Belagavi

ಹಬ್ಬಗಳ ಖುಷಿಯನ್ನು ಇಮ್ಮಡಿಗೊಳಿಸಲು ಬೆಳಗಾವಿಯಲ್ಲಿ ಆರಂಭಗೊಂಡಿದೆ ‘ಹೈಟೆಕ್ ಮಹೋತ್ಸವ’

Share

ಶ್ರಾವಣಮಾಸ ಆರಂಭಗೊಳ್ಳುತ್ತಿದ್ದಂತೆ ಹಬ್ಬಗಳು ಆರಂಭಗೊಳ್ಳುತ್ತವೆ. ಹಬ್ಬಗಳನ್ನು ಖುಷಿಯನ್ನು ಮತ್ತಷ್ಟು ಇಮ್ಮಡಿಗೊಳಿಸಲು ಹೈಟೆಕ್ ಮೋಟಾರ್ಸ್ ಮತ್ತು ಅಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ ಗ್ರಾಹಕರಿಗಾಗಿ ತೆಗೆದುಕೊಂಡು ಬಂದಿದೆ ಸ್ಪೇಷಲ್ ಆಫರ್. ಆಗಸ್ಟ 1 ರಿಂದ ನವೆಂಬರ್ 30 ರ ವರೆಗೆ ಅತ್ಯಾಕರ್ಷಕ ಹೈಟೆಕ್ ಮಹೋತ್ಸವವನ್ನು ಹಮ್ಮಿಕೊಂಡಿದೆ.

ವರಮಹಾಲಕ್ಷ್ಮೀ, ಗಣೇಶೋತ್ಸವ, ದಸರಾ, ದೀಪಾವಳಿ ಹಬ್ಬದ ಖುಷಿಯನ್ನು ಇನ್ನಷ್ಟು ಹೆಚ್ಚಿಸಲು ಹೈಟೆಕ್ ಮೋಟಾರ್ಸ್ ಮತ್ತು ಅಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ ಗ್ರಾಹಕರಿಗಾಗಿ ತೆಗೆದುಕೊಂಡು ಬಂದಿದೆ ಸ್ಪೇಷಲ್ ಆಫರ್. ಆಗಸ್ಟ 1 ರಿಂದ ನವೆಂಬರ್ 30 ರ ವರೆಗೆ ಹೈಟೆಕ್ ಮಹೋತ್ಸವವನ್ನು ಹಮ್ಮಿಕೊಂಡು ಗೂಡ್ಸ್ ಮತ್ತು ಪ್ಯಾಸೆಂಜರ್ ಆಟೋ ರಿಕ್ಷಾ ಖರೀದಿಸಲು ಬಯಸುವ ಗ್ರಾಹಕರಿಗಾಗಿ ಅತ್ಯಾಕರ್ಷಕ ಕೊಡುಗೆಗಳೊಂದಿಗೆ ಹೊಸ ಹೊಸ ಪಿಯಾಜಿಯೋ ವಾಹನಗಳನ್ನು ಪರಿಚಯಿಸುತ್ತಿದೆ. ವಾಹನಗಳನ್ನು ಖರೀದಿಸುವವರಿಗೆ ಉಂಟಾಗುವ ಸಾಲದ ಸಮಸ್ಯೆಯನ್ನು ಕೂಡ ಸರಾಗವಾಗಿಸಲು ವಿವಿಧ ಬ್ಯಾಂಕಿಗಳು ಕೂಡ ಹೈಟೆಕ್ ಮೋರ್ಟಸನೊಂದಿಗೆ ಕೈ ಜೋಡಿಸಿವೆ. ಸುಲಭವಾಗಿ ಸಾಲವನ್ನು ನೀಡಲು ಸಹಕರಿಸುತ್ತಿವೆ.

ಎಸ್ ಬಿ ಐ ಬೆಳಗಾವಿ ಪ್ರಾದೇಶಿಕ ಕಾರ್ಯಾಲಯದ ಚೀಫ್ ಮ್ಯಾನೇಜರ್, ಸಂಜಯ ಗೌರಗೌಂಡಾ, ಶ್ರೀರಾಮ ಫೈನಾನ್ಸ್ ಬೆಳಗಾವಿಯ ಅಮೋಲ್ ಪಾಟೀಲ, ಹೈಟೆಕ್ ಮೋಟರ್ಸನ ಮ್ಯಾನೇಜಿಂಗ್ ಡೈರೆಕ್ಟರ್ ರಾಜೇಂದ್ರ ದೇಸಾಯಿ, ಸರ್ವೀಸ್ ಮ್ಯಾನೇಜರ್ ಬಸವರಾಜ್ ಹಿರೇಮಠ, ಸೇಲ್ಸ್ ಮ್ಯಾನೇಜರ್ ವಿಜಯಕುಮಾರ್ ಹತ್ತಿಯವರ ಸೇರಿದಂತೆ ಗಣ್ಯರ ಉಪಸ್ಥಿತಿಯಲ್ಲಿ ಶ್ರಾವಣ ಸೋಮವಾರ ಸಂಜೆ ಹೈಟೆಕ್ ಮಹೋತ್ಸವಕ್ಕೆ ಸಂಭ್ರಮದ ಚಾಲನೆ ದೊರೆಯಿತು.

ಈ ಬಾರಿ ಗ್ರಾಹಕರ ಹಬ್ಬಗಳ ಖುಷಿಯನ್ನು ಹೆಚ್ಚಿಸಿ ಅವರನ್ನು ಆರ್ಥಿಕವಾಗಿ ಸದೃಢಗೊಳಿಸಲು ಹೈಟೆಕ್ ಮೋಟರ್ಸ್ ಮುಂದಾಗಿದೆ. ಹೈಟೆಕ್ ಮಹೋತ್ಸವವನ್ನು ಆಯೋಜಿಸುವುದರ ಮೂಲಕ ಗ್ರಾಹಕರಿಗೆ ಹೊಸ ಹೊಸ ಮಾಡೆಲನ ವಾಹನಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಅಲ್ಲದೇ ಪ್ರತಿ ಖರೀದಿಯ ಮೇಲೂ ಖಚಿತ ಉಡುಗೊರೆಯನ್ನು ನೀಡಲಾಗುತ್ತಿದ್ದು. ಲಕ್ಕಿ ಡ್ರಾ ಕೂಪನ್ ಮತ್ತು ಸ್ಕ್ಯ್ರಾಚ್ ಮತ್ತು ವಿನ್ ಆಫರ್ ನೀಡುತ್ತಿದೆ. ಗ್ರಾಹಕರಿಗೆ ವಿಶ್ವಾಸನೀಯ ಸೇವೆ ನೀಡುವ ಹೈಟೆಕ್ ಉತ್ತರ ಭಾರತದಲ್ಲೇ ಬೆಸ್ಟ್ ಡೀಲರ್ ಅವಾರ್ಡನ್ನು ಪಡೆದುಕೊಂಡಿದೆ ಎಂದು ಹೈಟೆಕ್ ಮೋಟರ್ಸನ ಮ್ಯಾನೇಜಿಂಗ್ ಡೈರೆಕ್ಟರ್ ರಾಜೇಂದ್ರ ದೇಸಾಯಿ ಸಂತಸ ವ್ಯಕ್ತಪಡಿಸಿದರು.

ವಾಹನ ಖರೀದಿಸಲು ಎದುರಾಗುವ ಸಾಲದ ಸಮಸ್ಯೆಯನ್ನು ಕೂಡ ನೀಗಿಸಲಾಗುತ್ತಿದೆ. ಅತ್ಯಂತ ಕಡಿಮೆ ಕಾಗದ ಪತ್ರಗಳೊಂದಿಗೆ, ಅತ್ಯಂತ ಕಡಿಮೆ ಸಮಯದಲ್ಲಿ ಸಾಲವನ್ನು ನೀಡಲು ಬ್ಯಾಂಕುಗಳು ಕೂಡ ಗ್ರಾಹಕರಿಗೆ ನೆರವಾಗಲಿವೆ ಎಂದು ತಮ್ಮ ಬ್ಯಾಂಕಿನ್ ಸಾಲದ ಕುರಿತು ಎಸ್ ಬಿ ಐ ಬೆಳಗಾವಿ ಪ್ರಾದೇಶಿಕ ಕಾರ್ಯಾಲಯದ ಚೀಫ್ ಮ್ಯಾನೇಜರ್, ಸಂಜಯ ಗೌರಗೌಂಡಾ ಮತ್ತು ಶ್ರೀರಾಮ ಫೈನಾನ್ಸ್ ಬೆಳಗಾವಿಯ ಅಮೋಲ್ ಪಾಟೀಲ ಅವರು ತಿಳಿಸಿದರು.

ಪಿಯಾಜಿಯೋ ಕಂಪನಿ ಮೊದಲು ಸಣ್ಣ ಪ್ರಮಾಣದಲ್ಲಿ ವಾಹನಗಳನ್ನು ತಯಾರಿಸುತ್ತಿತ್ತು. ಆದರೇ ಈಗ ಹೆಚ್ಚಿನ ಪ್ರತಿ ತಿಂಗಳು 15 ರಿಂದ 30 ಸಾವಿರಕ್ಕೂ ಹೆಚ್ಚು ವಾಹನಗಳನ್ನು ತಯಾರಿಸಲಾಗುತ್ತಿದೆ. ಕಂಪನಿಯ ಈ ಏಳ್ಗೆಗೆ ಗ್ರಾಹಕರ ಬೇಡಿಕೆಯೇ ಕಾರಣ ಮತ್ತು ಗ್ರಾಹಕರ ಬೇಡಿಕೆಗೆ ನಮ್ಮ ವಿಶ್ವಾಸನೀಯ ಸೇವೆಯೇ ಕಾರಣ. ಹೈಟೆಕ್ ಮೋಟರ್ಸ್ ಆಯೋಜಿಸಿರುವ ಈ ಹೈಟೆಕ್ ಮಹೋತ್ಸವದ ಸದುಪಯೋಗ ಪಡೆದುಕೊಳ್ಳಬೇಕೆಂದು ಸೇಲ್ಸ್ ಮ್ಯಾನೇಜರ್ ವಿಜಯಕುಮಾರ್ ಹತ್ತಿಯವರ ಕರೆ ನೀಡಿದರು.

ಆಟೋ ರಿಕ್ಷಾ ಸಂಘದ ಪ್ರಮುಖರಾದ ಅಬ್ದುಲ್ ದುಬೈವಾಲೆ ಅವರು ಹೈಟೆಕ್ ಮೋಟರ್ಸನ ಕಾರ್ಯವನ್ನು ಪ್ರಶಂಸಿಸಿ, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ತಮ್ಮ ಆರ್ಥಿಕಮಟ್ಟವನ್ನು ಸುಧಾರಿಸಿಕೊಂಡು ಡೀಲರ್ ಮತ್ತು ಕಂಪನಿಯ ಕೀರ್ತಿಯನ್ನು ಹೆಚ್ಚಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಪಿಜಿಓ ಸಿನಿಯರ್ ಮೆಕ್ಯಾನಿಕ್ ಹನೀಫ್ ಉನತವಾಲೆ, ಪಿಯಾಜಿಯೋ ಎಪಿಇ ಗ್ರಾಹಕರಾದ ಝಾಕೀರ್ ಹುಸೇನ್ ನದಾಫ್ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು. ಹಾಗಾದರೇ ತಡವೇಕೆ ಬೆಳಗಾವಿ ಮತ್ತು ಬಾಗಲಕೋಟೆಯ ಗ್ರಾಹಕರು ಈಗಲೇ ತ್ವರೆ ಮಾಡಿ. ಹಬ್ಬಗಳ ವೇಳೆ ಹೊಸ ವಾಹನಗಳನ್ನು ತಮ್ಮದಾಗಿಸಿಕೊಂಡು ತಮ್ಮ ಖುಷಿಯನ್ನು ಇನ್ನಷ್ಟು ಇಮ್ಮಡಿಗೊಳಿಸಿಕೊಳ್ಳಿ.

Tags:

error: Content is protected !!