾರಣೆಯನ್ನು ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳ ಮತ್ತು ಕ್ಯಾರಗುಡ್ಡದ ಅಭಿನವ ಮಂಜುನಾಥ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಚಿಕ್ಕೋಡಿ ಸಂಸದೆ ಕುಮಾರಿ ಪ್ರಿಯಾಂಕ ಜಾರಕಿಹೋಳಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಭಾವತಿ ಪಾಟೀಲ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಂಸದ ರಮೇಶ ಕತ್ತಿ ಮಾತಮಾಡಿ ಈತ್ತಿಚಿಗೆ ಸರ್ಕಾರದ ನೀತಿಯಿಂದ ನೈತಿಕತೆ ಇಲ್ಲದ ಶಿಕ್ಷಣ ಸಿಗುತ್ತಿದೆ ಕಾರಣ ಸರ್ಕಾರ ಹಲವಾರು ಬದಲಾವಣೆ ತರುವ ಮೂಲಕ ಗುರುಕುಲ ಮಾದರಿ ಶಿಕ್ಷಣ ತರುವದು ಅವಶ್ಯಕವಾಗಿದೆ ಎಂದರು

ವೇದಿಕೆ ಮೇಲೆ ನಿವೃತ್ತ ಜಂಟಿ ನಿರ್ದೆಶಕ ಗಜಾನನ ಮನ್ನಿಕೆರಿ, ತಹಸಿಲ್ದಾರ ಮಂಜುಳಾ ನಾಯಿಕ, ಇಓ ಟಿ ಆರ್ ಮಲ್ಲಾಡದ, ಅಕ್ಷರ ದಾಸೋಹ ಸಹಾಯಕ ನಿರ್ದೆಶಕಿ ಸವಿತಾ ಹಲಕಿ,ಕ್ಷೇತ್ರ ಸಮನ್ವಯಾಧಿಕಾರಿ ಎ ಎಸ್ ಪದ್ಮಣ್ಣವರ, ಎ ಆಯ್ ಕೋಠಿವಾಲೆ, ಉಪಸ್ಥಿತರಿದ್ದರು. ಸಂಸದೆ ಪ್ರೀಯಾಂಕಾ ಮಾತನಾಡಿ ಇಂದಿನ ಮಕ್ಕಳು ಶಿಕ್ಷಣದಲ್ಲಿ ಅಪಾರ ಸೌಲಭ್ಯ ಪಡೆದಿದ್ದಾರೆ , ಮಕ್ಕಳ ಆಸಕ್ತಿ ಗಮನಿಸಿ ಶಿಕ್ಷಕರು ಶಿಕ್ಕಣ ನೀಡುವದು ಅವಶ್ಯಕವಾಗಿದೆ ಎಂದರು

ನಂತರ ಆದರ್ಶ ಶಿಕ್ಷಕರಿಗೆ, ನಿವೃತ್ತಿ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೊನೆಯಲ್ಲಿ ಶ್ರೀಗಳು ಶಿಕ್ಷಕರ ಮಹತ್ವ ಮತ್ತು ಅವರ ಕರ್ತವ್ಯ ಕುರಿತು ಆಶಿರ್ವಚನ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ತಾಲೂಕಿನ ವಿವಿಧ ಶಾಲಾ ಶಿಕ್ಷಕರು, ಶಿಕ್ಷಕಿಯರು ಉಪಸ್ಥಿತರಿದ್ದರು.

ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!