ಫೋನ್‌ಗಾಗಿ ರಸ್ತೆ ಪಕ್ಕದಲ್ಲೇ ಯುವಕ, ಯುವತಿ ಜಗಳ ಮಾಡಿಕೊಂಡಿದ್ದು, ಅದು ಸಾರ್ವಜನಿಕ ಸಭ್ಯತೆ ಮೀರಿದಾಗ ಯುವಕನಿಗೆ ಸಾರ್ವಜನಿಕರೇ ಗೂಸಾ ನೀಡಿರುವ ಘಟನೆ ಕೊಪ್ಪಿಕರ್ ರಸ್ತೆಯ ರೆಮೆಂಡ್ ಶೋ ರೂಂನಲ್ಲಿ ನಡೆದಿದೆ.

ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ರಸ್ತೆ ಪಕ್ಕದಲ್ಲಿ ನಿಂತು ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ. ಫೋನ್ ಕೊಡು ಎಂದು ಹುಡುಗ ಪೀಡಿಸಿದ್ದು, ಆಕೆ ಕೊಡದೆ ಹೋದಾಗ ಆಕೆಯ ಕೊರಳಿಗೆ ಸ್ಕಾರ್ಫ್ ಸುತ್ತು ಹಾಕಿ ಯುವಕ ಎಳೆದಾಡಿದ್ದಾನೆ.
ಲವರ್ ಬಾಯ್‌ನ ಈ ಕೃತ್ಯ ನೋಡಿದ ಸ್ಥಳೀಯರು ರೊಚ್ಚಿಗೆದ್ದು ಮಧ್ಯಪ್ರವೇಶಿಸಿದ್ದಾರೆ. ನಮ್ಮ ಮಧ್ಯೆ ನೀವು ಬಂದಿದ್ದೇಕೆ ಎಂದು ಉಡಾಫೆಯಿಂದ ಹುಡುಗ ಉತ್ತರಿಸಿದಾಗ ಸಿಟ್ಟಾದ ಸಾರ್ವಜನಿಕರು ಯುವಕನಿಗರ ಚೆನ್ನಾಗಿ ಗೂಸಾ ಕೊಟ್ಟಿದ್ದಾರೆ. ಸಾರ್ವಜನಿಕ ಸಭ್ಯತೆ ಪಾಲಿಸಿ ಎಂದು ಪಾಠ ಹೇಳಿದ್ದಾರೆ. ಲವರ್ಸ್ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ.