karnataka

ಜನಾಂದೋಲನದಲ್ಲಿ ಒಗ್ಗಟ್ಟಾದ ಕೈ ನಾಯಕರು – ಬಿಜೆಪಿ ವಿರುದ್ದ ವಾಗ್ದಾಳಿ!

Share

ಬಿಜೆಪಿ–ಜೆಡಿಎಸ್ನವರು ಸುಳ್ಳುಗಳನ್ನು ಹೇಳಿ ಇಲ್ಲಸಲ್ಲದ್ದನ್ನು ಬಿಂಬಿಸುತ್ತಿದ್ದಾರಲ್ಲ ಎಂಬ ನೋವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿದೆ. ಅವರ ಪರವಾಗಿ ಬಂಡೆಯಾಗಿ ನಿಲ್ಲುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿ ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಗೆ ಸೆಡ್ಡು ಹೊಡೆಯಲು ಮುಂದಾಗಿರುವ ಕಾಂಗ್ರೆಸ್, ಬೃಹತ್ ಸಮಾವೇಶ ನಡೆಸಿದೆ
ಮೈಸೂರಿನ ಮಹರಾಜ ಕಾಲೇಜು ಮೈದಾನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಜನಾಂದೋಲನ ಸಮಾವೇಶ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಸಾವಿರಾರು ಕಾಂಗ್ರೆಸ್ ಬೆಂಬಲಿಗರು ಆಗಮಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಬಿಜೆಪಿ ಅವಧಿಯಲ್ಲಿ ಸಾಕಷ್ಟು ಹಗರಣಗಳು ನಡೆದಿದ್ದು, ಕೋವಿಡ್ ಸಮಯದಲ್ಲಿ 20 ರೂಪಾಯಿ ಮಾಸ್ಕ್ನ್ನು 300 ನೂರು ರೂಪಾಯಿಗೆ ಖರೀದಿಸಿದ್ದಾರೆ. ಈ ಬಗ್ಗೆ ಬಿಜೆಪಿಯ ಶಾಸಕರೇ ಆರೋಪಿಸಿದ್ದಾರೆ. ಬಿಜೆಪಿಯ ಅವಧಿಯಲ್ಲಿ ನಡೆದ ಸುಮಾರು 27 ಪ್ರಕರಣಗಳ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಧ್ವನಿ ಇಲ್ಲದವರ, ಬಡವರ, ಹಿಂದುಳಿದವರ ಪರ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ನಡೆಯುತ್ತಿದೆ. ಹೀಗಾಗಿ ಯಾರು ಕೂಡ ಜನಪರ, ಒಳ್ಳೆಯ ಸರ್ಕಾರಕ್ಕೆ ತೊಂದರೆ ನೀಡಬಾರದು, ವಿರೋಧ ಪಕ್ಷದವರಿಗೆ ಹೋರಾಟ ನಡೆಸುವ ಹಕ್ಕು ಇದೆ. ಹಾಗಂತ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದೆಂದು ತಿಳಿಸಿದರು.

ಪ್ರಿಯಾಂಕ್ ಖರ್ಗೆ ಮಾತನಾಡಿ ವಿಜಯೇಂದ್ರ, ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆ ಮಾಡುತ್ತಿದ್ದಾರೆ. ಸಾಂವಿಧಾನಕ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಗೆದ್ದುಬಂದ ಸರ್ಕಾರಗಳನ್ನು ಬಿಜೆಪಿ ಆಸ್ಥಿರಗೊಳಿಸಿದೆ.

ಮಹಾರಾಷ್ಟ್ರ ಸೇರಿದಂತೆ ದೇಶದ ಎಲ್ಲ ಕಡೆ ಕಾಂಗ್ರೆಸ್ ಸರ್ಕಾರ ಕೆಡವಿದ್ದಾರೆ. ಇದನ್ನು ನರೇಂದ್ರ ಮೋದಿ, ಅಮಿತ್ ಅವರೇ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಅದೆಲ್ಲ ಸಾಧ್ಯವಿಲ್ಲ ಮುಂದಿನ ಐದು ವರ್ಷಗಳ ಕಾಲ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ ಎಂದು ಖರ್ಗೆ ಹೇಳಿದರು.

ಸಚಿವ ಎಂಬಿ ಪಾಟೀಲ್ ಮಾತನಾಡಿ ಕರ್ನಾಟಕದಲ್ಲಿ ಭ್ರಷ್ಟಾಚಾರ ಹುಟ್ಟಲು ಕಾರಣನೇ ವಿಜಯೇಂದ್ರ ಕುಮಾರಸ್ವಾಮಿ, ಅವರ ಭ್ರಷ್ಟಚಾರಗಳಿಗೆ ಎಲ್ಲೆ ಎಲ್ಲಿದೆ. ವಿಜಯೇಂದ್ರ ಸ್ವಲ್ಪ ನಿಧಾನಿಸಬೇ ಕು ಮುಂಬರುವ 25 ವರ್ಷಗಳ ಕಾಲ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲ್ಲ, ಕರ್ನಾಟಕದಲ್ಲಿ ಭ್ರಷ್ಟಾಚಾರ ಅಂತ ಶುರುವಾಗಿದ್ದೇ ಬಿಜೆಪಿ, ಜೆಡಿಎಸ್ನವರಿಂದ ಆದರೆ ಇದೀಗ ವಿಜಯೇಂದ್ರ ಭ್ರಷ್ಟಾಚಾರ ವಿರುದ್ಧ ಮಾತನಾಡೋದು ನೋಡಿದ್ರೆ ನಂಗೆ ನಗು ಬರುತ್ತೆ ಎಂದು ಹೇಳಿದ್ದರು

ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ ಸಿದ್ದರಾಮಯ್ಯ ಭಾವನಾ ಜೀವಿ. 2ನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಹಿಂದುಳಿದ ವರ್ಗದ ನಾಯಕನ ತೇಜೋವಧೆ ತಡೆಯಲು, ಇಡೀ ಸರ್ಕಾರ, ಮಲ್ಲಿಕಾರ್ಜುನ ಖರ್ಗೆ ನೇತೃತ್ವ ಮತ್ತು ರಾಹುಲ್ ಗಾಂಧಿ ಅವರ ಮಾರ್ಗದರ್ಶನದಲ್ಲಿ ಇಡೀ ಪಕ್ಷವೇ ನಿಂತಿದೆ. ಕೆಪಿಸಿಸಿ ಅಧ್ಯಕ್ಷನಾಗಿ ಬಂಡೆಯೋ, ಬಲವೋ ಅಥವಾ ತೋಳಾಗಿಯೋ… ಅವರ ಪರವಾಗಿದ್ದೇನೆ; ಮುಂದೆಯೂ ಇರುತ್ತೇನೆ ,
ಜನರಿಗಾಗಿ ಮೇಕೆದಾಟು , ಬಳ್ಳಾರಿ ಪಾದಯಾತ್ರೆ ನಾವೂ ಮಾಡಿದ್ವೇವೆ , ಏನೇ ಮಾಡಿದ್ದರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲ್ಲವೆಂದು ಹೇಳಿದ್ದರು .

ಈ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್, ಸಚಿವರಾದ ಕೆ ವೆಂಕಟೇಶ್, ಜಮೀರ್ ಅಹ್ಮದ್ , ಈಶ್ವರ್ ಖಂಡ್ರೆ, ಮಾಜಿ ಸಚಿವ ತನ್ವೀರ್ ಸೇಠ್, ಯಾತಿಂದ್ರ ಸಿದ್ದರಾಮಯ್ಯ, ಎಂ.ಬೀ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಹೆಚ್.ಕೆ ಮುನಿಯಪ್ಪ, ಚೆಲುವರಾಯ ಸ್ವಾಮಿ, ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಹಾಗೂ ಪ್ರದೀಪ್ ಈಶ್ವರ್ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದಾರೆ

Tags:

error: Content is protected !!