ಮಾನವ ಕಳ್ಳ ಸಾಗಾಟ ತಡೆ ಗಟ್ಟುವದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಹುಕ್ಕೇರಿ ಹಿರಿಯ ನ್ಯಾಯಾಧಿಶ ಕೆ ಎಸ್ ರೊಟ್ಟೆರ ಹೇಳಿದರು.
ತಾಲೂಕ ಕಾನೂನು ಸೇವಾ ಸಮಿತಿ ನ್ಯಾಯವಾದಿಗಳ ಸಂಘ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಅಂತರಾಷ್ಟ್ರೀಯ ಬಾಪೂಜೆ ಶಿಕ್ಷಣ ಸಂಸ್ಥೆ ಹುಕ್ಕೇರಿ ಮತ್ತು ಸರ್ಕಾರಿ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಾನವ ಕಳ್ಳ ಸಾಗಣಿಕೆ ತಡೆ ದಿನಾಚಾರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಭಾರತದ ಸಂವಿದಾನದಲ್ಲಿ ಮಾನವ ಕಳ್ಳ ಸಾಗಾಟ ಬಹುದೊಡ್ಡ ಅಪರಾಧ ವಾಗಿದೆ ಕಾರಣ ನಾವೆಲ್ಲರೂ ಒಟ್ಟಾಗಿ ಈ ಕಳ್ಳ ಸಾಗಾಟ ತಡೆಯುವದು ಅವಶ್ಯವಾಗಿದೆ, ಯುವಕರಲ್ಲಿ ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ಅಪರಾಧ ತಡೆ ಜಾಗ್ರತೆ ಮೂಡಿಸಲಾಗುತ್ತಿದೆ ಎಂದರು.
ವೇದಿಕೆ ಮೇಲೆ ಪ್ರಾಚಾರ್ಯ ಬಸವ ಪಾಟೀಲ್ , ಶ್ರೀಮತಿ ಸುರೇಖಾ ಪಾಟೀಲ್ ಮಹಿಳಾ ಅಭಿವೃದ್ಧಿ ಇಲಾಖೆ ಅಧಿಕಾರಿ ಹೊಳೆಪ್ಪಾ ಎಚ್, ಪೋಲಿಸ್ ಇನ್ಸಪೇಕ್ಟರ ಮಹಾಂತೇಶ ಬಸಾಪುರೆ, ಅಪರ ಸರ್ಕಾರಿ ವಕೀಲ ಎ ಸಿ ಕರೋಶಿ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಬಿ ಎಂ ಜನರಾಳಿ, ಕಾರ್ಯದರ್ಶಿ ಎಸ್ ಜಿ ನದಾಫ್ , ಜಂಟಿ ಕಾರ್ಯದರ್ಶಿ ವಿ ಎಲ್ ಗಸ್ತಿ ಜಂಟಿ, ಅಂಬರೀಶ್ ಬಾಗೆವಾಡಿ , ಶ್ರೀಮತಿ ಎ ಬಿ ಕುಲಕರ್ಣಿ , ಬಿಬಿ ಬಾಗಿ ಮತ್ತು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.