Belagavi

ಹಿರೇಬಾಗೇವಾಡಿ ಟೋಲ್ ಗೆ ಸಂಸದ ಜಗದೀಶ್ ಶೆಟ್ಟರ್ ಭೇಟಿ ನೀಡಿ ಪರಿಶೀಲನೆ

Share

ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿಯ ಹಿರೇಬಾಗೇವಾಡಿ ಟೋಲ್ ಗೆ ಸಂಸದ ಜಗದೀಶ್ ಶೆಟ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು .
ಸಂಸದ ಜಗದೀಶ ಶೆಟ್ಟರ ಹಿರೇಬಾಗೇವಾಡಿಗೆ ಭೇಟಿ ನೀಡಿ, ಬಸವೇಶ್ವರ ವೃತ್ತ ಹಾಗೂ ಟೋಲ್ ನಾಕಾ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿ, ಸಂಸದರು ಸಂಚಾರಿ ಅಸುರಕ್ಷಿತ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಪೂನಾ,ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಬೆಳಗಾವಿ-ಬೈಲಹೊಂಗಲ್ ರಾಜ್ಯ ಹೆದ್ದಾರಿಗಳು ಇದೇ ಹಿರೇಬಾಗೇವಾಡಿ ಜನ ವಸತಿ ಪ್ರದೇಶಗಳಿರುವ ನಡುವೆ ಹಾಯ್ದು ಹೋಗುತ್ತವೆ ಹಾಗಾಗಿ ಈ ಬದಿಯಿಂದ ಆ ಬದಿಗೆ ಸಂಚರಿಸಲು ಸುರಕ್ಷಿತವಾದ ದಾರಿ ಇಲ್ಲ ಎಂಬವದನ್ನು ಮನವರಿಕೆ ಮಾಡಿಕೊಂಡರು.

ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ದಾಟಲು ನಾಗರೀಕರು, ಅಂಗನವಾಡಿ ಮಕ್ಕಳು, ವಿದ್ಯಾರ್ಥಿಗಳು, ಸರಕಾರಿ ಆಸ್ಪತ್ರೆ, ಆರಕ್ಷಕ ಠಾಣಿಗೆ ಬರುವ ಜನರು ನಿತ್ಯ ಅನುಭವಿಸುತ್ತಿರುವ ಸಂಚಾರಿ ಸಮಸ್ಯೆಗಳನ್ನು ಆಲಿಸಿದರು. ಸ್ಥಳದಲ್ಲಿಯೇ ಉಪಸ್ಥಿತರಿದ್ದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಟೋಲ್ ನಾಕಾ ಬಳಿ ತೆರಳಿ ಪರಿಶೀಲನೆ ನಡೆಸಿದರು.

Tags:

error: Content is protected !!