ರಾಜ್ಯದಲ್ಲಿ ಮೈಕ್ರೋ ಫೈನ್ಸಾನ್ ನ ಹಾವಳಿಗೆ ಹಾಗೂ ಅವರ ತೊಂದರೆಗೆ ಜನತೆ ರೋಸಿ ಹೋಗಿದ್ದಾರೆ. ಮೈಕ್ರೋ ಫೈನ್ಸಾನ್ ಸಾಲ ವಸೂಲಾತಿ ಸಿಬ್ಬಂದಿಯ ಅಟ್ಟಹಾಸ, ದಬ್ಬಾಳಿಕೆಗೆ ಅದೆಷ್ಟೋ ಜನ ಊರು ಬಿಟ್ಟಿದ್ದಾರೆ. ಅಷ್ಟೇ ಅಲ್ಲದೇ ಪ್ರಾಣವನ್ನು ತೆತ್ತಿದ್ದಾರೆ. ಇದೀಗ ವಿಜಯಪುರ ಜಿಲ್ಲೆಯಲ್ಲಿಯೂ ಮೈಕ್ರೊ ಫೈನ್ಸಾನ್ ನ ಸಿಬ್ಬಂದಿಯ ಅಟ್ಟಹಾದ ಮೀತಿ ಮೀರಿದೆ. ಸಿಬ್ಬಂದಿ ಕುಡಿದು ಗೂಂಡಾ ವರ್ತನೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಕುರಿತು ಇಲ್ಲಿದೆ
ಸಾಲ ಯಾರಿಗೆ ಇಲ್ಲಾ ಹೇಳಿ. ತಿರುಪತಿ ತಿಮ್ಮಪ್ಪನಿಗೆ ಸಾಲ ಇದೆ. ಸಂಸಾರದ ಕಷ್ಟ ನೀಗಿಸಲು ಸಾಲ ಮಾಡಲೇಬೇಕು. ಹೀಗೆ ಮಹಿಳೆಯರಿಗೆ ಸಾಲ ಕೊಡಲು ಕಡಿಮೆ ಬಡ್ಡಿದರ, ಹಾಗೂ ಆಕರ್ಷಕ ಕಂತುಗಳ ಆಸೆ ತೋರಿಸಿ ಸಾಲ ತೆಗೆದುಕೊಳ್ಳುವ ಹಾಗೆ ಮಾಡುವದರಲ್ಲಿ ಮೈಕ್ರೋ ಫೈನಾನ್ಸ್ ನವರು ಮುಂದೆ ಬರುತ್ತಾರೆ. ಸಾಲವನ್ನು ನೀಡುತ್ತಾರೆ. ಒಂದು ಕಂತು ಮಿಸ್ ಆದ್ರೆ ಸಾಕು ಇವರು ರಾಕ್ಷಸಂತೆ ವರ್ತಿಸುತ್ತಾರೆ. ರಾಜ್ಯದಲ್ಲಿ ಇದೀಗ ಮೈಕ್ರೋ ಫೈನಾನ್ಸ್ ನ ಹಾವಳಿಗೆ ಅದೆಷ್ಟೋ ಜನ ಊರು ಬಿಟ್ಟಿದ್ದಾರೆ. ಮಾನ ಮರ್ಯಾದೆಗೆ ಹೆದರಿ ಪ್ರಾಣ ಬಿಟ್ಟಿದ್ದಾರೆ. ಇತ್ತ ವಿಜಯಪುರದಲ್ಲಿಯೂ ಮೈಕ್ರೋ ಪೈನಾನ್ಸ್ ಹಾವಳಿ ಮಿತಿ ಮೀರಿದೆ. ಕುಡಿದ ನಶೆಯಲ್ಲಿ ಫೈನಾನ್ಸ್ ಸಿಬ್ಬಂದಿ ಹಣ ವಸೂಲಿಗೆ ಇಳಿದಿದ್ದಲ್ಲದೇ ಕುಡಿದು ಬಂದು ಮನೆ ಎದುರು ಗಲಾಟೆ ಮಾಡಿರುವ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಅಂಜುಮನ್ ಗಲ್ಲಿಯಲ್ಲಿ ಘಟನೆ ನಡೆದಿದೆ. ಸಕ್ಷಮ್ ಗ್ರಾಮ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಅಕ್ಷಯ ಹಂಜಗಿ, ಶಿರಾಜ್ ಮುಜಾವರ್ ರಿಂದ ಗಲಾಟೆ ಮಾಡಿರುವ ವಿಡಿಯೋ ಇದೀಗ ಸೊಶಿಯಲ್ ಮಿಡಿಯಾ ದಲ್ಲಿ ವೈರಲ್ ಆಗಿದೆ. ಸಿಬ್ಬಂದಿಯ ಈ ವರ್ತನೆ ಆಕ್ರೋಶಕ್ಕೆ ಕಾರಣವಾಗಿದೆ.
ಇಂಡಿ ಪಟ್ಟಣದ ಫರಹಾನಾ ಬಾಗವಾನ್ ಎಂಬುವರ ಮನೆಯಲ್ಲಿ ಫೈನಾನ್ಸ್ ಸಿಬ್ಬಂದಿ ಗಲಾಟೆ ನಡೆದಿದೆ. ಸಕ್ಷಮ್ ಗ್ರಾಮ ಫೈನಾನ್ಸ್ ನಿಂದ ಫರಹಾನಾ ಅತ್ತೆ ಶೈರಾಬಾನು 45 ಸಾವಿರ ಸಾಲ ಪಡೆದಿದ್ದರು. ಅವರು ಕಳೆದ ಕೆಲದಿನಗಳಿಂದ ಅನಾರೋಗ್ಯದಿಂದ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಒಂದು ಕಂತು ಮಿಸ್ ಆಗಿದ್ದಕ್ಕೆ ಮನೆಗೆ ಬಂದು ಗಲಾಟೆ ಮಾಡಿದ್ದಲ್ಲದೆ ಅಶ್ಲೀಲವಾಗಿ ಬೈದು ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಅತ್ತೆ ಆಸ್ಪತ್ರೆಯಲ್ಲಿ ಇದ್ದಾರೆ ಎಂದು ಹೇಳಿದ್ರು ಕೇಳದ ಫೈನಾನ್ಸ್ ಸಿಬ್ಬಂದಿಯಿಂದ ಗೂಂಡಾ ವರ್ತನೆ
ತೋರಿದ್ದಾರೆ. ಅಲ್ಲದೇ ಮನೆಯಲ್ಲಿ ಹೆಣ್ಣು ಮಕ್ಕಳಿದ್ದಾಗ ಕುಡಿದು ಬಂದು ಗಲಾಟೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಫೈನಾನ್ಸ್ ಸಿಬ್ಬಂದಿ ವರ್ತನೆಗೆ ಕುಟುಂಬಸ್ಥರು ಗಾಭರಿಬಿದ್ದಿದ್ದಾರೆ. ಫೈನಾನ್ಸ್ ಹಾವಳಿಗೆ ಈಗ ಕುಟುಂಬವೆ ಕಂಗಾಲಾಗಿದೆ.
ಒಟ್ನಲ್ಲಿ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಾದಾಗಿರಿ ಮುಂದುವರಿದಿದೆ. ಆಗಿರುವ ಅನಾಹುತಗಳಿಂದ ಎಚ್ಚೆತ್ತುಕೊಂಡು ರಾಜ್ಯ ಸರ್ಕಾರ ಹೊಸ ಕಾನೂನು ತರಲು ಮುಂದಾಗಬೇಕಿದೆ.
ವಿಜಯಕುಮಾರ ಸಾರವಾಡ,
ಇನ್ ನ್ಯೂಜ್,
ವಿಜಯಪುರ.