Belagavi

ಬೆಳಗಾವಿ ಚಿಕ್ಕ ಬಸದಿಯಲ್ಲಿ ದಶಲಕ್ಷಣ ಪೂಜೆ…

Share

ದಶಲಕ್ಷಣ ಪರ್ವದ ಹಿನ್ನೆಲೆ ಬೆಳಗಾವಿ ನಗರದ ಮಠ ಗಲ್ಲಿಯಲ್ಲಿರುವ ಚಿಕ್ಕ ಬಸದಿಯಲ್ಲಿ ವಿಶೇಷ ಪೂಜಾ-ವಿಧಾನಗಳು ನಡೆದವು. ಭಾದ್ರಪದದಿಂದ ಅನಂತ ಹುಣ್ಣಿಮೆಯ ವರೆಗೆ ಜೈನ ಸಮಾಜದಿಂದ ದಶಲಕ್ಷಣ ಪರ್ವವನ್ನು ಆಚರಿಸಲಾಗುತ್ತದೆ.

ಬೆಳಗಾವಿ ನಗರದ ಮಠ ಗಲ್ಲಿಯಲ್ಲಿರುವ ಚಿಕ್ಕ ಬಸದಿಯಲ್ಲಿಯೂ ದಶಲಕ್ಷಣ ಪರ್ವದ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈ ಪರ್ವದಲ್ಲಿ 16 ಭಾವನೆಗಳನ್ನು ಭಾವಿಸಿ 10 ದಿನ ದಶಲಕ್ಷಣಗಳ ಪೂಜೆ ಮಾಡಲಾಗುತ್ತದೆ. ಚಾತುರ್ಮಾಸದಲ್ಲಿ ಧ್ಯಾನ, ಉಪವಾಸ, ತ್ಯಾಗ ಸ್ವಾಧ್ಯಾಯದ ಮೂಲಕ ಆತ್ಮ ಕಲ್ಯಾಣ ಮಾಡಿಕೊಳ್ಳಲಾಗುತ್ತದೆ. ಕಷಾಯಗಳಿಂದ ದೂರವುಳಿದು ಸಂಯಮ ಪಾಲನೆಯೇ ಜೈನ ಧರ್ಮದ ಲಕ್ಷಣವಾಗಿದೆ.

ಭಗವಾನ್ ಮಹಾವೀರರು ತಿಳಿಸಿದಂತೆ ಧರ್ಮ, ಬದುಕಿರಿ ಮತ್ತು ಬದುಕಲು ಬಿಡಿ ಎಂಬ ಸಂದೇಶಗಳನ್ನು ಸಾರಲಾಗುತ್ತದೆ. ಪ್ರತಿದಿನ ಜೈನ ಧರ್ಮೀಯರು ಪೂಜೆ-ಧ್ಯಾನಗಳಲ್ಲಿ ತೊಡಗಿಕೊಳ್ಳುತ್ತಾರೆ.

Tags:

error: Content is protected !!