ಪ್ರತಿ ಮಳೆಗಾಲದಲ್ಲೂ ಬಳ್ಳಾರಿ ನಾಲೆಗೆ ಹೊಂದಿಕೊಂಡ ಜನರಿಗೆ ಶಿಕ್ಷೆ ಅನುಭವಿಸುವ ಪರಿಸ್ಥಿತಿ ಉಂಟಾಗುತ್ತಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಕಾಂಗ್ರೆಸ್ ಪ್ರಮುಖರಾದ ಪ್ರಭಾವತಿ ಮಾಸ್ತಮರ್ಡಿ ಅವರು ಬೆಳಗಾವಿ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಆಗ್ರಹಿಸಿದ್ದಾರೆ.


ಬೆಳಗಾವಿ ನಗರ ಹಾಗೂ ಪ್ರದೇಶಕ್ಕೆ ಹೊಂದಿಕೊಂಡುವ ಬಳ್ಳಾರಿ ನಾಲಾಕ್ಕೆ ಹೊಂದಿಕೊಂಡ ಪ್ರದೇಶದ ಜನರು ಪ್ರತಿ ಮಳೆಗಾಲದಲ್ಲೂ ಸಮಸ್ಯೆಯನ್ನು ಅನುಭವಿಸುತ್ತಾರೆ. ವಡಗಾಂವ ಯಳ್ಳೂರ ಭಾಗದ ಜನರ ಹೊಲಗದ್ಧೆಗಳಲ್ಲಿ ಬೆಳೆದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗುತ್ತದೆ. ಅಲ್ಲದೇ ಜನವಸತಿಗಳಲ್ಲಿಯೂ ನೀರು ಬಳ್ಳಾರಿ ನಾಲೆಯ ನೀರು ನುಗ್ಗುತ್ತಿದೆ. ಮಳೆಯಿಂದಾಗಿ ಬಳ್ಳಾರಿ ನಾಲೆಯಲ್ಲಿ ನೀರು ಹೆಚ್ಚಾಗುತ್ತದೆ. ಹೆಚ್ಚುವರಿ ನೀರಿನಿಂದಾಗಿ ಪ್ರತಿವರ್ಷ ಸುಮಾರು 3 ತಿಂಗಳು ಇಲ್ಲಿನ ಜನರು ಸಂಕಷ್ಟ ಅನುಭವಿಸುತ್ತಾರೆ. ಬಾಕ್ಸಗಳನ್ನು ನಿರ್ಮಿಸಿ ನಾಲೆಯ ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಡಲು ಕ್ರಮಕೈಗೊಳ್ಳಬೇಕೆಂದು ಕಾಂಗ್ರೆಸ್ ಪ್ರಮುಖರಾದ ಪ್ರಭಾವತಿ ಮಾಸ್ತಮರ್ಡಿ ಅವರು ಬೆಳಗಾವಿ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಆಗ್ರಹಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದ್ದು, ಜಿಲ್ಲಾಧಿಕಾರಿಗಳೊಂದಿಗೆ ಶೀಘ್ರವೇ ಈ ಕುರಿತು ಚರ್ಚೆ ನಡೆಯಲಿದೆ.
