ಅಥಣಿ ತಾಲೂಕಿನ ಚಮಕೇರಿ ಮಡ್ಡಿ ಗ್ರಾಮದಲ್ಲಿ ಅಧಿಕಾರಗಳ ಬೇಜವಾಬ್ದಾರಿತನದಿಂದ ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಅಲೆದಾಡುವ ಪರಿಸ್ಥಿತಿ ಅಥಣಿ ತಾಲೂಕಿನ ಚಮಕೇರಿ ಮಡ್ಡಿಯಲ್ಲಿ ಗ್ರಾಮದಲ್ಲಿ ಹಲವು ದಿನಗಳಿಂದ ರಸ್ತೆಯಲ್ಲಿ ಕಸವನ್ನು ವಿಲೇವಾರಿ ಮಾಡದೆ ಹಾಗೆ ಬಿಟ್ಟಿದ್ದು,ರಸ್ತೆ ಯುದ್ದಕ್ಕೂ ಗಬ್ಬು ವಾಸನೆ ಬರುತ್ತಿದೆ .
ಅಧಿಕಾರಗಳ ಬೇಜವಾಬ್ದಾರಿತನದಿಂದ ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಅಲೆದಾಡುವ ಪರಿಸ್ಥಿತಿ ಅಥಣಿ ತಾಲೂಕಿನ ಚಮಕೇರಿ ಮಡ್ಡಿಯಲ್ಲಿ ಗ್ರಾಮದಲ್ಲಿ ಇದೆ . ಡೆಂಗ್ಯೂ ಪ್ರಕರಣಗಳು ದಿನದಿನಕ್ಕೆ ಹೆಚ್ಚು ಆಗ್ತಾ ಇದ್ರೂ ಸಹ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತ್ತೀದ್ದಾರೆ.

ಪಕ್ಕದಲ್ಲೇ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಆವರಣ ಪಕ್ಕದಲ್ಲಿ ಕಸದ ರಾಶಿ ತುಂಬಿದರು ಸಹ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯವನ್ನು ತೋರಿಸಿದ್ದಾರೆ.ಕಸದ ರಾಶಿ ಕ್ಲೀನ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು ಸಹ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎಂದು ಸ್ಥಳೀಯರು ಗ್ರಾಂ ಪಂ ಅಧಿಕಾರಿಯ ವಿರುದ್ಧ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ .

