ಹನಿಟ್ರ್ಯಾಪ್ ಹಾಗೂ ಅಪಹರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಶಹಾಪೂರ ಪೊಲೀಸರು ಒಟ್ಟು ನಾಲ್ವರನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.
ಬೆಳಗಾವಿಯ ಟಿಳಕವಾಡಿ, ಮಂಗಳವಾರಪೇಠನ ರಹಿವಾಸಿ ವಿನಾಯಕ ಸುರೇಶ ಕುರಡೇಕರ ಎಂಬಾತರಿಗೆ ಪರಿಚಯಸ್ಥೆಯೆ ಆದ ಶಹಾಪೂರ ಬಸವಾಣ ಗಲ್ಲಿಯ ರಹಿವಾಸಿ ದಿವ್ಯಾ ಸಪಕಾಳೆ ತಮ್ಮ ಅಪಹರಣ ಮಾಡಿದ್ದಾರೆಂದು ಮತ್ತು ಭುಜ ಮುಟ್ಟಿ ನಿದ್ದೆಯಿಂದ ಎಬ್ಬಿಸಿದ ವಿಡಿಯೋವೊಂದನ್ನು ಇಟ್ಟುಕೊಂಡು ಮೊದಲಿಗೆ 25 ಲಕ್ಷ ಬೇಡಿಕೆ ಇಟ್ಟು ಅದರಲ್ಲಿ 15 ರೂಪಾಯಿ ಪಡೆದಿರುತ್ತಾಳೆ. ಅಲ್ಲದೇ ಆರೋಪಿಯೂ ಬಾಕಿ 10 ಲಕ್ಷ ರೂಪಾಯಿಗಾಗಿ ಕಿರುಕುಳ ನೀಡಿರುತ್ತಾಳೆ. ದಿವ್ಯಾಳ ಈ ಕೃತ್ಯಕ್ಕೆ ಪ್ರಶಾಂತ ಕೋಲಕಾರ, ಕುಮಾರ ಗೋಕರಕ್ಕನವರ ಹಾಗೂ ರಾಜು ಜಡಗಿ ಸಾಥ್ ನೀಡಿದ್ದು,
ಶಹಾಪೂರ ಠಾಣೆಯಲ್ಲಿ ದಾಖಲಾದ ಪ್ರಕರಣದ ಅನ್ವಯ ನಾಲ್ವರನ್ನು ಬಂಧಿಸಿ, 10 ಲಕ್ಷ ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ 3 ಬೈಕ್ಸ್ ಹಾಗೂ ಒಂದು ಮೊಬೈಲ್ ಫೋನ ಸೇರಿದಂತೆ ಒಟ್ಟು 13 ಲಕ್ಷ 40 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಹಾಪೂರ ಪೊಲೀಸ್ ಠಾಣೆಯ ಇನ್ಸಪೇಕ್ಟರ್ ಎಸ್.ಎಸ್.ಸಿಮಾನಿ, ಎ.ಎಸ್.ಐಗಳಾದ ಬಿ.ಎ. ಚೌಗಲಾ, ಆರ್.ಐ. ಸನದಿ,
ಸಿ.ಎಚ್.ಸಿ ನಾಗರಾಜ್ ಓಸಪ್ಪಗೋಳ, ಶಿವಶಂಕರ ಗುಡದೈಗೋಳ, ಸಿಪಿಸಿ ಶ್ರೀಧರ ತಳವಾರ, ಜಗದೀಶ ಹಾದಿಮನಿ, ಸಂದೀಪ ಬಾಗಡಿ, ಸಿದ್ಧರಾಮೇಶ್ವರ ಮುಗಳಖೋಡ, ವಿಜಯ ಕಮತೆ, ಕಾವೇರಿ ಕಾಂಬಳೆ, ಪ್ರತಿಭಾ ಕಾಂಬಳೆ ಅವರು ಈ ಕಾರ್ಯಾಚರಣೆಯನ್ನು ನಡೆಸಿದ್ದು, ಬೆಳಗಾವಿ ಪೊಲೀಸರು ಇವರ ಕಾರ್ಯವನ್ನು ಶ್ಲಾಘಿಸಿದ್ದಾರೆ.