hubbali

ಷೇರು ಮಾರುಕಟ್ಟೆ ಹಣ ಕಳೆದುಕೊಂಡು ಬ್ಯಾಂಕ್ ದರೊಡೆಗೆ ಯತ್ನಿಸಿದ ಯುವಕನ ಬಂಧನ

Share

ಬ್ಯಾಂಕ್ ನೌಕರರೊಬ್ಬರ ಕುತ್ತಿಗೆಗೆ ಚಾಕು ಹಿಡಿದು, ಪ್ರಾಣ ಬೆದರಿಕೆ ಹಾಕಿ ಬ್ಯಾಂಕ ದರೊಡೆಗೆ ಯತ್ನಿಸಿದ ಆರೋಪಿಯನ್ನು ಎಪಿಎಂಸಿ ನವನಗರ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.

ನಿನ್ನೆ ಸಂಜೆ 4.30 ಸುಮಾರಿಗೆ ಹುಬ್ಬಳ್ಳಿಯ ಅಮರಗೋಳ ಎಪಿಎಂಸಿಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗೋಪನಕೊಪ್ಪ ನಿವಾಸಿಯಾದ ಮಂಜುನಾಥ್ ಹಬೀಬ್ ಎಂಬ ಯುವಕ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕೈಯಲ್ಲಿ ಚಾಕು ಹಿಡಿದುಕೊಂಡು ಬ್ಯಾಂಕ್ ನೌಕರರೊಬ್ಬರ ಕುತ್ತಿಗೆಗೆ ಚಾಕು ಹಿಡಿದು, ಪ್ರಾಣ ಬೆದರಿಕೆ ಒಡ್ಡಿ ’10 ಲಕ್ಷ ರೂ ಹಣ ಕೊಡಿ’ ಎಂದು ಹೇಳುತ್ತಾ ಕ್ಯಾಶ್ ಕೌಂಟರ್ ಹತ್ರ ಬಂದಿದು, ನೌಕರನ ರಕ್ಷಣೆಗೆ ಬಂದವರನ್ನು ತಳ್ಳಿ ಆರೋಪಿಯು ಬ್ಯಾಂಕ್ ನಿಂದ ಓಡಿಹೋಗಿದ್ದು.

ಘಟನೆ ನಡೆದ 5 ಗಂಟೆಯೊಳಗೆ ಬ್ಯಾಂಕ್ ಸುಲಿಗೆಗೆ ಯತ್ನಿಸಿದ ಆರೋಪಿಯನ್ನು ಎಪಿಎಂಸಿ ನವನಗರ ಠಾಣೆ ಪೊಲೀಸರು ಬಂಧನ ಮಾಡಿ ಆರೋಪಿ ಕೃತ್ಯಕ್ಕೆ ಬಳಸಿದ್ದ ಎರಡು ಚಾಕು, ಬ್ಯಾಗ್ ಗಳನ್ನು ವಶ ಪಡಸಿಕೊಂಡಿದ್ದಾರೆ. ಆರೋಪಿಯ ವಿಚಾರಣೆ ನಡೆಸಿದಾಗ ಆರೋಪಿ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರಿಂದ ಈ ಸುಲಿಗೆ ಕೃತ್ಯಕ್ಕೆ ಮುಂದಾಗಿದ್ದರ ಬಗ್ಗೆ ತಿಳಿದು ಬಂದಿದ್ದು, ಈ ಕುರಿತು ಆರೋಪಿ ಮಂಜುನಾಥ್ ಹಬೀಬ್ ವಿರುದ್ಧ ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!