Kagawad

ಕಾಗವಾಡ ತಾಲ್ಲೂಕಿನ ಐನಾಪುರ ಪಟ್ಟಣದಲ್ಲಿ 11.18 ಕೋಟಿ ರೂ. ವೆಚ್ಚದ ಅಮೃತ 2.0 ಯೋಜನೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿತು

Share

ಕಾಗವಾಡ :  ಕಳೇದ ಅನೇಕ ವರ್ಷಗಳಿಂದ ಐನಾಪುರ ಪಟ್ಟಣದಲ್ಲಿಯ ಸಾರ್ವಜನಿಕರು ಶಾಶ್ವತವಾಗಿ ಶುದ್ಧ ಕುಡಿಯುವ ನೀರಿನ ಬೇಡಿಕೆಯಿಟ್ಟಿದ್ದರು. ಇದನ್ನು ಗಮನಿಸಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಅಮೃತ 2.0 ಯೋಜನೆಯಡಿಯಲ್ಲಿ 11.18 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದೇನೆ. ಈ ಯೋಜನೆಯು ಎಲ್ಲ ಸಾರ್ವಜನಿಕರದಾಗಿದೆ, ಒಳ್ಳೆಯ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಎಲ್ಲ ಚುನಾಯಿತ ಸದಸ್ಯರು, ಅಭಿಯಂತರರು ನಿಗಾ ವಹಿಸಿರಿಯೆಂದು ಕಾಗವಾಡ ಶಾಸಕ ರಾಜು ಕಾಗೆ ಕರೆ ನೀಡಿದರು.

ಸೋಮವಾರ ಸಂಜೆ ಐನಾಪುರ ಪಟ್ಟಣದಲ್ಲಿ ಅಮೃತ 2.0 ಯೋಜನೆಗೆ ಭೂಮಿಪೂಜೆ ನೆರವೇರಿಸಿ ಶಾಸಕ ರಾಜು ಕಾಗೆ ಮಾತನಾಡಿದರು. ಶಾಸಕರು ಮುಂದೆವರೆದು ಮಾತನಾಡುವಾಗ, ರಾಜ್ಯದಲ್ಲಿ 5 ಗ್ಯಾರಂಟಿ ಯೋಜನೆಗಳು ಎಲ್ಲರಿಗೆ ತಲುಪಿಸಲಾಗಿದೆ. ಅಷ್ಟಲ್ಲದೇ, ಇಂಥಹ ಯೋಜನೆಗಳು ರೂಪಿಸುತ್ತಿದ್ದೇವೆ. ವಿರೋಧಿ ಪಕ್ಷದವರು ನಮ್ಮ ಮೇಲೆ ಬೇರೆ-ಬೇರೆ ಆರೋಪಗಳು ಮಾಡುತ್ತಿದ್ದು, ಇದನ್ನು ತಿಳಿದುಕೊಳ್ಳಬೇಕೆಂದು ಹೇಳಿದರು.

ಐನಾಪೂರ ಪಟ್ಟಣದಲ್ಲಿ ಈಗಾಗಲೇ 1.25 ದಶಲಕ್ಷ ಲೀ ಸಾಮಥ್ರ್ಯದ ನೀರು ಶುದ್ದೀಕರಣ ಘಟಕ ಇದ್ದು, ಇದರೊಂದಿಗೆ ಹೆಚ್ಚುವರಿಯಾಗಿ 3.0 ದಶಲಕ್ಷ ಲೀ ಸಾಮಥ್ರ್ಯದ ಹೊಸ ನೀರು ಶುದ್ದೀಕರಣ ಘಟಕ ನಿರ್ಮಾಣದೊಂದಿಗೆ ಒಟ್ಟು ನೀರು ಶುದ್ದೀಕರಣ ಘಟಕದ ಸಾಮಥ್ರ್ಯ 4.5 ದಶಲಕ್ಷ ಲೀ ಆಗಲಿದೆಯೆಂದು ಸಹಾಯಕ ಅಭಿಯಂತರಾದ ಅಜೀತ ಚೌಗುಲೆ ಮತ್ತು ಸಹಾಯಕ ಕಾರ್ಯಪಾಲ ಅಭಿಯಂತರಾದ ಉಮೇಶ ಆರ್. ಕೆ ಇವರು ವಿವರವಾಗಿ ಶಾಸಕರಿಗೆ ಮಾಹಿತಿ ನೀಡಿದರು. ಹೈದರಾಬಾದ್‍ನ ಸಿವೆಟ್, ಈ ಕಂಪನಿಯು ಕಾರ್ಯನಿರ್ವಹಿಸಲಿದೆ.

ಪಟ್ಟಣ ಪಂಚಾಯತಿಯ ಅಧ್ಯಕ್ಷೆ ಸರೋಜಿನಿ ಗಾಣಿಗೇರ, ಉಪಾಧ್ಯಕ್ಷೆ ರತ್ನವ್ವಾ ಮಾದರ ಇವರಿಂದ ಶಾಸಕರಿಗೆ ಸನ್ಮಾನಿಸಲಾಯಿತು. ಪಟ್ಟಣ ಪಂಚಾಯತಿಯ ಸದಸ್ಯರಾದ ಸಂಜೀವ ಭಿರಡಿ, ಅರುಣ ಗಾಣಿಗೇರ, ನ್ಯಾಯವಾದಿ ಸಂಜಯ ಕುಚನೂರೆ ಇವರು ಶಾಸಕರು ಐನಾಪುರ ಪಟ್ಟಣಕ್ಕಾಗಿ ಕೈಗೊಂಡ ಈ ಕಾಮಗಾರಿ ಬಗ್ಗೆ ಅಭಿನಂದನೆ ಸಲ್ಲಿಸಿ ಪಟ್ಟಣದ ವತಿಯಿಂದ ಸನ್ಮಾನಿಸಿದರು.

ಭೂಮಿಪೂಜಾ ಕಾರ್ಯಕ್ರಮದಲ್ಲಿ ಪಟ್ಟಣದ ಹಿರಿಯರಾದ ಸುಭಾಷ ಪಾಟೀಲ, ಚಮನರಾವ ಪಾಟೀಲ, ಅರವಿಂದ ಕಾರ್ಚಿ, ಕುಮಾರ ಜಯಕರ, ಧೊಂಡಿ ಹರಳೆ, ಗುರುರಾಜ ಮಡಿವಾಳರ, ಪಟ್ಟಣ ಪಂಚಾಯತಿ ಸದಸ್ಯರಾದ ಕಸ್ತೂರಿ ಮಡಿವಾಳರ, ಸುರೇಶ ಗಾಣಿಗೇರ, ದಾದಾ ಜಂತೆನ್ನವರ, ಅಜೀತ ಯರೆಂಡೋಲಿ, ಸದಾ ಮಡಿವಾಳರ, ಜೈಪಾಲ ಕೋಕಟನೂರ, ಕಾಸಿಂ ಮುಲ್ಲಾ, ರಾವಸಾಬ ಪಾಟೀಲ, ಗುಂಡು ಝುಂಜರವಾಡ, ಸೇರಿದಂತೆ ಅನೇಕರು ಇದ್ದರು. ಮಹೇಶ ಸೋಲಾಪುರ ಸ್ವಾಗತಿಸಿ ವಂದಿಸಿದರು.

ಸುಕುಮಾರ ಬನ್ನೂರೆ,

ಇನ್ ನ್ಯೂಸ್, ಕಾಗವಾಡ.

Tags:

error: Content is protected !!