ಭತ್ತ ಖರೀದಿಯ ವೇಳೆ ರೈತರಿಗೆ ಮೋಸ ಮಾಡುವ ವ್ಯಾಪಾರಿಯ ದಂಧೆಯನ್ನು ರೈತರು ಬೆಳಕಿಗೆ ತಂದ ಘಟನೆ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಜಾಫರವಾಡಿ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿಯ ಕಣಬರ್ಗಿ ಗ್ರಾಮದ ಸಂತೋಷ ವೀರಗೌಡ ಎಂಬಾತ ಕಡೋಲಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಜಾಫರವಾಡಿ ಗ್ರಾಮಕ್ಕೆ ತೆರಳಿ ರೈತರಿಂದ ಬೆಳೆದ ಭತ್ತಗಳನ್ನು ಖರೀದಿಸುತ್ತಿದ್ದ. ಆದರೇ ಆತನ ತೂಕದಲ್ಲಿ ಪ್ರತಿಬಾರಿ 10 ರಿಂದ 12 ಕಿಲೋದಷ್ಟು ವ್ಯತ್ಯಾಸ ಕಂಡು ಬರುತ್ತಿತ್ತು. ಸಂಶಯಗೊಂಡ ರೈತರು ಬೇರೆ ತೂಕದ ಮಷೀನುಗಳ ಮೇಲೆ ಪರಿಶೀಲಿಸಿದಾಗ ಆತನ ಬಂಡವಾಳ ಗೊತ್ತಾಗಿದೆ. ಇದನ್ನು ಕಂಡು ಹಿಡಿದು ಕೇಳುತ್ತಿದ್ದಂತೆ, ವ್ಯಾಪಾರಿ ತನ್ನ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಕಾಲ್ಕಿತ್ತಿದ್ದಾನೆ. ಕೂಡಲೇ ರೈತರು ತೂಕ ಮತ್ತು ಮಾಪಣ ಇಲಾಖೆಯ ವಿಭಾಗ 2 ರ ನಿರೀಕ್ಷಕರಾದ ಆರ್.ಐ. ಬಿಸಗುಪ್ಪಿ ಮತ್ತು ಇನ್ಸಪೇಕ್ಟರ್ ಆರ್.ಎಂ.ರಾಜಗೋಳಿ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಪರಿಶೀಲಿಸಿದರು. ಈ ವೇಳೆ ಆತನ ಯಾವುದೇ ಅಧಿಕೃತ ವ್ಯಾಪಾರಿ ಅಲ್ಲ ಎಂಬುದು ಗೊತ್ತಾಗಿದೆ. ಆತನ ಎಲ್ಲ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ರೈತರ ನ್ಯಾಯ ಹಾಗು ಹಕ್ಕಿಗ್ಗಾಗಿ ಸದಾ ಹೊರಾಡುವರು,ರೈತರ ಬೆನ್ನೆಲಬು ಹಾಗು ರೈತ ಮುಖಂಡ ಅಪ್ಪಾಸಾಹೆಬ ಈ ವೇಳೆ ಮಾತನಾಡಿದ ರೈತ ಮುಖಂಡ ಶ್ರೀ ದೇಸಾಯಿ ರೈತರ ಮೇಲೆ ಮೇಲಿಂದ ಮೇಲೆ ಅನ್ಯಾಯಗಳು ನಡೆಯುತ್ತಿವೆ. ಇಂತಹ ಮೋಸಗಾರರ ವಿರುದ್ಧ ಕ್ರಮವಾಗಬೇಕು. ಅಲ್ಲದೇ ಅಧಿಕಾರಿಗಳು ಇಂತಹ ಘಟನೆಗಳ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ದೇಸಾಯಿ,ರಾಜು ಕಾಗಣಿಕರ,ಶಂಕರ ದೆಸಾಯಿ,ಸುಭಾಷ ದಾಯಗೊಂಡೆ,ವೈಜಾಪ್ಪಾ ಪಾಟೀಲ,ಫಕಿರಾಪ್ಪ ಸದಾವರ,ತಾನಾಜಿ ಪಾಟೀಲ,ಶಿವಾಜಿ ಪಾಟೀಲ,ಸುಧಾಕರ ಪಾಟೀಲ,ಪುಂಡಲಿಕ ಪಾಟೀಲ,ಕಟಾಂಬಳೆ ಸೇರಿದಂತೆ ಕಡೋಲಿ,ಜಾಫರವಾಡಿ ಹಾಗು ದೇವಗರಿ ಗ್ರಾಮದ ರೈತರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.