Events

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಗೆ ಹೈಕಮಾಂಡ್ ನಾಯಕರ ನಿರ್ಧಾರಗಳೇ ಕಾರಣ – ಡಾ.ಪ್ರಭಾಕರ ಕೋರೆ

Share

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಗೆ ಹೈಕಮಾಂಡ್ ನಾಯಕರ ನಿರ್ಧಾರಗಳೇ ಕಾರಣ ಎಂದು ಡಾ.ಪ್ರಭಾಕರ ಕೋರೆ ಆಕ್ರೋಶ ಹೊರಹಾಕಿದರು .
ರಾಮದುರ್ಗದಲ್ಲಿ ನಡೆದ ನೂತನ ಸಂಸದ ಜಗದೀಶ ಶೆಟ್ಟರ್ ಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಪ್ರಭಾಕರ ಕೋರೆ ಮಹಾದೇವಪ್ಪ ಯಾದವಾಡ ಅವರಂತಹ ಹಲವರಿಗೆ ಟಿಕೆಟ್ ಕೊಡದೆ ದೂರವಿಟ್ಟಿದ್ದರಿಂದಲೇ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರದೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವಂತಾಯಿತು ಎಂದ ಅವರು, ಇಡೀ ಉತ್ತರ ಕರ್ನಾಟಕದ ಶಕ್ತಿ ತೋರಿಸುವ ತಾಕತ್ತು ಮಹಾದೇವಪ್ಪ ಯಾದವಾಡ ಅವರಲ್ಲಿದೆ. ಅವರನ್ನು ದೂರವಿಟ್ಟಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬರಲಿಲ್ಲ.

ಸರಕಾರ ಮಾಡಬೇಕೆಂದರೆ ಮಹಾದೇವಪ್ಪ ಯಾದವಾಡ ಅವರಂತವರನ್ನು ಹತ್ತಿರ ಇಟ್ಟುಕೊಳ್ಳಬೇಕು. ಅವರನ್ನು ಮೊದಲಿನಿಂದಲೂ ನಾನು ನೋಡುತ್ತಿದ್ದೇನೆ. ಆದರೆ ಯಾಕೆ ಟಿಕೆಟ್ ತಪ್ಪಿಸಲಾಯಿತು ಎನ್ನುವುದು ಈಗ ಬೇಡ, ಮುಂದೊಮ್ಮೆ ಹೇಳೋಣ ಎಂದು ಡಾಕ್ಟರ್ .ಪ್ರಭಾಕರ ಕೋರೆ ಆಕ್ರೋಶ ಹೊರಹಾಕಿದರು .

Tags:

error: Content is protected !!