ಬೆಳಗಾವಿಯ ಗಣೇಶೋತ್ಸವದ ಅಂಗವಾಗಿ ಮಾರ್ಕೇಟ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಗಳ ಸಭೆ ಕರೆಯಲಾಗಿತ್ತು.
ಬುಧವಾರದಂದು ಮಾರ್ಕೇಟ್ ಪೊಲೀಸ್ ನಿರೀಕ್ಷಕ ಎಂ.ಕೆ. ಧಾಮಣ್ಣನವರ, ಉಪನಿರೀಕ್ಷಕ ವಿಠ್ಠಲ ಹಾವನ್ನವರ ಅವರ ಉಪಸ್ಥಿತಿಯಲ್ಲಿ ಬೆಳಗಾವಿಯ ಗಣೇಶೋತ್ಸವದ ಅಂಗವಾಗಿ ಮಾರ್ಕೇಟ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಗಳ ಸಭೆ ಕರೆಯಲಾಗಿತ್ತು.
ಈ ವೇಳೆ ಮಾರ್ಕೇಟ್ ಪೊಲೀಸ್ ನಿರೀಕ್ಷಕ ಎಂ.ಕೆ. ಧಾಮಣ್ಣನವರ ಅವರು ಜನರಿಗೆ ತೊಂದರೆಯಾಗದಂತೆ ಮಂಟಪ ಮತ್ತು ಕಮಾನುಗಳ ನಿರ್ಮಾಣ ಮಾಡಬೇಕೆಂದು ಸೂಚಿಸಿದರು. ಅಲ್ಲದೇ ಅನುಮತಿ ಪಡೆಯಲು ಏಕಗವಾಕ್ಷಿ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಈ ವೇಳೆ ಲೋಕಮಾನ್ಯ ಟಿಳಕ ಶ್ರೀ ಗಣೇಶೋತ್ಸವ ಮಹಾಮಂಡಳದ ಅಧ್ಯಕ್ಷ ವಿಜಯ ಜಾಧವ ಅವರು ಈ ಬಾರಿ ಮೆರವಣಿಗೆಯನ್ನು ಸಮಯದ ಮಿತಿಯೊಳಗೆ ಮುಗಿಸಲು ಎಲ್ಲ ಮಂಡಳಗಳ ಸಭೆ ಕರೆಯಲಾಗುವುದೆಂದು ತಿಳಿಸಿದರು.
ರಣಜೀತ್ ಚವ್ಹಾಣ ಪಾಟೀಲ, ಸುನೀಲ ಜಾಧವ, ರೋಹಿತ್ ರಾವಳ, ರಾಜಕುಮಾರ ಖಟಾವಕರ, ಆನಂದ ಆಪ್ಟೇಕರ, ಸಂತೋಷ ಕಣೇರಿ, ಸಂಜಯ ನಾಯಿಕ, ಜ್ಯೋತಿಬಾ ಪವಾರ, ವಿನಾಯಕ ಬಾವಡೇಕರ ಸೇರಿದಂತೆ ಸುಮಾರು 70 ಕ್ಕೂ ಹೆಚ್ಚು ಪದಾಧಿಕಾರಿಗಳು ಭಾಗಿಯಾಗಿದ್ಧರು.