Agriculture

ವಿವಿಧ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿದ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ …

Share

 

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕಲ್ಲೂರು ಮತ್ತು ಮರಡಿನಾಗಲಾಪುರ ಗ್ರಾಮಗಳಿಗೆ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಭೇಟಿ ನೀಡಿ ವಿವಿಧ ರೈತರ ಕ್ಷೇತ್ರಗಳಿಗೆ ರೈತರು ಬೆಳೆದಿರುವ ಬೆಳೆ ಪ್ರಾತ್ಯಕ್ಷಿಕೆಗಳ ಪರಿಶೀಲನೆ ಸಾಮೂಹಿಕ ತೊಗರಿ ಬಿತ್ತನೆಗೆ ಚಾಲನೆ ಯಾಂತ್ರಿಕೃತ ಕೀಟನಾಶಕ ಸಿಂಪರಣೆ ಪ್ರತ್ಯೇಕ್ಷಿತ ಹಾಗೂ ಬೆಳೆ ಸಮೀಕ್ಷೆ ಹಾಗೂ ಬೆಳೆ ವಿಮೆ ಪ್ರಚಾರ ವಾಹನಗಳಿಗೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಕೃಷಿ ಸಚಿವರಿಗೆ ತಾಲೂಕಿನ ರೈತ ಮುಖಂಡರಿಂದ ಸನ್ಮಾನ ಕಾರ್ಯಕ್ರಮ ಕೂಡ ನಡೆಯಿತು

ಮಾತನಾಡಿದ ಕೃಷಿ ಸಚಿವರು ರೈತರಿಗೆ ಬೇಕಾಗುವಂತ ಎಲ್ಲಾ ಕೃಷಿ ಸಲಕರಣೆಗಳನ್ನು ನಮ್ಮ ಸರ್ಕಾರ ನೀಡುತ್ತಿದೆ
ಮೊದಲ ಹಂತದ ಬೆಳೆ ಪರಿಹಾರ ಕೂಡ ನೀಡಿದ್ದೇವೆ . ಕಿತ್ತೂರು ಮತ್ತು ಬೈಲಹೊಂಗಲ ಕ್ಷೇತ್ರಕ್ಕೆ ರೈತರಿಗೆ ಬೇಕಾಗುವ ಎಲ್ಲ ಸೌಲಭ್ಯವನ್ನು ಒದಗಿಸಿಕೊಡುತ್ತೇವೆ ಎಂದು ರೈತರಿಗೆ ಭರವಸೆ ನೀಡಿದರು. ರೈತರು ಕೃಷಿ ಸಚಿವರಿಗೆ ತಮ್ಮ ತಾಲೂಕಿನಲ್ಲಿ ಹಾಗೂ ಜಿಲ್ಲೆಯಲ್ಲಿ ಇರುವಂತ ಸಮಸ್ಯೆಗಳ ಬಗ್ಗೆ ಹವಾಲುಗಳನ್ನು ಮತ್ತು ಮನವಿಗಳನ್ನು ನೀಡಿದರು.

ಇದೇ ವೇಳೆ ನೂರಕ್ಕೂ ಹೆಚ್ಚಿನ ಕೃಷಿ ಕಾರ್ಮಿಕರು ಸಹ ಏಕ ಕಾಲದಲ್ಲಿ ತೊಗರಿ ಬಿತ್ತನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಇದೇ ಸಂದರ್ಭದಲ್ಲಿ ಕಿತ್ತೂರು ಕ್ಷೇತ್ರದ ಶಾಸಕರ ಪತ್ನಿಯಾದ ರೋಹಿಣಿ ಬಾಬಾ ಸಾಹೇಬ್ ಪಾಟೀಲ್ ಹಾಗೂ ಬೈಲಹೊಂಗಲ ತಾಲೂಕಿನ AC ಪ್ರಭಾವತಿ ಪಕಿರಪುರ ಕೂಡ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು

Tags:

error: Content is protected !!